ಅರಿವಳಿಕೆ ನೀಡದೆ ನಾಯಿಗೆ ಟ್ಯಾಟೂ ಹಾಕಿಸಿದ ಮಾಲೀಕರು ಪೆಟ್ ಫೇರ್ ಏಷ್ಯಾ ಕಾರ್ಯಕ್ರಮದಿಂದ ಔಟ್

Viral News pet Fair Asia event : ಬೀಜಿಂಗ್ : ಶಾಂಘೈನ ಪೆಟ್ ಫೇರ್ ಏಷ್ಯಾದಲ್ಲಿ ಪ್ರದರ್ಶಿಸಲಾದ ರೋಮವಿಲ್ಲದ ನಾಯಿಯೊಂದಕ್ಕೆ ಅರಿವಳಿಕೆ ನೀಡದೆ ಅದರ ದೇಹದ ಮೇಲೆ ಟ್ಯಾಟೂ ಹಾಕಿಸಲಾಗಿದೆ ಎಂದು ಅದರ ಮಾಲೀಕರು ಹೇಳಿಕೊಂಡಿದ್ದು, ಈ ವಿಡಿಯೊ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್‌ ಆಗುತ್ತಲೇ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಶಾಂಘೈನ ಪೆಟ್ ಫೇರ್ ಏಷ್ಯಾ ಕಾರ್ಯಕ್ರಮದಿಂದ ಅವರನ್ನು ಹೊರಹಾಕಲಾಗಿದೆ.


ವಿಡಿಯೊದಲ್ಲಿ ಮೆಕ್ಸಿಕನ್ ರೋಮವಿಲ್ಲದ ನಾಯಿಯ ದೇಹದ ಮೇಲೆ ವರ್ಣರಂಜಿತ ಡ್ರ್ಯಾಗನ್ ಟ್ಯಾಟೂಗಳನ್ನು ಹಾಕಲಾಗಿತ್ತು. ಹಾಗೂ ಅದಕ್ಕೆ ದಪ್ಪ ಚಿನ್ನದ ಸರಪಳಿ ಮತ್ತು ಅದರ ಒಂದು ಕಾಲಿಗೆ ವಾಚ್ ಅನ್ನು ಹಾಕಲಾಗಿತ್ತು. ಆದರೆ ನಾಯಿಯ ಮಾಲೀಕರು ಯಾವುದೇ ಅರಿವಳಿಕೆ ನೀಡದೆ ಅದರ ದೇಹದ ಮೇಲೆ ಟ್ಯಾಟೊ ಹಾಕಿಸಲಾಗಿದೆ. ಅದಕ್ಕೆ ನೋವು ಆಗಲಿಲ್ಲ ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮದ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಸಂದರ್ಶಕರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿ, ಇದರಿಂದ ನಾಯಿಗೆ ತೊಂದರೆಯಾಗಿರುವುದು ಕಂಡುಬಂದಿದೆ ಎಂದು ಹೇಳಿದರು.

ಇದನ್ನೂ ಓದಿ : ಜಪಾನಿನ ಅತ್ಯಂತ ಹಿರಿಯ ಜೀವ : ವಯಸ್ಸು ಕೇಳಿದ್ರೆ ಶಾಕ್‌ ಆಗ್ತೀರಿ..!

ಹಾಗೂ ನೆಟ್ಟಿಗರೊಬ್ಬರು , “ಪಾಪ ನಾಯಿ – ಮಾಲೀಕರನ್ನು ಕುದುರೆ ಚಾಟಿಯಿಂದ ಹೊಡೆಯಬೇಕಿತ್ತು” ಎಂದು ಆಕ್ರೀಶ ವ್ಯಕ್ತಪಡಿಸಿದ್ದಾರೆ. “ಚೀನಾದಲ್ಲಿ ಪ್ರಾಣಿಗಳು ಇನ್ನು ಮುಂದೆ ಬಳಸಬಾರದು.

ಯಾಕೆಂದರೆ ಬೆಕ್ಕುಗಳು ಮತ್ತು ನಾಯಿಗಳನ್ನು ನಿಂದಿಸುವ ಮತ್ತು ಹಿಂಸಿಸುವ ಹಲವಾರು ಕ್ರೂರ ಜನರು ಅಲ್ಲಿದ್ದಾರೆ. ಚೀನಾದಲ್ಲಿರುವ ಎಲ್ಲಾ ಪ್ರಾಣಿಗಳನ್ನು ರಕ್ಷಿಸಬೇಕು ಮತ್ತು ಅಲ್ಲಿಂದ ತೆಗೆದುಹಾಕಬೇಕು.

ಚೀನಾ ಯಾವುದೇ ಪ್ರಾಣಿಗಳನ್ನು ಸಾಕುವುದನ್ನು ನಿಷೇಧಿಸಬೇಕು. ಅಲ್ಲಿ ಎಷ್ಟು ಕ್ರೂರ ಪ್ರಾಣಿ ದೌರ್ಜನ್ಯಗಾರರು ವಾಸಿಸುತ್ತಾರೆ ಎಂಬುದು ಭಯಾನಕವಾಗಿದೆ” ಎಂದು ಮತ್ತೊಬ್ಬರು ಹೇಳಿದರು.

ಮೂರನೇಯವರು “ಇದು ನಿಜವಾಗಿಯೂ ಕ್ರೌರ್ಯ” ಎಂದು ಹೇಳಿದರು. ಈ ವಿಡಿಯೊಗೆ ಹಲವರಿಂದ ಟೀಕೆ ವ್ಯಕ್ತವಾದ ನಂತರ ಇದಕ್ಕೆ ಪ್ರತಿಕ್ರಿಯಿಸಿದ ಪೆಟ್ ಫೇರ್ ಏಷ್ಯಾ ಕಾರ್ಯಕ್ರಮ ಆಯೋಜಕರು ಹಚ್ಚೆ ಹಾಕಿಸಿಕೊಂಡ ನಾಯಿಯ ಮಾಲೀಕರು ಮತ್ತೆ ಈ ಕಾರ್ಯಕ್ರಮಕ್ಕೆ ಪ್ರವೇಶಿಸದಂತೆ ನಿಷೇಧ ಹೇರಿದ್ದಾರೆ.

ಪೆಟ್ ಫೇರ್ ಏಷ್ಯಾ ಬಗ್ಗೆ

ಪೆಟ್ ಫೇರ್ ಏಷ್ಯಾ ಕಾರ್ಯಕ್ರಮ ಪ್ರತಿವರ್ಷ ಆಗಸ್ಟ್ನಲ್ಲಿ ಶಾಂಘೈ ನ್ಯೂ ಇಂಟರ್ನ್ಯಾಷನಲ್ ಎಕ್ಸ್ಪೋ ಸೆಂಟರ್ (SNIEC) ನಲ್ಲಿ ನಡೆಯುತ್ತದೆ. 1997 ರಲ್ಲಿ ಶುರುವಾದಾಗಿನಿಂದ, ಈ ಪ್ರದರ್ಶನವು ಚೀನಾದ ಸಾಕುಪ್ರಾಣಿ ಮಾರುಕಟ್ಟೆಯ ಯಶಸ್ವಿಗೆ ಸಾಕ್ಷಿಯಾಗಿದೆ ಮತ್ತು ವರ್ಷದಿಂದ ವರ್ಷಕ್ಕೆ ಗಮನಾರ್ಹ ಬೆಳವಣಿಗೆಯನ್ನು ಕಾಯ್ದುಕೊಂಡಿದೆ.

ಇದನ್ನೂ ಓದಿ : 80 ವಯಸ್ಸಿನಲ್ಲೂ ಸಾವಿರ ಮೆಟ್ಟಿಲು ಏರಿದ ವೃದ್ದ ಮಹಿಳೆ

Viral News pet Fair Asia event: Owner who tattooed dog without anesthesia kicked out of Pet Fair Asia event Kannada News

Related Stories