8ನೇ ವೇತನ ಆಯೋಗ ಯಾವಾಗ ಜಾರಿ : ವೇತನ ಎಷ್ಟು ಹೆಚ್ಚಳ ಗೊತ್ತಾ ?
8th Pay Commission : ಭಾರತ ಸರಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಸರಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಗುಡ್‌ನ್ಯೂಸ್ ಇಲ್ಲಿದೆ. ಭಾರತದಲ್ಲಿ 8ನೇ ವೇತನ ಆಯೋಗ ಜಾರಿಗೆ ಮುಂದಾಗಿದೆ.
ಕಾರ್ಮಿಕರ ನಿರೀಕ್ಷಿತ ವೇತನ ಆಯೋಗ ಯಾವಾಗ ಜಾರಿಯಾಗುತ್ತೆ ಅನ್ನೋ ಮಾಹಿತಿ ಇಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಭಾರತ ಸರಕಾರ 2025ರ ಜನವರಿ ತಿಂಗಳಿನಲ್ಲಿಯೇ 8ನೇ ವೇತನ ಆಯೋಗ ರಚನೆಗೆ ಅನುಮೋದನೆ ನೀಡಿದೆ.
ಪ್ರಮುಖವಾಗಿ ರಕ್ಷಣಾ ಸಚಿವಾಲಯ, ಗೃಹ ಸಚಿವಾಲಯ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಜೊತೆಗೆ ರಾಜ್ಯ ಸರಕಾರಗಳಿಂದಲೂ ಸಲಹೆ ಕೇಳಿದೆ.
8ನೇ ವೇತನ ಆಯೋಗದ (8th Pay Comission) 2026ರ ಜನವರಿ 1 ರಿಂದಲೇ ರಿಂದ ಜಾರಿಗೆ ಬರಲಿದೆ. ಈಗಾಗಲೇ 7ನೇ ವೇತನ ಆಯೋಗವು 2016 ರಲ್ಲಿ ಜಾರಿಯಾಗಿ, ಡಿಸೆಂಬರ್ 31 2025 ರಂದು ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಗೃಹಿಣಿಯರಿಗೆ ಭರ್ಜರಿ ಗುಡ್‌ನ್ಯೂಸ್
8th Pay Commission : ಸರಕಾರಿ ನೌಕರರ ವೇತನ ಹೆಚ್ಚಳ ಎಷ್ಟು?
ಕನಿಷ್ಠ ವೇತನ: 8ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ ₹18,000 ರಿಂದ ₹41,000 ಅಥವಾ ₹51,480 ವರೆಗೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
8ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ ₹18,000 ರಿಂದ ₹41,000 ಅಥವಾ ₹51,480 ವರೆಗೆ ಹೆಚ್ಚಳವಾಗುವ ಸಾಧ್ಯತೆಯಿದೆ.
ಎಷ್ಟು ಹೆಚ್ಚಳ : 34% ರಷ್ಟು ಹೆಚ್ಚಳ ಆಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಕೆಲವು ವರದಿಗಳ ಪ್ರಕಾರ, 7ನೇ ವೇತನ ಆಯೋಗದ 14.3% ಹೆಚ್ಚಳಕ್ಕಿಂತಲೂ ಕಡಿಮೆ, ಅಂದರೆ ಸುಮಾರು 13% ರಷ್ಟು ಪರಿಣಾಮಕಾರಿ ಹೆಚ್ಚಳವಾಗಬಹುದು.
ಇದನ್ನೂ ಓದಿ : ಪಿಎಂ ಕಿಸಾನ್ ಸಮ್ಮಾನ್ ನಿಧಿ ಹಣ ರೈತರ ಖಾತೆಗೆ ಜಮೆ ಆಗಿದ್ಯಾ ? ಚೆಕ್ ಮಾಡುವುದು ಹೇಗೆ
ಫಿಟ್‌ಮೆಂಟ್ ಫ್ಯಾಕ್ಟರ್: ಈ ಬಾರಿ ಫಿಟ್‌ಮೆಂಟ್ ಫ್ಯಾಕ್ಟರ್ 1.8 ರಿಂದ 2.28 ರ ನಡುವೆ ಇರಬಹುದು ಎಂದು ನಿರೀಕ್ಷಿಸಲಾಗಿದೆ. 7ನೇ ವೇತನ ಆಯೋಗದಲ್ಲಿ ಇದು 2.57 ಇತ್ತು.
ತುಟ್ಟಿಭತ್ಯೆ (DA): ಹೊಸ ವೇತನ ಶ್ರೇಣಿ ಜಾರಿಯಾದಾಗ ಪ್ರಸ್ತುತ ಇರುವ ತುಟ್ಟಿಭತ್ಯೆ (ಸದ್ಯ 55% ಇದೆ) ಶೂನ್ಯಕ್ಕೆ ಮರುಹೊಂದಾಣಿಕೆ ಆಗಲಿದೆ.
8th Pay Commission : ಪಿಂಚಣಿದಾರರಿಗೆ ಪ್ರಯೋಜನ
ಸುಮಾರು 65 ಲಕ್ಷ ಪಿಂಚಣಿದಾರರಿಗೂ ಈ ವೇತನ ಆಯೋಗದಿಂದ ಪ್ರಯೋಜನವಾಗಲಿದೆ. ಕನಿಷ್ಠ ಪಿಂಚಣಿಯೂ ಹೆಚ್ಚಳವಾಗುವ ಸಾಧ್ಯತೆಯಿದೆ. 7ನೇ ವೇತನ ಆಯೋಗದಲ್ಲಿ ಕನಿಷ್ಠ ಪಿಂಚಣಿ ₹9,000 ಇತ್ತು.
8ನೇ ವೇತನ ಆಯೋಗ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ನಿರೀಕ್ಷೆಯಿದೆ. ಆದರೆ, ಅಂತಿಮ ನಿರ್ಧಾರಗಳು ಮತ್ತು ನಿಖರ ಅಂಕಿಅಂಶಗಳು ಆಯೋಗದ ವರದಿ ಪ್ರಕಟವಾದ ನಂತರವೇ ಸ್ಪಷ್ಟವಾಗಲಿವೆ.
7ನೇ ವೇತನ ಆಯೋಗ ಕನಿಷ್ಠ – ಗರಿಷ್ಠ ವೇತನ
ಕನಿಷ್ಠ ಮೂಲ ವೇತನ: ₹18,000 ಪ್ರತಿ ತಿಂಗಳು. (ಇದು ಅತಿ ಕಡಿಮೆ ಶ್ರೇಣಿಯ ನೌಕರರಿಗೆ ಅನ್ವಯಿಸುತ್ತದೆ, ಉದಾಹರಣೆಗೆ ಮಲ್ಟಿ- ಟಾಸ್ಕಿಂಗ್ ಸ್ಟಾಫ್ – MTS)
ಗರಿಷ್ಠ ಮೂಲ ವೇತನ: ₹2,25,000 ಪ್ರತಿ ತಿಂಗಳು.
ಮೂಲ ವೇತನದ ಜೊತೆಗೆ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಸಾರಿಗೆ ಭತ್ಯೆ (TA) ಮತ್ತು ಇತರ ಭತ್ಯೆಗಳನ್ನು ಸೇರಿಸಿ ಒಟ್ಟು ವೇತನವನ್ನು ನಿರ್ಧರಿಸಲಾಗುತ್ತದೆ. ಪ್ರಸ್ತುತ ತುಟ್ಟಿಭತ್ಯೆ (DA) 55% ಇದೆ.
8th Pay Commission be implemented: Do you know how much salary increase Kannada News



