ಐಫೋನ್ಗಳನ್ನು ಖರೀದಿ ಮಾಡೋದು ಒಂದು ರೀತಿಯಲ್ಲಿ ಟ್ರೆಂಡ್ ಎಂಬಂತೆ ಆಗಿಬಿಟ್ಟಿದೆ. ಆಫರ್ಗಳು ಬಂದಾಗೆಲ್ಲ ಐಫೋನ್ಗಳು ಹಾಟ್ಕೇಕ್ನಂತೆ ಸೇಲ್ ಆಗಿ ಬಿಡುತ್ತವೆ. ಇದೀಗ ಐಫೋನ್ 13 (iphone 13) ಕೂಡ ಅದೇ ರೀತಿ ಮಾರಾಟವಾಗ್ತಿದೆ. ಪ್ರತಿಷ್ಠಿತ ಆನ್ಲೈನ್ ಮಾರುಕಟ್ಟೆ ವೇದಿಕೆಗಳ ಪೈಕಿ ಒಂದಾದ ಅಮೆಜಾನ್ ದೀಪಾವಳಿ ಸೇಲ್ (Amazon Diwali sale) ಹಬ್ಬದ ಪ್ರಯುಕ್ತ ಆಫರ್ ಬಿಟ್ಟಿದೆ. ಹೀಗಾಗಿ ಐಫೋನ್ 13 ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

ಈ ಸೇಲ್ ಇಂದೇ ಕೊನೆಗೊಳ್ಳಲಿದ್ದು ಅತೀ ಕಡಿಮೆ ದರದಲ್ಲಿ ಆ್ಯಪಲ್ ಫೋನ್ ಮಾಲೀಕರಾಗುವ ಸದಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಹಾಗಾದರೆ ಎಷ್ಟು ರೂಪಾಯಿಗೆ ಐಫೋನ್ 13 ಲಭ್ಯವಿದೆ..? ಐಫೋನ್ 13ನ ವೈಶಿಷ್ಟ್ಯವೇನು ಅನ್ನೋದ್ರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಐಫೋನ್ 13 ಮೊಬೈಲ್ ಪ್ರಸ್ತುತ ಭಾರೀ ರಿಯಾಯಿತಿ ದರದೊಂದಿಗೆ ಲಭ್ಯವಿದೆ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಇಂದಿಗೆ ಕೊನೆಯಾಗುತ್ತಿದ್ದು ಐಫೋನ್ 13 ಮೊಬೈಲ್ನ್ನು ಕೇವಲ 50,498 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಐಫೋನ್ 15 ಸಿರೀಸ್ ಬಿಡುಗಡೆಯಾದ ಬಳಿಕ ಆಪಲ್ ಸ್ಟೋರ್ಗಳಲ್ಲಿ ಐಫೋನ್ 13 ಫೋನ್ 59990 ರೂಪಾಯಿಗೆ ಲಭ್ಯವಿದೆ. ಆದರೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ನಲ್ಲಿ ನಿಮಗೆ ಐಫೋನ್ 13 ಸ್ಮಾರ್ಟ್ಫೋನ್ ನಿಮಗೆ 9402 ರೂಪಾಯಿಗಳ ರಿಯಾಯಿತಿ ದರದಲ್ಲಿ ಸಿಗಲಿದೆ.
ಇದನ್ನೂ ಓದಿ : ಹೊಸ ಮೊಬೈಲ್ ಖರೀದಿಸುವ ಆಲೋಚನೆಯಲ್ಲಿದ್ದೀರೇ..? : ಈ ಮೊಬೈಲ್ ಪರಿಶೀಲಿಸೋದನ್ನ ಮರೀಬೇಡಿ
ಇದು ಮಾತ್ರವಲ್ಲದೇ ಆಯ್ದ ಬ್ಯಾಂಕ್ ಕಾರ್ಡ್ಗಳ ಮೇಲೆ ಹೆಚ್ಚುವರಿ 2000 ರೂಪಾಯಿಗಳ ರಿಯಾಯಿತಿ ಕೂಡ ಸಿಗಲಿದೆ. ಇದರ ಜೊತೆಯಲ್ಲಿ ನೀವು ಫೋನ್ ವಿನಿಮಯ ಮಾಡುವ ಆಯ್ಕೆಯನ್ನು ಆಯ್ಕೆ ಮಾಡಿಕೊಂಡರೂ ಕೂಡ ನಿಮಗೆ ಇನ್ನೂ ಹೆಚ್ಚಿನ ರಿಯಾಯಿತಿ ಸಿಗಲಿದೆ. ಹಳೆಯ ಫೋನ್ ವಿನಿಮುಯ ಹಾಗೂ ಅಲ್ಲಿ ಸೂಚಿಸಲಾದ ಬ್ಯಾಂಕ್ ಕಾರ್ಡ್ ನಿಮ್ಮ ಬಳಿ ಇದ್ದರೆ ನೀವು ಐಫೋನ್ನ್ನು ಇನ್ನೂ ಕಡಿಮೆ ದರದಲ್ಲಿ ಖರೀದಿ ಮಾಡಬಹುದಾಗಿದೆ

