NIA Raid : ಕರ್ನಾಟಕದ ಕಾಂಗ್ರೆಸ್ ಸರಕಾರದ ವಿರುದ್ದ ಶಾಸಕ ಸುನಿಲ್ ಕುಮಾರ್ ವಾಗ್ದಾಳಿ

ಬೆಂಗಳೂರು: ಕರ್ನಾಟಕದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಕರ್ನಾಟಕದ ಕಾಂಗ್ರೆಸ್ ಸರಕಾರದ ವಿರುದ್ದ ಕಾರ್ಕಳ ಶಾಸಕರಾದ ವಿ.ಸುನಿಲ್ ಕುಮಾರ್ (MLA Karkala Sunil Kumar) ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಹದಗೆಟ್ಟ ಕಾನೂನು ವ್ಯವಸ್ಥೆಯಿಂದಾಗಿ ರಾಜ್ಯ ಅನಭಿವೃದ್ದಿಯ ಕೂಪದಲ್ಲಿ ಮುಳುವುದರ ಸಂಕೇತ ಎಂದು ಟೀಕಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸುನಿಲ್ ಕುಮಾರ್ ಅವರು, ಎನ್‌ಐಎ ದಾಳಿ ಕರ್ನಾಟಕದ ಕಾನೂನು ಸುವ್ಯವಸ್ಥೆ ಮತ್ತು ಗೃಹ ಇಲಾಖೆಯ ದಕ್ಷತೆ ಪಾತಾಳಕ್ಕೆ ತಲುಪಿರುವುದನ್ನು ಬಯಲು ಮಾಡಿದೆ ಎಂದು ಟೀಕಿಸಿದ್ದಾರೆ.
ಸರಕಾರಿ ನೌಕರರೇ, ಅದರಲ್ಲೂ ವಿಶೇಷವಾಗಿ ಪೊಲೀಸ್ ಇಲಾಖೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮತ್ತು ಕಾರಾಗೃಹದ ಸಿಬ್ಬಂದಿಗಳು ಅಂತಾರಾಷ್ಟ್ರೀಯ ಭಯೋತ್ಪಾದಕರೊಂದಿಗೆ ಕೈ ಜೋಡಿಸಿ ಸದ್ದಿಲ್ಲದೇ ಉಗ್ರ ಚಟುವಟಿಕೆಗಳಿಗೆ ಪೋಷಣೆ ನೀಡಿರುವುದು ಆತಂಕಕಾರಿ. ಇದು ಸರ್ಕಾರದ ‘ಟೆರರ್ ಸಾಫ್ಟ್ ಕಾರ್ನರ್’ ಧೋರಣೆಯ ಪ್ರತಿಬಿಂಬ ಎಂದು ಆರೋಪಿಸಿದ್ದಾರೆ.
MLA Karkala Sunil Kumar : ಗೃಹ ಇಲಾಖೆಯ ಸಿಬ್ಬಂದಿಯಿಂದ ಉಗ್ರರಿಗೆ ಸಹಕಾರ ಆರೋಪ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಲಷ್ಕರ್ ಉಗ್ರ ಹಾಗೂ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಪಾಷಾ ಎಂಬ ಭಯೋತ್ಪಾದಕನಿಗೆ ಗೃಹ ಇಲಾಖೆಯ ಸಿಬ್ಬಂದಿಯೇ ಸಹಕಾರ ನೀಡುತ್ತಿದ್ದರೂ, ರಾಜ್ಯದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಸುಮ್ಮನೆ ಕುಳಿತಿತ್ತೇ ಎಂದು ಸುನೀಲ್ ಕುಮಾರ್ ಪ್ರಶ್ನಿಸಿದರು.
ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಕಣ್ಣೆದುರೇ ಇಂತಹ ಘಟನೆಗಳು ನಡೆಯುತ್ತಿದ್ದರೂ, ರಾಜ್ಯ ಪೊಲೀಸರು ಕೈಕಟ್ಟಿ ಕುಳಿತಿದ್ದು ನಾಚಿಕೆಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
Also Read : ಇಕೆವೈಸಿ ಮಾಡಿಸದ ಪಡಿತರ ಕಾರ್ಡು ರದ್ದು
ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಈ ಸಂಗ್ರಾಮದಲ್ಲಿ ರಾಜ್ಯದ ಭವಿಷ್ಯವನ್ನು ಸ್ಫೋಟಗೊಳಿಸಬೇಡಿ, ಕಿಂಚಿತ್ತಾದರೂ ಜವಾಬ್ದಾರಿ ತೋರಿ ಎಂದು ಸುನೀಲ್ ಕುಮಾರ್ ಆಗ್ರಹಿಸಿದರು.
