Shiradi: ಬಯಲಾಯ್ತು ಬಾಬಾ ರಹಸ್ಯ, ಈವರೆಗಿನ ಸುಳ್ಳಿಗೆ ಫುಲ್‌ ಸ್ಟಾಪ್!!

ಭಾರತದಲ್ಲಿ ಅತೀ ಹೆಚ್ಚು ಭಕ್ತರನ್ನು ಹೊಂದಿರುವ ದೇವರುಗಳ ಸಾಲಲ್ಲಿ ಬಹುಷಃ  5-6 ನೇ ಸಾಲಿನಲ್ಲಿ ಸಾಯಿಬಾಬಾ ಕಾಣಿಸಿಕೊಳ್ಳಬಹುದು. ಅವರ ಭಕ್ತರು ಕೋಟ್ಯಾಂತರ ಸಂಖ್ಯೆಯಲ್ಲಿ ಭಾರತಾದ್ಯಂತ ಇದ್ದಾರೆ. ಸಾಯಿ ಬಾಬಾರ ಪ್ರಸಿದ್ಧ ಮಂದಿರ ಶಿರಡಿ ಹೇಗೆ ಪ್ರಸಿದ್ಧವೋ ಹಾಗೆಯೇ ಆಗಾಗ ವದಂತಿಗೂ ಈಡಾಗಿದ್ದುಂಟು ಈಗ ಅಂತಹದ್ದೇ ಒಂದು ಅಪವಾದ ಸಾಯಿ ಟ್ರಸ್ಟ್ ಗೆ ಬಂದಿದ್ದು ಗಾಳಿಮಾತಿನ ಅಸಲಿಯತ್ತೇನು? ತಿಳಿಯೋಣ ಬನ್ನಿ

ಬಾಬಾ ಅವರದ್ದು ಸಮಾಧಿಯೋ?‌ ಗೋರಿಯೋ?

ಮೊದಲಿಗೆ ಅತೀ ಹೆಚ್ಚು ವಿವಾದಕ್ಕೆ ಈಡಾಗಿದ್ದು ಬಾಬಾ ಅವರ ಸಮಾಧಿ ಒಂದು ಗೋರಿಯಾಗಿದೆ ಎಂಬ ವಾದ. ಆದರೆ ಅದಕ್ಕೆ ಬಾಬಾ ಅವರ ಸಮಾಧಿ ಚಿತ್ರಣವೇ ಒಂದು ನಿರ್ಣಯ ಕೊಡುತ್ತದೆ. ಪ್ರಭಾವಳಿಯಲ್ಲಿ ದಶಾವತಾರ, ಸೂರ್ಯ, ಚಂದ್ರ ಆನೆಗಳು ಹಾಗೆಯೇ ‘ಅಶ್ವಿನಿ ನಕ್ಷತ್ರದಲ್ಲಿ ಬಾಬಾ ಸಮಾಧಿ ಸೇರಿದರು’ ಎಂಬ ಬರಹ ನಂತರದಲ್ಲಿ ಎದುರಿಗೇ ಇರುವ ನಂದಿ ಮೇಲ್ಭಾಗದ ಗಣೇಶ ಇದು ಪಕ್ಕಾ ಹಿಂದೂ ದೇಗುಲ ಎಂಬುದನ್ನು ಸಾಧಿಸುತ್ತದೆ.

ಸಾಯಿ ದೇಗುಲದಲ್ಲಿ ಇರೋ ದೇವರುಗಳ ಗುಡಿ!

ಅದರಲ್ಲೂ ಕೂಡ ದೇಗುಲದ ಪ್ರಾಂಗಣದಲ್ಲಿ ಶಿವ, ಆಂಜನೇಯ, ಗಣೇಶ, ಶನಿ ದೇಗುಲಗಳಿದ್ದು ಇವೆಲ್ಲವನ್ನೂ ಬಾಬಾ ಅವರೇ ತಮ್ಮ ಕೈಯಿಂದ ಜೀರ್ಣೋದ್ದಾರ ಮಾಡಿದ್ದಾರೆ. ಅದಕ್ಕೆ ದಾಖಲೆಗಳೂ ಸಹ ಇವೆ.

ಇದನ್ನೂ ಓದಿ: 1000 ಟನ್‌ ಗೂ ಅಧಿಕ ಸೂಪರ್‌ ಜೈಂಟ್‌ ಚಿನ್ನ ಲಭ್ಯ https://kannada.newsnext.live/business/geologist-discover-1000-ton-gold-in-china/

ಸಾಯಿ ಮಂದಿರದ ವಾರ್ಷಿಕ ಕಲೆಕ್ಷನ್ ಗೊತ್ತೇ?!

