80ನೇ ವಯಸ್ಸಿನಲ್ಲಿಯೂ ಸಾವಿರಾರು ಮೆಟ್ಟಿಲುಗಳನ್ನು ಹತ್ತಿದ ವೃದ್ಧ ಮಹಿಳೆ

ಅಹ್ಮದಾಬಾದ್ : ವಯಸ್ಸಾದ ಮೇಲೆ ಜನರಿಗೆ ಕೀಲುಗಳ ಸಮಸ್ಯೆ ಬರುವುದರಿಂದ ನಡೆದಾಡಲು, ಕುಳಿತುಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ ಅಂತವರು ತಮ್ಮ ದಿನನಿತ್ಯದ ಕೆಲಸಗಳಿಗೆ ಇತರರ ಮೇಲೆ ಅವಲಂಬಿತರಾಗಿರುತ್ತಾರೆ. ಅದರಲ್ಲೂ ಮೆಟ್ಟಿಲುಗಳನ್ನು ಹತ್ತುವುದೆಂದರೆ ಅದು ಅಸಾಧ್ಯವಾದ ಮಾತು.
ಹೀಗಿರುವಾಗ ಮಧ್ಯಪ್ರದೇಶದ ನೀಮಚ್ನ 80 ವರ್ಷದ ವೃದ್ಧೆಯೊಬ್ಬಳು ಯಾರ ಸಹಾಯವಿಲ್ಲದೆ ದೇವಸ್ಥಾನವೊಂದರ ಸಾವಿರಾರು ಮೆಟ್ಟಿಲಿಗಳನ್ನು ಏರಿ ದೇವರ ದರ್ಶನ ಮಾಡಿದ್ದಾಳೆ. ಅಚಲ ನಂಬಿಕೆಯಿಂದ ಅವಳು ನಿರಂತರವಾಗಿ ಮೆಟ್ಟಿಲುಗಳನ್ನು ಏರುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಬೆರಗುಗೊಳಿಸಿದೆ.
ಮಧ್ಯಪ್ರದೇಶದ ನೀಮಚ್ನ 80 ವರ್ಷದ ಮಹಿಳೆ ಸುನೀತಾ ಚೌಧರಿ ಗುಜರಾತಿನ ಪವಿತ್ರ ಗಿರ್ನಾರ್ ಜೈನ ತೀರ್ಥದಲ್ಲಿ ಯಾರ ಸಹಾಯವಿಲ್ಲದೆ 10,000 ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತುವ ಮೂಲಕ ರಾಷ್ಟ್ರವ್ಯಾಪಿ ಗಮನ ಸೆಳೆದಿದ್ದಾಳೆ. ಸುನೀತಾ ಜೈನ ಧರ್ಮವನ್ನು ಅನುಸರಿಸುತ್ತಾರೆ ಎಂದು ಹೇಳಲಾಗುತ್ತದೆ.
ಜೈನ ಪೂಜ್ಯ ಯಾತ್ರಾ ಸ್ಥಳವಾದ ಗಿರ್ನಾರ್ ತೀರ್ಥದ ಮೆಟ್ಟಿಲುಗಳನ್ನು ಹತ್ತುವುದು ಯುವಜನಾಂಗದವರಿಗೆ ಸವಾಲಿನ ಕೆಲಸವಾಗಿದೆ. ಹೀಗಿರುವಾಗ ವೃದ್ಧೆ ಸುನೀತಾ ಉತ್ಸಾಹದಿಂದ ಮೆಟ್ಟಿಲುಗಳನ್ನು ಹತ್ತುವುದು ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.
ಇದನ್ನೂ ಓದಿ : ಫೇಸ್ಬುಕ್ ಜಾಹೀರಾತು ನೋಡಿ 3 ಲಕ್ಷ ಕಳೆದುಕೊಂಡ ವ್ಯಕ್ತಿ
ಸುನೀತಾ ಹಲವಾರು ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳಂತೆ. ಇದರಲ್ಲಿ ಉಪವಾಸ ಮಾಡುವುದು ಮತ್ತು ಇತರ ಪವಿತ್ರ ಸ್ಥಳಗಳಿಗೆ ಹಲವಾರು ಬಾರಿ ಭೇಟಿ ನೀಡುವುದು ಕೂಡ ಸೇರಿವೆ. ಅವಳು 3 ಬಾರಿ ವರ್ಷಿತಪ್ ಉಪವಾಸವನ್ನು ಪೂರ್ಣಗೊಳಿಸಿದ್ದಾಳಂತೆ ಮತ್ತು 16 ಬಾರಿ ಚಾತುರ್ಮಾಸದ ಕ್ರಮಗಳನ್ನು ಬಹಳ ಶಿಸ್ತಿನಿಂದ ಅನುಸರಿಸಿದ್ದಾಳಂತೆ.
ಅವಳ ಮಗ ಭೂಪೇಂದ್ರ ಚೌಧರಿ, ತಮ್ಮ ತಾಯಿಯ ಆಧ್ಯಾತ್ಮಿಕ ಪ್ರಯಾಣದ ಸಮರ್ಪಣೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾನೆ. ಮೆಟ್ಟಿಲುಗಳನ್ನು ಹತ್ತಲು ಸರಾಸರಿ ವ್ಯಕ್ತಿ 10 ಗಂಟೆಗಳನ್ನು ತೆಗೆದುಕೊಂಡರೆ, ಅವನ ತಾಯಿ ಕೇವಲ ಆರು ಗಂಟೆಗಳಲ್ಲಿ ಅದನ್ನು ಮಾಡುತ್ತಾಳೆ ಎಂದು ಹೇಳಿದ್ದಾನೆ.
ಸಾತ್ವಿಕ ಆಹಾರ ಮತ್ತು ನಿಯಮಿತ ದಿನಚರಿ ಸೇರಿದಂತೆ ಅವಳ ಜೀವನಶೈಲಿ ಅವಳ ಶಕ್ತಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದು ಅವನು ತಿಳಿಸಿದ್ದಾನೆ.
ಸುನೀತಾ ಜೀವನಶೈಲಿ
ಸುನೀತಾ ವರ್ಷಗಳಿಂದ ಶಿಸ್ತುಬದ್ಧ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದಾಳಂತೆ. ಸಾತ್ವಿಕ ಆಹಾರವನ್ನು ಮಾತ್ರ ಸೇವಿಸುತ್ತಾಳಂತೆ. ಹಾಗೇ ಕಳೆದ 15 ವರ್ಷಗಳಿಂದ ದಿನಕ್ಕೆ ಒಂದು ಊಟ ಮಾತ್ರ ಸೇವಿಸುವುದು ಮತ್ತು ಕಳೆದ 50 ವರ್ಷಗಳಿಂದ ರಾತ್ರಿ ಊಟವನ್ನು ಸಹ ಮಾಡುತ್ತಿಲ್ಲವಂತೆ.
ಇದನ್ನೂ ಓದಿ : ಸ್ನೇಹಿತನ ಹಲ್ಲು ಹರಿತಗೊಳಿಸಲು ಈತ ಮಾಡಿದ್ದೇನು ?
ಇದೀಗ ಗುಜರಾತ್ನ ಪವಿತ್ರ ಗಿರ್ನಾರ್ ಜೈನ ತೀರ್ಥದಲ್ಲಿ ಸಾವಿರಾರು ಮೆಟ್ಟಿಲುಗಳನ್ನು ಏರಿದಲ್ಲದೆ ಗಿರ್ನಾರ್ಗೆ ಮತ್ತೊಂದು ತೀರ್ಥಯಾತ್ರೆಗೆ ಸಿದ್ಧತೆ ನಡೆಸುತ್ತಿದ್ದಾಳಂತೆ. ಅಲ್ಲಿ ಸುನೀತಾ ಮತ್ತೆ ಮೆಟ್ಟಿಲುಗಳನ್ನು ಹತ್ತಲಿದ್ದಾಳಂತೆ. ಇಲ್ಲಿ ಅವಳಿಗೆ ದೇವರ ಬಗ್ಗೆ ಇರುವ ಅಚಲ ಭಕ್ತಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಎತ್ತಿ ತೋರಿಸುತ್ತದೆ.
80 years woman climbs 100 stairs