ಪೊಲೀಸರ ಕಾರ್ಯದಕ್ಷತೆ ಬಗ್ಗೆಯೇ ಪ್ರಶ್ನೆ
ಭಯೋತ್ಪಾದಕ ಸಂಘಟನೆಗಳೊಂದಿಗಿನ ನಂಟು, ಹಿಂದೂ ಕಾರ್ಯಕರ್ತರ ಹತ್ಯೆ ಸೇರಿದಂತೆ ಜಿಹಾದಿಗಳ ಪ್ರತ್ಯಕ್ಷ ಮತ್ತು ಪರೋಕ್ಷ ಕೈವಾಡ ಇರುವ ಪ್ರಕರಣ ಬೇಧಿಸಲು ರಾಜ್ಯ ಪೊಲೀಸರಿಗೆ ಏಕೆ ಸಾಧ್ಯವಾಗುತ್ತಿಲ್ಲ ?
ಪ್ರತಿ ಬಾರಿಯೂ ಎನ್‌ಐಎ ಅಧಿಕಾರಿಗಳು ಈ ಷಡ್ಯಂತ್ರವನ್ನು ಬಯಲಿಗೆಳೆಯುತ್ತಿದ್ದಾರೆ ಎಂದರೆ, ಸರ್ಕಾರ ರಾಜ್ಯ ಪೊಲೀಸರ ಕೈ ಕಟ್ಟಿ ಹಾಕಿದೆಯೇ ? ರಾಜ್ಯ ಭಯೋತ್ಪಾದನಾ ನಿಗ್ರಹ ದಳವನ್ನು ಸರ್ಕಾರ ಯಾವ ಕೆಲಸಕ್ಕೆ ಬಳಸಿಕೊಳ್ಳುತ್ತಿದೆ ಎಂದು ಅವರು ಪ್ರಶ್ನಿಸಿದರು.
Also Read : ಉಚಿತ ಬಸ್ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಕಡ್ಡಾಯ : ಜಾರಿಯಾಯ್ತು ಹೊಸ ರೂಲ್ಸ್
ನಕ್ಸಲ್ ಮತ್ತು ಭಯೋತ್ಪಾದನಾ ನಿಗ್ರಹದಳಗಳ ನಿಷ್ಕ್ರಿಯ
ಸಿಎಂ ಸಿದ್ದರಾಮಯ್ಯನವರ ಗೃಹ ಕಚೇರಿಯಲ್ಲೇ ಬುಡಮೇಲು ಕೃತ್ಯದಲ್ಲಿ ಭಾಗಿಯಾದ ನಕ್ಸಲರಿಗೆ ಶರಣಾಗತಿ ಪ್ಯಾಕೇಜ್ ನೀಡಿ, ನಕ್ಸಲ್ ನಿಗ್ರಹ ಪಡೆಯ ಬಲವನ್ನು ಕಡಿಮೆ ಮಾಡಿದಂತೆ, ಭಯೋತ್ಪಾದಕ ನಿಗ್ರಹ ಹಾಗೂ ಆಂತರಿಕ ಭದ್ರತಾ ದಳವನ್ನೂ (ಐಎಸ್‌ಡಿ) ಸಿದ್ದರಾಮಯ್ಯನವರು ನಿಷ್ಕ್ರಿಯಗೊಳಿಸಿದ್ದಾರೆಯೇ ಎಂದು ಸುನೀಲ್ ಕುಮಾರ್ ಪ್ರಶ್ನಿಸಿದರು
ತಮಗೆ ಮತ ನೀಡಿದ ‘ಬಾಂಧವರು’ ಕುಪಿತಗೊಳ್ಳುತ್ತಾರೆ ಎಂಬ ಕಾರಣಕ್ಕೆ ‘ಬಾಂಬ್’ ಸ್ಫೋಟಿಸುವ ಆರೋಪಿಗಳಿಗೆ ಕಾರಾಗೃಹದಲ್ಲೂ ಸೌಲಭ್ಯ ಒದಗಿಸಲಾಗುತ್ತಿದೆಯೇ?” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಓಲೈಕೆ ರಾಜಕಾರಣಕ್ಕೆ ಬಾಬರ್ ಕಾಯ್ದೆ…!
ಹಿಂದೂ ಕಾರ್ಯಕರ್ತರನ್ನು ಮಟ್ಟ ಹಾಕುವುದಕ್ಕಾಗಿ “ದ್ವೇಷಭಾಷಣ” ಮುಂತಾದ “ಬಾಬರ್ ಕಾಯ್ದೆ” ಜಾರಿಗೆ ತರಲು ಹವಣಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಗೃಹ ಇಲಾಖೆಯ ಕಣ್ಣೆದುರೇ ನಡೆಯುವ ಉಗ್ರ ಕೃತ್ಯಗಳು ಕಾಣುವುದಿಲ್ಲವೇ ? ಕೇವಲ ಓಲೈಕೆಗಾಗಿ ಕರ್ನಾಟಕ ರಾಜ್ಯದ ಕಾನೂನು ಸುವ್ಯವಸ್ಥೆಗೆ ‘ಟೈಮ್ ಬಾಂಬ್’ ಇಡುವ ಪ್ರಯತ್ನವನ್ನು ಮೂಕಪ್ರೇಕ್ಷಕರಂತೆ ನೋಡಬೇಡಿ ಎಂದು ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
NIA raid in Bengaluru MLA Karkala Sunil Kumar attacks state government in Kannada News



