ಕುಂದಾಪುರ : ಜುಗಾರಿ ಆಡುತ್ತಿದ್ದ ನಾಲ್ವರ ಬಂಧನ
Kundapura News (ಕುಂದಾಪುರ) : ಅಕ್ರಮವಾಗಿ ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತರರಿಂದ ₹11,620 ನಗದು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರು (ತನಿಖೆ) ಚಂದ್ರಕಲಾ ಪತ್ತಾರ ಅವರಿಗೆ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ಅರೆಕಲ್ಲು ಹುಣ್ಸೆಮನೆ ಎಂಬಲ್ಲಿ ಜುಗಾರಿ ಆಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರಕಿತ್ತು. ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು, ಸ್ಥಳದಲ್ಲೇ ಜುಗಾರಿ ಆಟ ಆಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ.
ಕಾರ್ಕಳದ ಸಮರ್ಥ (27ವರ್ಷ), ಬೈಂದೂರಿನ ಕಿಶನ್ (45 ವರ್ಷ), ಮಂಗಳೂರಿನ ಪ್ರದೀಪ (42 ವರ್ಷ) ಮತ್ತು ಗುಲ್ವಾಡಿಯ ನಿಸಾರ್ ಶೇಖ್ (42ವರ್ಷ) ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಕೆಲವರು ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕೋಟ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ, ರಿಕ್ಷಾ ವಶ
ಜುಗಾರಿ ಆಡುತ್ತಿದ್ದ ಸ್ಥಳದಲ್ಲಿ ₹11,620 ನಗದು, ಇಸ್ಪೀಟ್ ಎಲೆಗಳು, ಒಂದು ನೀಲಿ ಪ್ಲಾಸ್ಟಿಕ್ ಚೀಲ, ಮತ್ತು ನಾಲ್ಕು ಮೊಬೈಲ್ ಫೋನ್ ಜೊತೆಗೆ ಒಂದು ಸ್ಯಾಂಟ್ರೋ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 60/2025, ಕಲಂ: 87 ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಎಂಎಸ್ಎಂಇ ಗಳ ಕಾರ್ಯಕ್ಷಮತೆ ಹೆಚ್ಚಿಸಿ, ಉದ್ಯಮ ವಿಸ್ತರಿಸಲು ಅರಿವು ಕಾರ್ಯಕ್ರಮ: ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ



