ಕಾರ್ಕಳ: ಲಾರಿ ಸಿಲುಕಿಕೊಂಡ ವಿಚಾರಕ್ಕೆ ಗಲಾಟೆ; ರೀಪಿನಿಂದ ಹಲ್ಲೆ ನಡೆಸಿ ವ್ಯಕ್ತಿಗೆ ತೀವ್ರ ಗಾಯ, ಕೇಸ್ ದಾಖಲು
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಕುಂಟಾಡಿಯಲ್ಲಿ ನಡೆದಿದೆ. ದಾಳಿಗೆ ಒಳಗಾದವರನ್ನು ಕಲ್ಯಾ ಗ್ರಾಮದ ನಿವಾಸಿ ಓಬಯ್ಯ ಪೂಜಾರಿ ಎಂದು ತಿಳಿದು ಬಂದಿದೆ. ಗಾಯಾಳುವನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಕಳ: ಕಲ್ಲು ಕೋರೆಗೆ ತೆರಳುತ್ತಿದ್ದ ಲಾರಿಯೊಂದು ಹೂತು ಹೋದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಘಟನೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಕುಂಟಾಡಿಯಲ್ಲಿ ನಡೆದಿದೆ. ದಾಳಿಗೆ ಒಳಗಾದವರನ್ನು ಕಲ್ಯಾ ಗ್ರಾಮದ ನಿವಾಸಿ ಓಬಯ್ಯ ಪೂಜಾರಿ ಎಂದು ತಿಳಿದು ಬಂದಿದೆ. ಗಾಯಾಳುವನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿದರು
ಜುಲೈ 2 ರಂದು ಸಂಜೆ 7 ಗಂಟೆಯ ಸುಮಾರಿಗೆ ಕಲ್ಯಾ ಗ್ರಾಮದ ಕುಂಟಾಡಿ ಎಂಬಲ್ಲಿ ಕಲ್ಲು ಕೋರೆಗೆ ಹೋಗುವ ಲಾರಿಯೊಂದು ಹೂತುಹೋಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಸತೀಶ ಓಬಯ್ಯ ಪೂಜಾರಿ ಹಾಗೂ ಆರೋಪಿ ಸುರೇಂದ್ರ ರೈ ಎಂಬುವವರ ಲಾರಿ ಹೂತು ಹೋಗಿರುವ ಕಾರಣಕ್ಕೆ ಗಲಾಟೆ ನಡೆದಿದೆ. ಈ ವೇಳೆಯಲ್ಲಿ ಆರೋಪಿ ಸುರೇಂದ್ರ ರೈ ಸತೀಶ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ರಾತ್ರಿ ವೇಳೆ ಮತ್ತೆ ಬಂದು ರೀಪಿನಿಂದ ರಕ್ತ ಬರುವಂತೆ ಹಲ್ಲೆ
ಈ ಜಗಳ ಅಷ್ಟಕ್ಕೇ ನಿಲ್ಲದೆ, ರಾತ್ರಿ 8:15 ರ ಸುಮಾರಿಗೆ ಸತೀಶ ಅವರು ಕುಂಟಾಡಿ ಎಂಬಲ್ಲಿ ಇದ್ದಾಗ ಅಲ್ಲಿಗೆ ಬಂದ ಆರೋಪಿ ಸುರೇಂದ್ರ ರೈ, ಮರದ ರೀಪಿನಿಂದ (Wooden Reep) ಸತೀಶ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ದಾಳಿಯ ತೀವ್ರತೆಗೆ ಸತೀಶ ಅವರ ಎಡಕೈ ಮುಂಗಂಟು, ತಲೆಯ ಎಡಬದಿ, ಬಲತೊಡೆ ಹಾಗೂ ಬಲಬದಿಯ ಪಕ್ಕೆಗೆ ಬಲವಾದ ಪೆಟ್ಟು ಬಿದ್ದು ತೀವ್ರ ಗಾಯಗಳಾಗಿವೆ.
ಕೂಡಲೇ ಗಾಯಾಳನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಗಾಯದ ತೀವ್ರತೆ ಹೆಚ್ಚಿದ್ದರಿಂದ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಸತೀಶ ಓಬಯ್ಯ ಪೂಜಾರಿ ಅವರು ನೀಡಿದ ದೂರಿನ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
karkala kallya assault case surendra rai satish poojary

