ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್ : ಜಸ್ಟ್ ಶೇ.33 ಅಂಕ ಪಡೆದ್ರೆ ಪಾಸ್

SSLC pass Marks : ಬೆಂಗಳೂರು : ಕರ್ನಾಟಕದಲ್ಲಿ ಎಸ್ಎಸ್ಎಲ್ಸಿ (SSLC) ಪರೀಕ್ಷೆಗಳ ಉತ್ತೀರ್ಣ ಮಾನದಂಡಗಳಲ್ಲಿ ಮಹತ್ವದ ಬದಲಾವಣೆ ತಂದಿದೆ. ಈ ಮೂಲ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ.
2025ರ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ ಶಿಕ್ಷಣ ಇಲಾಖೆ ಹೊಸ ಆದೇಶವನ್ನು ಹೊರಡಿಸಿದೆ. ಇನ್ಮುಂದೆ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರತಿ ವಿಷಯದಲ್ಲಿ 33% ಅಂಕ ಪಡೆದರೆ ಸಾಕು ಪ್ರಸ್ತಾವನೆಗೆ ಕರ್ನಾಟಕ ಸರಕಾರ ಅಧಿಸೂಚನೆ ಹೊರಡಿಸಿದೆ.
SSLC pass Marks : ಏನಿದು ಹೊಸ ಮಾನದಂಡ ?
ಹೊಸ ಪಾಸ್ ಮಾನದಂಡ : 2025-26 ಶೈಕ್ಷಣಿಕ ವರ್ಷದಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಿಯಮ 16 ರಲ್ಲಿ ಪ್ರಮುಖ ತಿದ್ದುಪಡಿಗಳನ್ನು ಮಾಡಿದೆ.
ಹೊಸ ನಿಯಮದ ಪ್ರಕಾರ ವಿದ್ಯಾರ್ಥಿಗಳು ಒಟ್ಟು 625 ಅಂಕಗಳಲ್ಲಿ ಕನಿಷ್ಠ 206 ಅಂಕಗಳನ್ನು (ಸರಾಸರಿ 33%) ಪಡೆದರೆ ಉತ್ತೀರ್ಣರಾಗುತ್ತಾರೆ. ಅಲ್ಲದೇ ವಿಷಯವಾರು ಅಂಕಗಳಲ್ಲೂ ಕನಿಷ್ಠ ಮಾನದಂಡ ನೀಡಿದೆ.
ಪ್ರತೀ ವಿಷಯದಲ್ಲಿಯೂ ಕನಿಷ್ಠ 30% ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ನಿರ್ಲಕ್ಷ್ಯ ಮಾಡುದಂತೆ ತಡೆಯಲು ಸಹಕಾರಿಯಾಗಲಿದೆ.
Also Read: ದಕ್ಷಿಣ ಕನ್ನಡ : ಜುಲೈ 25ರಂದು ಶಾಲೆ, ಪ.ಪೂ ಕಾಲೇಜಿಗೆ ರಜೆ ಘೋಷಣೆ
ಇನ್ನು ಆಂತರಿಕ ಮತ್ತು ಬಾಹ್ಯ ಮೌಲ್ಯಮಾಪನ (Internal + External Evaluation) ಒಟ್ಟು 33% ಅಂಕ ಪಡೆದರೆ ಅಂತಹ ವಿದ್ಯಾರ್ಥಿಯನ್ನು ಪಾಸ್ ಎಂದು ಘೋಷಿಸಲಾಗುತ್ತದೆ.
SSLC pass Marks : ರಾಜ್ಯ ಪಠ್ಯಕ್ರಮಕ್ಕೆ ಸಿಬಿಎಸ್ಇ ಮಾನದಂಡ
ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿ ಕನಿಷ್ಠ 35% ಅಂಕಗಳನ್ನು ಪಡೆಯಬೇಕಾಗಿತ್ತು. ಈಗ ಈ ಮಿತಿಯನ್ನು 33% ಗೆ ಇಳಿಸಿರುವುದು ವಿದ್ಯಾರ್ಥಿಗಳಿಗೆ ಒಂದು ಸಣ್ಣ ಸಮಾಧಾನ ತಂದಿದೆ, ಏಕೆಂದರೆ ಸಿಬಿಎಸ್ಇ (CBSE) ಸೇರಿದಂತೆ ಇತರ ಬೋರ್ಡ್ಗಳಲ್ಲಿಯೂ 33% ಉತ್ತೀರ್ಣ ಮಾನದಂಡವಿದೆ.
ಇನ್ಮುಂದೆ ಗ್ರೇಸ್ ಅಂಕಕ್ಕೆ ಕತ್ತರಿ :
2025 ರ ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ ಗ್ರೇಸ್ ಅಂಕ ನೀಡದೇ ಇರಲು ಕೆಎಸ್ಇಎಬಿ (KSEAB) ನಿರ್ಧರಿಸಿದೆ. 2024 ರಲ್ಲಿ SSLC ಫಲಿತಾಂಶಗಳು ಕಡಿಮೆ ಇದ್ದಾಗ ಸರಕಾರ ಸುಮಾರು 1.7 ಲಕ್ಷ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಿ ಪಾಸ್ ಮಾಡಿತ್ತು. ಆದರೆ 2025ರಿಂದ ಯಾವುದೇ ಗ್ರೆಸ್ ಅಂಕ ಇರುವುದಿಲ್ಲ.
SSLC pass Marks : ಎಸ್ಎಸ್ಎಲ್ಸಿ ಪರೀಕ್ಷೆ : 3 ಅವಕಾಶ
ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸುವ ದೃಷ್ಟಿಯಿಂದ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2025 ರಲ್ಲಿ ಮೂರು ಪರೀಕ್ಷಾ ವ್ಯವಸ್ಥೆಯನ್ನು ಪರಿಚಯಿಸಿದೆ:
- ಪರೀಕ್ಷೆ 1: ಮುಖ್ಯ ಪರೀಕ್ಷೆ (ಮಾರ್ಚ್ 2025 ರಲ್ಲಿ ನಡೆಯಿತು).
- ಪರೀಕ್ಷೆ 2: ಪೂರಕ ಪರೀಕ್ಷೆ (ಜೂನ್ 2025 ರಲ್ಲಿ ನಡೆಯಿತು).
- ಪರೀಕ್ಷೆ 3: ಮತ್ತೊಂದು ಪೂರಕ ಪರೀಕ್ಷೆ (ಜುಲೈ 5 ರಿಂದ 12, 2025 ರವರೆಗೆ ನಡೆಯಿತು, ಫಲಿತಾಂಶ ಜುಲೈ 23, 2025 ರಂದು ಪ್ರಕಟವಾಗಿದೆ).
ವಿದ್ಯಾರ್ಥಿಗಳು ಈ ಮೂರು ಪರೀಕ್ಷೆಗಳಲ್ಲಿ ಯಾವುದರಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುತ್ತಾರೋ, ಅದನ್ನು ಅಂತಿಮ ಫಲಿತಾಂಶಕ್ಕೆ ಪರಿಗಣಿಸಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಹಲವಾರು ಬಾರಿ ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಅವಕಾಶ ನೀಡುತ್ತದೆ.
Also Read : ಉಡುಪಿ : ಶಾಲಾ ಮಕ್ಕಳ ವಾಹನಗಳ ವಿರುದ್ದ ಪೊಲೀಸರ ವಾರ್ನಿಂಗ್, ಬಾರೀ ದಂಡ
ಉತ್ತೀರ್ಣ ಅಂಕಗಳ ಮಾನದಂಡವನ್ನು 35% ರಿಂದ 33% ಗೆ ಇಳಿಸಿರುವುದು ಮತ್ತು ಮೂರು ಪರೀಕ್ಷೆಗಳ ಅವಕಾಶ ನೀಡಿರುವುದು ವಿದ್ಯಾರ್ಥಿಗಳಿಗೆ ದೊಡ್ಡ ಸಮಾಧಾನ ತಂದಿದೆ. ಆದರೆ ಗ್ರೇಸ್ ಅಂಕ ರದ್ದು ಮಾಡಿರುವುದು ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿ ಕಡ್ಡಾಯವಾಗಿ ಕನಿಷ್ಠ ಅಂಕಗಳನ್ನು ಗಳಿಸಬೇಕಾಗುತ್ತದೆ.
SSLC pass Marks 33 percent Karnataka Education Good News Kannada News



