ಪ್ಯಾರಾಚೂಟ್ ನಿಜವಾಗಿಯೂ ʼ100% ಶುದ್ಧತೆಯ ಎಣ್ಣೆಯೇ? ಆತಂಕ ಹುಟ್ಟಿಸಿದ ವಿಡಿಯೋ
ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ತೆಂಗಿನ ಎಣ್ಣೆಯನ್ನು ಬಳಸುತ್ತಾರೆ. ಹಾಗಾದ್ರೆ ಮಾರ್ಕೆಟ್‌ನಲ್ಲಿ ಸಿಗುವ ʼ100% ಶುದ್ಧತೆಯ ಎಣ್ಣೆʼ ಎಂದು ಹೇಳಿಕೊಳ್ಳುವ ಎಲ್ಲವೂ ನಿಜವಾಗಿಯೂ 100% ಶುದ್ಧವಾಗಿರುತ್ತದೆಯೇ? ಎಂಬ ಪ್ರಶ್ನೆ ಇದೀಗ ಜನರಲ್ಲಿ ಮೂಡಿದೆ. ಇದರ ಕುರಿತಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ಲಾಗಿದೆ. ಅದರಲ್ಲೂ ವಿಶೇಷವಾಗಿ ಇದಕ್ಕೆ ಉತ್ತರಿಸಿದ ಅಂಬರೀಶ್ ಬಾಳಿಗಾ ಅವರ ಪ್ರತಿಕ್ರಿಯೆ ಕುತೂಹಲ ಮೂಡಿಸುತ್ತಿದೆ.
ಅಂಬರೀಶ್ ಬಾಳಿಗಾ ಅವರು ಹಲವು ವರ್ಷಗಳಿಂದ ತೆಂಗಿನ ಎಣ್ಣೆಯ ಉತ್ಪಾದಕಾ ಘಟಕದಲ್ಲಿ ಕಾರ್ಯ ನಿರ್ವಹಿಸಿರುವುದಾಗಿ ಹೇಳಿಕೊಂಡಿದ್ದಾರೆ. “ನನ್ನ ಬಳಿ ತೆಂಗಿನ ಎಣ್ಣೆಯ ಉತ್ಪಾದಕ ಘಟಕವಿದೆ. ಇದು, ನೂರಾ ಹತ್ತು ವರ್ಷಕ್ಕಿಂತಲೂ ಹಿಂದಿನದು. ಇಷ್ಟು ವರ್ಷಗಳ ಕಾಲ ಗುಣಮಟ್ಟವನ್ನು ಕಾಯ್ದುಕೊಂಡಿದ್ದಕ್ಕಾಗಿ ನಾವು ಹೆಮ್ಮ ಪಡುತ್ತೇವೆ. ಆದರೆ, ವಿಂಗಡಣೆ, ಪ್ಯಾಕಿಂಗ್‌ನಂತಹ ವೆಚ್ಚವನ್ನು ಬದಿಗಿಟ್ಟೂ ಸಹ ಉತ್ಪಾದನೆಗೆ ಬೀಳುವುದಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ತೆಂಗಿನ ಎಣ್ಣೆ ಮಾರಾಟವಾಗುತ್ತಿದೆ. ಇದರ ಜೊತೆ ಮಾರುಕಟ್ಟೆಯಲ್ಲಿ ನಾವು ಸ್ಪರ್ಧಿಸುವುದು ಕಷ್ಟವಾಗುತ್ತಿದೆ” ಎಂದು ಅಂಬರೀಶ್ ಬಾಳಿಗಾ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.
“ಕೊಬ್ಬರಿಯ ಬೆಲೆ ಪ್ರಸ್ತುತ ಸುಮಾರು ಕೆ.ಜಿಗೆ 240 ರೂ. 1,000 ಕೆ.ಜಿ ಕೊಬ್ಬರಿಯಿಂದ ಸುಮಾರು 650 ಲೀಟರ್ ಶುದ್ಧ ಎಣ್ಣೆಯನ್ನು ತಯಾರಿಸಬಹುದು. ಇದರಿಂದಾಗಿ ಲೀಟರ್‌ಗೆ 370 ರೂ ವೆಚ್ಚ ಬೀಳುತ್ತದೆ.
“ಪ್ರತಿ ಲೀಟರ್‌ಗೆ ಬೆಲೆ 370 ರೂ. ಉಳಿದ ಎಲ್ಲಾ ಖರ್ಚುಗಳನ್ನ ಕೂಡಿಸಿದರೆ (ಮಾರಾಟ ಮತ್ತು ಮಾರುಕಟ್ಟೆಯನ್ನು ಹೊರತುಪಡಿಸಿ) ಲೀಟರ್‌ಗೆ 390-400 ರೂಪಾಯಿ ಆಗುತ್ತದೆ. ಈ ದರಕ್ಕಿಂದ ಕಡಿಮೆ ದರದಲ್ಲಿ ಮಾರಾಟ ಮಾಡುವ ಯಾರಾದರೂ ಅನುಮಾನ ವ್ಯಕ್ತಪಡಿಸಬೇಕು” ಎಂದು ಅಂಬರೀಶ್ ಬಾಳಿಗಾ ಹೇಳಿದ್ದಾರೆ.
ಇದನ್ನೂ ಓದಿ: ಹೋಮ್ ರೆಮಿಡಿ ಹಚ್ಚಿಸಿಕೊಂಡು ಸ್ನಾನಕ್ಕಿಳಿದ ಶ್ವಾನ! ವಿಡಿಯೋ ವೈರಲ್
“ಈ ದರಕ್ಕಿಂತ ಕಡಿಮೆ ಮಾರಾಟ ಮಾಡಲಾಗುತ್ತಿದೆ ಅಂದರೆ, ಏನಾಗುತ್ತಿದೆ ಎಂಬುದರ ಕುರಿತಾಗಿ ನೀವು ಅರ್ಥಮಾಡಿಕೊಳ್ಳಬೇಕು…” ಎಂದು ಹೇಳಿದ್ದಾರೆ.
ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪ್ಯಾರಾಚೂಟ್ ʼ100% ಶುದ್ಧ ತೆಂಗಿನ ಎಣ್ಣೆʼ ಬಗ್ಗೆ ಕಳವಳ ವ್ಯಕ್ತಪಡಿಸಿದ ವೈರಲ್ ವಿಡಿಯೋಗೆ ಅಂಬರೀಶ್ ಬಾಳಿಗಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋದಲ್ಲಿ ಕಾಣುವಂತೆ, ಬಾಟಲಿಯ ಎದುರು ʼ100% ಶುದ್ಧ ತೆಂಗಿನ ಎಣ್ಣೆʼ ಎಂದು ತೋರಿದರೂ ಬಾಟಲಿಯ ಹಿಂಭಾಗದಲ್ಲಿ ಯಾವ ಪದಾರ್ಥಗಳನ್ನು ಬಳಸಲಾಗಿದೆ ಎಂಬ ವಿವರವನ್ನು ತೋರಿಸುತ್ತದೆ.
ಬಾಳಿಗಾ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಇತರರೂ ಸಹ ತಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ. “ಹೀಗಾಗುತ್ತಿರುವುದರಿಂದಲೇ ನಾವು ಸ್ವತಃ ಕೊಬ್ಬರಿ ಎಣ್ಣೆಯನ್ನ ರೆಡಿ ಮಾಡಿಕೊಳ್ಳುತ್ತೇವೆ” ಎಂದು ಓರ್ವರು ಹೇಳಿದ್ದಾರೆ.
ಹಾಗೆಯೇ ಮತ್ತೋರ್ವರು, ʼಬೆಲೆ ಏರಿಕೆಗೆ ಕಾರಣವೇನು?ʼ ಎಂದು ಕೇಳಿದ ಪ್ರಶ್ನೆಗೆ ಬಾಳಿಗೆ ಉತ್ತರಿಸಿದ್ದು, ʼಹವಾಮಾನ ಬದಲಾವಣೆ, ಇಳುವರಿ ಕುಸಿತ, ತೋಟಗಳು ಹಳೆಯದಾಗುತ್ತಿರುವುದು, ಜೊತೆಗೆ ಜನರಲ್ಲಿ ಮೂಡಿರುವ ಆರೋಗ್ಯದ ಕಾಳಜಿಯಿಂದ ಬೇಡಿಕೆ ಹೆಚ್ಚಾಗಿದೆ” ಎಂದು ಹೇಳಿದ್ದಾರೆ.