ಸಾಯಿ ಬಾಬಾ ಅವರ ಮಂದಿರದಲ್ಲಿ ಪ್ರತೀ ವರ್ಷ ಕಲೆಕ್ಷನ್ ಆಗೋ ಹಣದ ಮೊತ್ತ 900-1000 ಕೋಟಿ ರೂಪಾಯಿ, ಈ ಹಣ ಹಾಗೂ ದೇಗುಲಕ್ಕೆ ಬರುವ ಇನ್ನಿತರ ಕಾಣಿಕೆಗಳು ದೇವಾಲಯವನ್ನು ಭಾರತದ 6 ನೇ ಶ್ರೀಮಂತ ದೇಗುಲವಾಗಿಸಿದೆ. ಈಗ ಎರಡು ಮುಖ್ಯವಾದ ಅಪವಾದ ದೇಗುಲದ ಮೇಲೆ ಬಂದಿದ್ದವು ಅದೇನೆಂದರೆ ಇಲ್ಲಿ ಹಣ ಎಣಿಕೆಯನ್ನು ಮುಸ್ಲಿಂರು ಮಾಡುತ್ತಾರೆ ಎಂಬುದು, ಮತ್ತು ಆ ಕುರಿತಾಗಿ ಫೋಟೊ ವೈರಲ್ ಆಗಿದ್ದು!

ವೈರಲ್ ಫೋಟೋ ಸತ್ಯಾಸತ್ಯತೆ ಏನು?

ಅದಕ್ಕೆ ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಗೋರಕ್ಷ ಗಡಿಕರ್ ಅವರು ಸ್ಪಷ್ಟೀಕರಣ ನೀಡಿದ್ದಾರೆ. ವೈರಲ್ ಮಾಡಿರುವ ಫೋಟೋವು ಬಾಂಗ್ಲಾದೇಶದ್ದಾಗಿದ್ದು, ನಮ್ಮಲ್ಲಿ ಹಣ ಎಣಿಕೆ ದೇಗುಲದ ಸ್ಟಾಫ್ ನಿಂದ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯುತ್ತದೆ, ಆಗ ಬ್ಯಾಂಕಿನವರು ಹಾಗೆಯೇ ಪೊಲೀಸ್ ಸಿಬ್ಬಂದಿ ಹಾಜರಿರುತ್ತಾರೆ‌. ವೈರಲ್ ಆದ ಫೋಟೋ ರೀತಿಯ ಯಾವುದೇ ಅವಕಾಶ ಇಲ್ಲಿ ಇಲ್ಲ ಎಂದಿದ್ದಾರೆ.

35 ಅಲ್ಲ ಒಂದು ಬಿಡಿಗಾಸೂ ನೀಡಿಲ್ಲ ಎಂದ ಟ್ರಸ್ಟ್!

ಹಾಗೆಯೇ ಮುಂದುವರೆದು ಹಜ್ ಗೆ 35 ಕೋಟಿ ಕೊಟ್ಟ ವದಂತಿ ಬಗ್ಗೆಯೂ ಪ್ರತಿಕ್ರಿಯಿಸಿ ಶಿರಡಿ ಸಾಯಿ ಟ್ರಸ್ಟ್ ಮಹಾರಾಷ್ಟ್ರ ಸರ್ಕಾರದ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ನಿರ್ಧಾರಗಳು ಮತ್ತು ಹಣಕಾಸು ವಹಿವಾಟುಗಳು ಬಾಂಬೆ ಹೈಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ನಡೆಯುತ್ತವೆ. ಟ್ರಸ್ಟ್‌ನ ಸಂವಿಧಾನವು (constitution) ತನ್ನ ನಿಧಿಯನ್ನು ಹಜ್‌ನಂತಹ ನಿರ್ದಿಷ್ಟ ಧಾರ್ಮಿಕ ಚಟುವಟಿಕೆಗಳಿಗೆ (ಧಾರ್ಮಿಕ ಸಂಸ್ಥೆಗೆ ನೇರವಾಗಿ) ಬಳಸಲು ಅವಕಾಶ ನೀಡುವುದಿಲ್ಲ.

ನಿಮಮಗಳು ಏನು ಹೇಳುತ್ತವೆ?

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80G ಅಡಿಯಲ್ಲಿ, ಟ್ರಸ್ಟ್ ತನ್ನ ಒಟ್ಟು ಆದಾಯದ 5% ವರೆಗೆ ಮಾತ್ರ ಸೀಮಿತ ಧಾರ್ಮಿಕ ಚಟುವಟಿಕೆಗಳಿಗೆ ಬಳಸಬಹುದು, ಆದರೆ ₹35 ಕೋಟಿ ದೇಣಿಗೆ ನೀಡುವಂತಹ ಅವಕಾಶವಿಲ್ಲ ಎಂದು ಹೇಳಿದ್ದಾರೆ. ಒಟ್ಟಾರೆ ಕಲಿಗಾಲದಲ್ಲಿ ಅಪವಾದ ಬಾಬಾಗೂ ಬಿಟ್ಟಿಲ್ಲ ಎನ್ನಬಹುದಾದರೂ ಸುಳ್ಳು ಎಷ್ಟೇ ಹರಡಿದರೂ ಸತ್ಯ ಪರಿಣಾಮಕಾರಿ ಎಂಬುದನ್ನು ಈ ಘಟನೆ ಸಾಬೀತು ಪಡಿಸುತ್ತದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories