ಗೃಹಲಕ್ಷ್ಮೀ ಫಲಾನುಭವಿಗಳ ಖಾತೆಗೆ 4000 ರೂ : ಗುಡ್‌ನ್ಯೂಸ್‌ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Gruha Lakshmi Scheme Updates : ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಗೃಹಿಣಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಅಪ್‌ಡೇಟ್ಸ್‌ ಕೊಟ್ಟಿದ್ದಾರೆ. ಗೃಹಿಣಿಯರ ಖಾತೆಗೆ 4000 ರೂಪಾಯಿ ಜಮೆ ಆಗಲಿದೆ.

ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ದೊಡ್ಡ ಮೊತ್ತದ ಅನುದಾನವನ್ನು ಹರಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಜೂನ್ ತಿಂಗಳ ಹಣವನ್ನು ಇನ್ನೊಂದು ವಾರದಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.

ಹಣಕಾಸು ವರ್ಷದ ಮುಕ್ತಾಯದ ಕಾರಣದಿಂದ ಮಾರ್ಚ್ ತಿಂಗಳ ಕಂತಿನ ಪಾವತಿಯಲ್ಲಿ ವಿಳಂಬವಾಗಿತ್ತು, ಆದರೆ ಏಪ್ರಿಲ್ ಕಂತು ಸಿದ್ಧವಾಗಿದೆ ಮತ್ತು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಅವರು ಈ ಹಿಂದೆ ಹೇಳಿದ್ದರು.

ಕೆಲವು ಫಲಾನುಭವಿಗಳಿಗೆ ಜನವರಿ, ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಬಾಕಿ ಕಂತುಗಳು ಬಾಕಿ ಇದ್ದು, ಅವುಗಳನ್ನು ಶೀಘ್ರದಲ್ಲೇ ಜಮಾ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆಯೇ ಎಂದು ಪರಿಶೀಲಿಸಲು, ಕರ್ನಾಟಕ ಸರಕಾರದ ahara.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ ಕಾಣಿಸುವ ‘DBT Status’ ಲಿಂಕ್‌ ಕ್ಲಿಕ್‌ ಮಾಡಿ.

Also Read : ಅತೀ ಕಡಿಮೆ ಬಡ್ಡಿದರ : ಗೃಹಸಾಲ ಪಡೆಯೋಕೆ ಈ ಬ್ಯಾಂಕ್ ಬೆಸ್ಟ್‌

Gruha Lakshmi Scheme Updates : ಒಟ್ಟು ಎಷ್ಟು ಕಂತುಗಳು ಬಾಕಿ ಇವೆ ?

ಯೋಜನೆ ಪ್ರಾರಂಭವಾದ ಆಗಸ್ಟ್ 2023 ರಿಂದ ಪ್ರತಿ ತಿಂಗಳು ಹಣ ಜಮಾ ಆಗಬೇಕಿತ್ತು. 2025 ರ ಜೂನ್ ತಿಂಗಳವರೆಗೆ 23 ಕಂತುಗಳು ಪೂರ್ಣಗೊಂಡಿರಬೇಕು.

ಆದರೆ, ಕೆಲವು ತಾಂತ್ರಿಕ ಕಾರಣಗಳಿಂದ ಮತ್ತು ಪ್ರಸಕ್ತ ಹಣಕಾಸು ವರ್ಷದ ಅಡಿಯಲ್ಲಿ ಹಣಕಾಸು ನಿರ್ವಹಣೆಯಿಂದಾಗಿ ಕೆಲ ಫಲಾನುಭವಿಗಳಿಗೆ ಒಂದು, ಎರಡು ಅಥವಾ ಮೂರು ಕಂತುಗಳು ಬಾಕಿ ಉಳಿದಿದೆ.

ಕರ್ನಾಟಕ ಸರಕಾರ ಬಾಕಿ ಕಂತುಗಳನ್ನು ಹಂತ ಹಂತವಾಗಿ ಪಾವತಿಸುತ್ತಿದೆ. 2025ರ ಮೇ ತಿಂಗಳಿನಲ್ಲಿ 20ನೇ ಮತ್ತು 21ನೇ ಕಂತುಗಳ ಹಣ (₹4000) ಕೂಡ ಕೆಲವು ಫಲಾನುಭವಿಗಳ ಖಾತೆಗೆ ಜಮಾ ಆಗಿದೆ.

ನಿಮ್ಮ ಹಣ ಜಮಾ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ ?

ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ:

ಸೇವಾ ಸಿಂಧು ಗೆ ಭೇಟಿ ನೀಡಿ : https://sevasindhugs.karnataka.gov.in/ ಗೃಹಲಕ್ಷ್ಮೀ ಆಯ್ಕೆ ಕ್ಲಿಕ್‌ ಮಾಡಿ

ಆಹಾರ ಇಲಾಖೆಯ ವೆಬ್‌ಸೈಟ್: ahara.kar.nic.in ಗೆ ಭೇಟಿ ನೀಡಿ. ‘DBT Status ಅನ್ನೋ ಲಿಂಕ್ ಕ್ಲಿಕ್ ಮಾಡಿ,

DBT ಕರ್ನಾಟಕ ಮೊಬೈಲ್ ಅಪ್ಲಿಕೇಶನ್: ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಸ್ಟೇಟಸ್ ಪರಿಶೀಲಿಸಬಹುದು.

ಬ್ಯಾಂಕ್ ಖಾತೆ ಪರಿಶೀಲಿಸಿ: ನಿಮ್ಮ ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್ ಅಥವಾ SMS ಅಲರ್ಟ್‌ಗಳನ್ನು ಪರಿಶೀಲಿಸಿ.

ಯಾವುದೇ ವಿಳಂಬವಾಗಿದ್ದರೂ, ಸರ್ಕಾರ ಹಣವನ್ನು ಪಾವತಿಸಲು ಬದ್ಧವಾಗಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ. ನೀವು ಅರ್ಹ ಫಲಾನುಭವಿಯಾಗಿದ್ದರೆ, ನಿಮ್ಮ ಬಾಕಿ ಹಣ ಶೀಘ್ರದಲ್ಲೇ ಜಮಾ ಆಗುವ ನಿರೀಕ್ಷೆ ಇರಿಸಬಹುದು.

Also Read : ಆಧಾರ್‌ ಕಾರ್ಡ್‌ ಬಳಸಿ, ನಿಮ್ಮ ಹೆಸರಲ್ಲಿ ಎಷ್ಟು ಮಂದಿ ಸಾಲ ಪಡೆದಿದ್ದಾರೆ ? ಹೀಗೆ ಚೆಕ್‌ ಮಾಡಿ

Gruha Lakshmi Scheme Updates Good News Rs 4000 ti beneficiaries accounts in Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories