ಫ್ಲಿಪ್ಕಾರ್ಟ್ ಫ್ರೀಡಮ್ ಸೇಲ್ : ಸ್ಯಾಮ್ಸಂಗ್ ಅಲ್ಟ್ರಾ 5G ಬಿಗ್ ಆಫರ್ : ಈ ಕೊಡುಗೆ ತಪ್ಪಿಸಿಕೊಳ್ಳಬೇಡಿ
Flipkart Freedom Sale: ಹಬ್ಬದ ಸೀಸನ್ ಈಗಾಗಲೇ ಶುರುವಾಗಿದೆ. ರಕ್ಷಾಬಂಧನ, ಸ್ವಾತಂತ್ರ್ಯೋತ್ಸವ, ಜನ್ಮಾಷ್ಟಮಿಯಂತಹ ಹಬ್ಬಗಳು ಸದ್ಯದಲ್ಲೆ ಬರಲಿದೆ. ಇದನ್ನು ಅರಿತ ಆನ್ಲೈನ್ ಶಾಪಿಂಗ್ ಸೈಟ್ಗಳು ತಮ್ಮ ಗ್ರಾಹಕರಿಗಾಗಿ ಭರ್ಜರಿ ಸೇಲ್ ಅನ್ನು ತಂದಿವೆ.
ಕೆಲವು ಈಗಾಗಲೇ ಸೇಲ್ ಅನ್ನು ಶುರುಮಾಡಿವೆ. ಅದೇ ರೀತಿ ಫ್ಲಿಪ್ಕಾರ್ಟ್ ಕೂಡಾ ತನ್ನ ಫ್ರೀಡಮ್ ಸೇಲ್ 2025 ಅನ್ನು ಪ್ರಾರಂಭಿಸಿದೆ. ಫ್ಲಿಪ್ಕಾರ್ಟ್ ಹಲವಾರು ಉತ್ಪನ್ನಗಳ ಮೇಲೆ ರಿಯಾಯಿತಿಗಳನ್ನು ಘೋಷಿಸಿದೆ.
ಇದರಿಂದ ಗ್ರಾಹಕರು ತಮ್ಮ ಬಜೆಟ್ನಲ್ಲಿ ಉತ್ತಮ ಉತ್ಪನ್ನಗಳನ್ನು ಕೊಂಡುಕೊಳ್ಳಬಹುದಾಗಿದೆ. ಫ್ಲಿಪ್ಕಾರ್ಟ್ ಸ್ಮಾರ್ಟ್ಫೋನ್ ಮತ್ತು ಇತರ ಡಿಜಿಟಲ್ ಉತ್ಪನ್ನಗಳ ಮೇಲೆ ಉತ್ತಮ ಡೀಲ್ಗಳನ್ನು ನೀಡಿದೆ.
ನೀವು ಹೊಸ ಫ್ಲ್ಯಾಗ್ಶಿಪ್ ಫೋನ್ ಹುಡುಕುತ್ತಿದ್ದರೆ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಸ್ಯಾಮ್ಸಂಗ್ ಗ್ಯಾಲಕ್ಸಿ ಅಲ್ಟ್ರಾ 5G ಸ್ಮಾರ್ಟ್ಫೋನ್ಗಳ ಮೇಲೆ 35 ಸಾವಿರಕ್ಕೂ ಅಧಿಕ ರಿಯಾಯಿತಿಯನ್ನು ನೀಡುತ್ತಿದೆ.
ಉತ್ತಮ ಕ್ಯಾಮೆರಾ, ವಿನ್ಯಾಸದ ಫೋನ್ ಹುಡುಕುತ್ತಿದ್ದರೆ ಸ್ಯಾಮ್ಸಂಗ್ ಗ್ಯಾಲಕ್ಸಿಯ S23 ಅಲ್ಟ್ರಾ ಉತ್ತಮ ಆಯ್ಕೆಯಾಗಬಹುದು. ಫ್ಲಿಪ್ಕಾರ್ಟ್ನಲ್ಲಿ ಫ್ರೀಡಮ್ ಸೇಲ್ ಆಗಸ್ಟ್ 8 ವರೆಗೆ ಇರಲಿದೆ.
ಹಬ್ಬಕ್ಕೆ ಹೊಸ ಫೋನ್ ಖರೀದಿಸಿಬೇಕೆಂಬ ಬಯಕೆ ನಿಮ್ಮಲ್ಲಿದ್ದರೆ ಈ ಅವಕಾಶವನ್ನು ಖಂಡಿತ ಉಪಯೋಗಿಸಿಕೊಳ್ಳಬಹುದು.
ಫ್ಲಿಪ್ಕಾರ್ಟ್ನಲ್ಲಿ ಈ ಫೋನ್ ಅನ್ನು ಹೆಚ್ಚಿನ ರಿಯಾಯಿತಿಯೊಂದಿಗೆ ಹೇಗೆ ಖರೀದಿಸಬಹುದು? ಯಾವೆಲ್ಲ ವೈಶಿಷ್ಟ್ಯಗಳು ಅದರಲ್ಲಿವೆ ಎಂದು ತಿಳಿದುಕೊಳ್ಳೋಣ.
ಫ್ಲಿಪ್ಕಾರ್ಟ್ನ ಫ್ರೀಡಮ್ ಸೇಲ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ 5G ಬೆಲೆ
ಸ್ಯಾಮ್ಸಂಗ್ನ ಮಾರಾಟ ಮಳಿಗೆಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ 5Gಯು ಸುಮಾರು 1,09,999 ರೂ. ಗಳಿಗೆ ಲಭ್ಯವಿದೆ. ಫ್ಲಿಪ್ಕಾರ್ಟ್ನ ಫ್ರೀಡಮ್ ಸೇಲ್ನಲ್ಲಿ ಅದೇ ಸ್ಮಾರ್ಟ್ಫೋನ್ 31,141 ರೂ. ರಿಯಾಯಿರಿ ದರದಲ್ಲಿ ನಿಮ್ಮ ಕೈಸೇರಲಿದೆ.
ಅಷ್ಟೇ ಅಲ್ಲದೇ ಫ್ಲಿಪ್ಕಾರ್ಟ್, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಈ ಸಾಧನದ ಮೇಲೆ 4,000 ರೂಗಳ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದಾದ ಅವಕಾಶವನ್ನು ಒದಗಿಸಿದೆ. ಅಂದರೆ ಈ ಫೋನ್ ಅನ್ನು 35,141 ರೂ.ಗಳ ವರೆಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಈ ಫೋನ್ ನ ಮೇಲೆ 3,857 ರೂ. ಗಳಿಂದ ಪ್ರಾರಂಭವಾಗುವ ಇಎಂಐ ಆಯ್ಕೆಗಳನ್ನು ಸಹ ಪಡೆಯಬಹುದು. ಇದಕ್ಕೆ ಯಾವುದೇ ಇತರೆ ವೆಚ್ಚಗಳು ಇರುವುದಿಲ್ಲ. ನೀವು ಹಳೆಯ ಸ್ಮಾರ್ಟ್ಫೋನ್ನ ಜೊತೆಗೆ ವಿನಿಮಯ ಮಾಡಿಕೊಳ್ಳಲು ಬಯಸಿದರೆ, 66,000 ರೂ. ಗಳ ವರೆಗ ಉಳಿಸಬಹುದಾಗಿದೆ. ಆದರೆ ಈ ಬೆಲೆಯು ನಿಮ್ಮ ಹಳೆಯ ಫೋನ್ನ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ.
ಇದನ್ನೂ ಓದಿ: Jio OTT Plans: ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್! 500 ರೂ. ಗಿಂತ ಕಡಿಮೆ ಬೆಲೆಯಲ್ಲಿ ಉಚಿತ ಒಟಿಟಿ ಯೋಜನೆಗಳು
ಸ್ಯಾಮ್ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ 5G ವೈಶಿಷ್ಟ್ಯ
ಸ್ಯಾಮ್ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ 5G ಸ್ಮಾರ್ಟ್ಫೋನ್ ನಲ್ಲಿ 120Hz ರಿಫ್ರೆಶ್ ದರ ಮತ್ತು 1,750 ನಿಟ್ಸ್ ಬ್ರೈಟ್ನೆಸ್ನೊಂದಿಗೆ ದೊಡ್ಡ 6.8-ಇಂಚಿನ AMOLED ಪ್ಯಾನೆಲ್ ಅನ್ನು ಪಡೆಯುತ್ತೀರಿ. ಇದು ಆಕರ್ಷಕ ಬಣ್ಣಗಳನ್ನು ನೀಡುತ್ತದೆ. ಈ ಫೋನ್ ಸ್ನಾಪ್ಡ್ರಾಗನ್ 8 ಜೆನ್ 2 ಚಿಪ್ಸೆಟ್ನಿಂದ ಚಲಿಸುತ್ತದೆ.
ಇದು 12GB RAM ಮತ್ತು 1TB ವರೆಗಿನ ಸಂಗ್ರಹಣೆಯೊಂದಿಗೆ ಜೋಡಿಯಾಗಿಯ ಬರುತ್ತದೆ. ಇದು 5,000mAh ಮತ್ತು 45 W ಬ್ಯಾಟರಿಯಿಂದ ಬರುತ್ತದೆ. ಇನ್ನು ಕ್ಯಾಮೆರಾದ ವಿಷಯದಲ್ಲಿ ಈ ಸ್ಮಾರ್ಟ್ಪೋನ್ 200 MP ಮೇನ್ ಕ್ಯಾಮೆರಾ, 10MP ಪೆರಿಸ್ಕೋಪ್ ಮತ್ತು 10MP ಟೆಲಿಫೋಟೋ ಲೆನ್ಸ್ ಅನ್ನು ಹೊಂದಿದೆ.
ಇದರಲ್ಲಿ 12MP ಅಲ್ಟ್ರಾವೈಡ್ ಸೆನ್ಸರ್ ಅನ್ನು ಸಹ ನೀವು ಪಡೆಯುತ್ತೀರಿ. ಮುಂಭಾಗದಲ್ಲಿ, 12MP ಸೆಲ್ಫಿ ಕ್ಯಾಮೆರಾವನ್ನು ಪಡೆಯುತ್ತೀರಿ.
ಇದನ್ನೂ ಓದಿ: ಯೂಟ್ಯೂಬ್ ‘ಹೈಪ್’ ಬಟನ್ ವೈಶಿಷ್ಟ್ಯವೇನು ? ಸಣ್ಣ ಕಂಟೆಂಟ್ದಾರರಿಗೆ ಗುಡ್ನ್ಯೂಸ್
Technology buy Samsung Galaxy S23 ultra 5G Smartphone in flipkart during freedom sale in kannada