ಏನಿಲ್ಲವೆಂದರೂ ನಿಮಗೆ 14 ಸಾವಿರ ರೂಪಾಯಿಗಳಷ್ಟು ರಿಯಾಯಿತಿ ದರದಲ್ಲಿ ಐಫೋನ್ 13 ಸ್ಮಾರ್ಟ್ ಫೋನ್ ಸಿಗಲಿದೆ. ಐಫೋನ್ 13 ಐಫೋನ್ 14 ಸ್ಮಾರ್ಟ್ಫೋನ್ನಂತೆಯೇ ಇದೆ. ಭಾರತದಲ್ಲಿ ಪಸ್ತುತ ಇದು 57,999 ರೂಪಾಯಿಗೆ ಮಾರಾಟವಾಗುತ್ತಿದೆ. ಐಫೋನ್ 13ನ ಕ್ಯಾಮರಾ, ಡಿಸ್ಪ್ಲೇ, ಬ್ಯಾಟರಿ ಹಾಗೂ ಚಿಪ್ಸೆಟ್ ಐಫೋನ್ 14ಗೆ ಸಾಕಷ್ಟು ಸಾಮ್ಯತೆಗಳನ್ನು ಹೊಂದಿದೆ.
ಇದನ್ನೂ ಓದಿ : ಸಿಮ್ ಇಲ್ಲದೆಯೂ ಇನ್ಮೇಲೆ ವಾಟ್ಸಾಪ್ ಲಾಗಿನ್ ಆಗಬಹುದು : ಅದ್ಹೇಗೆ ಅಂತೀರಾ..? ಇಲ್ಲಿದೆ ಮಾಹಿತಿ
ಎರಡೂ ಫೋನ್ಗಳ ವಿನ್ಯಾಸ ಕೂಡ ಒಂದೇ ರೀತಿ ಇದೆ. ಐಫೋನ್ 11 ಬಿಡುಗಡೆ ಬಳಿಕ ಆಪಲ್ ಕಂಪನಿಯು ಹೆಚ್ಚು ಕಮ್ಮಿ ಒಂದೇ ಮಾದರಿ ವಿನ್ಯಾಸ ಸ್ಮಾರ್ಟ್ ಫೋನ್ಗಳನ್ನು ಮಾರುಕಟ್ಟೆಗೆ ತರುತ್ತಿದೆ. ಐಫೋನ್ 13 ಸ್ಮಾರ್ಟ್ಫೋನ್ ಬ್ಯಾಟರಿಯು ಒಳ್ಳೆಯ ಕಾರ್ಯಕ್ಷಮತೆಯನ್ನು ಹೊಂದಿದೆ. ಒಂದು ದಿನಗಳ ಕಾಲ ಬ್ಯಾಟರಿ ಕಾರ್ಯಕ್ಷಮತೆ ಹೊಂದಿದೆ

ಅಂದಹಾಗೆ ನಿಮಗೆ ಸ್ಮಾರ್ಟ್ಫೋನ್ನೊಂದಿಗೆ ಯಾವುದೇ ಚಾರ್ಜರ್ ಸಿಗುವುದಿಲ್ಲ. ಮೊಬೈಲ್ ಸ್ಕ್ರೀನ್ ಕೂಡ ಉತ್ತಮ ಕ್ಲಾರಿಟಿ ಹೊಂದಿದೆ.ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಇಂದಿಗೆ ಕೊನೆಯಾಗುತ್ತಿದೆ. ಹೀಗಾಗಿ ಇಂದೇ ನೀವು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು . ಒಂದು ವೇಳೆ ನೀವು ಕೂಡ ಐಫೋನ್ ಲವರ್ಸ್ ಆಗಿದ್ದರೆ ಖಂಡಿತವಾಗಿಯೂ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಅತೀ ಕಡಿಮೆ ದರದಲ್ಲಿ ಐಫೋನ್ 13 ಮಾಲೀಕರಾಗಿ.
ಇದನ್ನೂ ಓದಿ : ₹ 10,000ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ 50MP ಕ್ಯಾಮೆರಾ 6000mAh ಬ್ಯಾಟರಿ ಸ್ಮಾರ್ಟ್‌ಪೋನ್ : ಅಮೆಜಾನ್ ಸೇಲ್ ನಲ್ಲಿ ಭರ್ಜರಿ ಆಫರ್
iphone 13 avilable at flat r 9402 discount offer Amazon Diwali sale ends tomorrow