ಮಲ್ಪೆ : BG Wealth ಶೇರ್ ಮಾರ್ಕೆಟಿಂಗ್ ಹೆಸರಲ್ಲಿ 31 ಲಕ್ಷ ರೂ. ವಂಚಿಸಿ ಕಚೇರಿ ಬಂದ್ ಮಾಡಿ ನಾಲ್ವರು ಎಸ್ಕೇಪ್
ಉಡುಪಿ ತಾಲೂಕಿನ ಕೋಡಿ ಗ್ರಾಮದ ನಿವಾಸಿ ಇಂದಿರಾ ಬಂಗೇರ ಎಂಬವರೇ ಇದೀಗ ವಂಚನೆಗೆ ಒಳಗಾದವರು. ಶೇರ್ ಮಾರ್ಕೆಟಿಂಗ್ ಹೆಸರಲ್ಲಿ ವಂಚನೆ ನಡೆಸಿದವರ ವಿರುದ್ದ ಇದೀಗ ಪೊಲೀಸರಿಗೆ ದೂರು ನೀಡಲಾಗಿದೆ.

ಮಲ್ಪೆ: ನಮ್ಮ ಸಂಸ್ಥೆಯಲ್ಲಿ ಒಮ್ಮೆ ಹಣ ಹೂಡಿಕೆ ಮಾಡಿದರೆ ಡಾಲರ್ ರೂಪದಲ್ಲಿ ಆದಾಯ ಬರುತ್ತದೆ, ನಿಮ್ಮ ಹಣ ದ್ವಿಗುಣವಾಗುತ್ತದೆ ಎಂದು ನಂಬಿಸಿ ಸಾರ್ವಜನಿಕರಿಂದ ಬರೋಬ್ಬರಿ 30,90,000/- ರೂಪಾಯಿ ಪಡೆದು ಕಚೇರಿ ಬಂದ್ ಮಾಡಿ ಪರಾರಿಯಾದ ನಾಲ್ಕು ಮಂದಿ ಕಿಲಾಡಿ ವಂಚಕರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿ ತಾಲೂಕಿನ ಕೋಡಿ ಗ್ರಾಮದ ನಿವಾಸಿ ಇಂದಿರಾ ಬಂಗೇರ ಎಂಬವರೇ ಇದೀಗ ವಂಚನೆಗೆ ಒಳಗಾದವರು. ಶೇರ್ ಮಾರ್ಕೆಟಿಂಗ್ ಹೆಸರಲ್ಲಿ ವಂಚನೆ ನಡೆಸಿದವರ ವಿರುದ್ದ ಇದೀಗ ಪೊಲೀಸರಿಗೆ ದೂರು ನೀಡಲಾಗಿದೆ.
ವಿದೇಶಿ ಕಂಪನಿ, ಡಾಲರ್‌ನಲ್ಲಿ ಐಡಿ ತೋರಿಸಿ ವಂಚನೆ
ಆರೋಪಿಗಳಾದ ಪ್ರದೀಪ ಆಚಾರ್ಯ, ಜ್ಯೋತಿ ಜತ್ತನ್, ದಮಯಂತಿ ಎ. ಮತ್ತು ರೋಹಿಣಿ ಎಂಬುವವರು ಜೂನ್ 19 ರಂದು ಇಂದಿರಾ ಬಂಗೇರ ಅವರ ಮನೆಗೆ ಬಂದಿದ್ದರು. ಮಲ್ಪೆಯ ಕಾರ್ತಿಕ್ ಸಹಜ್ ಕಟ್ಟಡದಲ್ಲಿ ತಾವು ‘ಬಿ ಜಿ ವೆಲ್ತ್ ಶೇರಿಂಗ್’ (BG Wealth Sharing) ಎಂಬ ಶೇರ್ ಮಾರ್ಕೆಟಿಂಗ್ ವ್ಯವಹಾರ ನಡೆಸುತ್ತಿರುವುದಾಗಿ ಪರಿಚಯಿಸಿಕೊಂಡಿದ್ದರು.
ತಮ್ಮದು ವಿದೇಶಿ ಕಂಪೆನಿಯಾಗಿದ್ದು, ಇದರಲ್ಲಿ ಹೂಡಿಕೆ ಮಾಡಿದ್ರೆ ಡಾಲರ್ ರೂಪದಲ್ಲಿ ಐಡಿ ಓಪನ್ ಮಾಡಿ ಹೂಡಿಕೆ ಮಾಡಲಾಗುತ್ತದೆ. ನಂತರ ನೀವು ಹೂಡಿಕೆ ಮಾಡಿರುವ ಹಣ ದ್ವಿಗುಣವಾಗುತ್ತದೆ ಎಂದು ಅವರು ನಂಬಿಸಿದ್ದಾರೆ.
ಕುಟುಂಬಸ್ಥರು, ಪರಿಚಿತರೆಲ್ಲರಿಂದ ಹಣ ಕಲೆಕ್ಟ್ ಮಾಡಿ ಎಸ್ಕೇಪ್
ಆರೋಪಿಗಳು ಕೇವಲ ಇಂದಿರಾ ಬಂಗೇರ ಅವರು ಮಾತ್ರವಲ್ಲದೇ, ಆರೋಪಿಗಳ ನಯವಂಚಕ ಮಾತನ್ನು ನಿಜವೆಂದು ನಂಬಿದ ಇಂದಿರಾ ಬಂಗೇರ ಅವರು, ತಮ್ಮ ಕುಟುಂಬದವರು ಹಾಗೂ ಇತರ ಪರಿಚಿತರಿಂದ ಹಣ ಕ್ರೋಢೀಕರಿಸಿ ಒಟ್ಟು 30.90 ಲಕ್ಷ ರೂಪಾಯಿಗಳನ್ನು ಆರೋಪಿಗಳ ಕೈಗೆ ಕೊಟ್ಟಿದ್ದಾರೆ. ಆದರೆ ಹಣ ತಮ್ಮ ಕೈಸೇರಿದ ನಂತರ ಹಣವನ್ನಾಗಲಿ, ಲಾಭವನ್ನಾಗಲಿ ವಾಪಾಸ್ ನೀಡಿಲ್ಲ.
ಇದರಿಂದ ಅನುಮಾನಗೊಂಡಿರುವ ಇಂದಿರಾ ಅವರು ಮಲ್ಪೆಯಲ್ಲಿರುವ ಆರೋಪಿಗಳ ಕಚೇರಿಗೆ ಭೇಟಿ ನೀಡಿದಾಗ ಕಚೇರಿ ಶಾಶ್ವತವಾಗಿ ಬಂದ್ ಆಗಿರುವುದು ಗಮನಕ್ಕೆ ಬಂದಿದೆ. ಇದೀಗ ಇಂದಿರಾ ಬಂಗೇರ ಅವರು ಮಲ್ಪೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
malpe bg wealth sharing share marketing investment scam four booked

