ನವರಾತ್ರಿ 2ನೇ ದಿನ ಬ್ರಹ್ಮಚಾರಿಣಿಯಾಗಿ ಜಗಜ್ಜನನಿ – ಮನೋಬಲ ಹೆಚ್ಚಿಸಲು ತಾಯಿಯನ್ನು ಸ್ಮರಿಸಿ

Navaratri : ದಧಾನ ಕರಪದ್ಮಾಭ್ಯಾಂ ಅಕ್ಷಮಾಲಾ ಕಮಂಡಲೂ, ದೇವಿ ಪ್ರಸೀದತು ಮಯಿ ಬ್ರಹ್ಮಚಾರಿಣ್ಯ ನುತ್ತಮ, ದು ತಾಯಿ ಬ್ರಹ್ಮಚಾರಿಣಿಯನ್ನು ಪೂಜಿಸುವ ಶ್ಲೋಕ. ಹೌದು ನವರಾತ್ರಿ ಎರಡು ದಿನವಾದ ಹಿಂದೂ ಬ್ರಹ್ಮಚಾರಿ ಆಗಿ ಪೂಜಿಸಲಾಗುತ್ತೆ.

ಈ ಶ್ಲೋಕದಲ್ಲಿ ಕೈಯಲ್ಲಿ ಕಮಲ ಕಮಂಡಲ ಹಾಗೂ ಹಾಗೂ ರುದ್ರಾಕ್ಷಿಯನ್ನು ಹಿಡಿದಿರುವ ಬ್ರಹ್ಮಚಾರಿಣಿ ರೂಪದಲ್ಲಿ ತಾಯಿ ಕಾಣಿಸಿಕೊಳ್ಳುತ್ತಾಳೆ. ನಿನ್ನೆ ಬಾಲಕಿಯಾಗಿದ್ದ ತಾಯಿಯ ರೂಪ . ಇಂದು ಯುವತಿಯಾಗಿ ಇಷ್ಟಕಾಮ್ಯವನ್ನು ಈಡೇರಿಸಲು ತಪಸ್ಸಿಗೆ ಹೊರಟ ಮನೋಭಲ ಪೂರ್ಣವಾದ ಹೆಣ್ಣಾಗಿ ಕಾಣುತ್ತದೆ. ಹೌದು ಇದು ತನ್ನ ಆರಾಧ್ಯ ದೇವನಾದ ಶಿವನನ್ನು ಒಲಿಸಲು ತಪಸ್ಸಿಗೆ ಹೊರಟ ಪಾರ್ವತಿಯ ರೂಪ.

Navaratri ಬ್ರಹ್ಮ ಚಾರಿಣಿ ಕಥೆ

ಸತಿ ದೇವಿಯು ಮತ್ತೊಂದು ದೇಹಧರಿಸಿ ಪರ್ವತರಾಜನ ಮಗಳಾಗಿ ಜನಿಸಿ ಬಂದಿದ್ದಳು. ನಾರದರ ಸಹಾಯದಿಂದ ತನ್ನ ಹುಟ್ಟಿನ ಸತ್ಯವನ್ನು ಅರಿತಿದ್ದ ತಾಯಿ ಪಾರ್ವತಿ ಶಿವನನ್ನು ಪಡೆಯಲು ಬಯಸಿದಳು.

ಅದೇ ವೇಳೆಗೆ ಶಿವ ಪರಮಾತ್ಮ ತಪಸ್ಸಿಗಾಗಿ ಪರ್ವತರಾಜ ಹಿಮವಂಥ ಶಿಖರ ಗಳಿಗೆ ಬಂದಿದ್ದ . ತನ್ನ ಪುತ್ರಿಯನ್ನು ಶಿವನಿಗೆ ನೀಡಬೇಕೆಂದು ಬಯಸಿದ್ದ ಹಿಮವಂತ ಶಿವನಿಗೆ ತಪಸ್ಸಿಗೆ ತನ್ನ ರಾಜ್ಯದಲ್ಲಿ ಅವಕಾಶ ನೀಡಿದ್ದ ಜೊತೆಗೆ ಶಿವನಿಗೆ ಸೇವೆ ಮಾಡಲು ತಾಯಿ ಪಾರ್ವತಿಯನ್ನು ನೇಮಿಸಿದ.

ಈ ಅವಕಾಶಕ್ಕಾಗಿ ಕಾದಿದ್ದ ದೇವತೆಗಳು ಕಾಮದೇವನ ಮೂಲಕ ಪಾರ್ವತಿಯ ಕಡೆಗೆ ಶಿವ ಆಕರ್ಷಿತನಾಗುವಂತೆ ಮಾಡಲು ಮನ್ಮಥನ ಸಹಾಯವನ್ನು ಪಡೆದರು. ಅದ್ಯಾವಾಗ ಮನ್ಮಥ ಹೂಬಾಣವನ್ನು ಕೂಡಿ ತಪಸ್ಸು ಭಂಗ ಮಾಡದನೋ ಆಗ ಶಿವ ಮೂರನೇ ಕಣ್ಣಿನಿಂದ ಕಾಮ ದೇವನನ್ನು ಭಸ್ಮ ಮಾಡಿದನಂತೆ ಅಂದಿನಿಂದ ಕಾಮ ದೇವನಿಗೆ ಅನಂಗ ಎಂಬ ಹೆಸರು ಬಂದಿತು.

ಇದಾದ ನಂತರ ತಾನು ಶಿವನನ್ನು ಪಡೆಯಲು ತಪಸ್ಸೋಂದೇ ದಾರಿ ಎಂದರೆ ತಾಯಿ ಬ್ರಹ್ಮಚಾರಿಣಿ ರೂಪದಲ್ಲಿ ತಪಸ್ಸಿಗೆ ಹೊರಟರಂತೆ. ಮೊದಲು ನಾಲ್ಕು ಕಡೆಗಳಲ್ಲಿ ಅಗ್ನಿಯನ್ನು ಪ್ರಜಲ್ವಲಿಸಿ ತಪಸ್ಸಿಗೆ ಕುಳಿತ ತಾಯಿ ಮೊದಲು ಆಹಾರ ತೊರೆದು ಬರೀ ದಿನಕ್ಕೊಂದು ಬಿಲ್ವ ಪತ್ರೆಯನ್ನು ತಿಂದು ತಪಸ್ಸು ಮಾಡಿದರಂತೆ. ಮುಂದೆ ತಪಸ್ಸು ಕಠಿಣವಾಗುತ್ತಿದ್ದಂತೆ ಗಾಳಿ ನೀರು ತ್ಯಜಿಸಿ ಒಂದೇ ಕಾಲಲ್ಲಿ ನಿಂತು ತಪಸ್ಸು ಮಾಡಿ ಶಿವನ ಶಿವೆಯಾದರು ಅನ್ನೋದನ್ನು ಶಿವಪುರಾಣ ಹೇಳುತ್ತೆ. ಹೀಗೆ ಬಿಲ್ವದ ಎಲೆಯನ್ನು ತಿಂದ ಕಾರಣ ಈಕೆಗೆ ಅಪರ್ಣೆ ಎಂಬ ಹೆಸರು ಬಂತು.

ಬ್ರಹ್ಮ ಚಾರಿಣಿ ರೂಪದ ವಿಶೇಷತೆ :

ಈ ಬ್ರಹ್ಮಚಾರಿಣಿ ರೂಪವನ್ನು ಹೆಣ್ಣಿನ ದೃಡತೆ ಹಾಗೂ ಶಕ್ತಿಯ ಪ್ರತೀಕ ಎಂದು ನಂಬಲಾಗುತ್ತೆ. ಇಲ್ಲಿ ಹೆಣ್ಣು ವಿರಕ್ತಿಯಾಗಿ ತನ್ನ ಗುರಿಯ ಸಾಧನೆ ಮಾಡುವ ರೀತಿಯ ಭಂಗಿಯನ್ನು ತಾಯಿಯಲ್ಲಿ ಕಾಣಲಾಗುತ್ತದೆ. ಕೈಯಲ್ಲಿ ಕಮಾಂಡಲ ಬೆರಳಲ್ಲಿ ಜಪಮಾಲೆ ಹಿಡಿದುಕೊಂಡು ನಿಂತಿರುವ ಈ ಬ್ರಹ್ಮಚಾರಿಣಿ ರೂಪ ತಾಯಿಯ ವಿಶಿಷ್ಟ ರೂಪದಲ್ಲಿ ಒಂದು.

ಇನ್ನೂ ಬ್ರಹ್ಮಚಾರಿಣಿ ರೂಪದಲ್ಲಿ ತಾಯಿ ಮಂಗಳನ ಅಧಿಪತಿಯಾಗಿದ್ದಾಳೆ. ಯಾರಿಗಾದ್ರೂ ಮಂಗಳನ ದೋಷವಿದ್ದರೆ, ಈ ದೇವಿ ಆರಾಧನೆಯಿಂದ ಮಾನಸಿಕ ಕ್ಷೋಭೆಗಳು ಕಳೆದು ಕಷ್ಟ ನಿವಾರಿಸುತ್ತಾಳೆ ಎಂಬ ನಂಬಿಕೆ ಇದೆ. ಈ ರೂಪದಲ್ಲಿ ತಾಯಿಗೆ ಪ್ರಿಯವಾದ ಹೂ ಎಂದರೆ ಅದು ಮಲ್ಲಿಗೆ ಅಥವಾ ಬಿಳಿ ಬಣ್ಣದ ಸೇವಂತಿಗೆ.ಈ ದಿನ ಈ ಹೂಗಳಿಂದ ಪೂಜೆ ಮಾಡಿದ್ರೆ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆಯಂತೆ.

ಇನ್ನು ಸಾಧಕರ ಪಾಲಿಗೆ ಇದು ಸಾಧನೆಯ ದಿನವಾಗಿದ್ದು ಇಂದು ಸ್ವಾಧಿಷ್ಟಾನ ಚಕ್ರದಲ್ಲಿ ತಾಯಿಯನ್ನು ನೆಲೆ ನಿಲ್ಲಿಸಿ ಸಾಧನೆ ಮಾಡುತ್ತಾರೆ. ಬ್ರಹ್ಮಚಾರಿಣಿಯು ಸ್ವಾಧಿಷ್ಟಾನ ಚಕ್ರದಲ್ಲಿ ನೆಲೆ ನಿಂತಿರೋದ್ರಿಂದ ಇದನ್ನು ಜಾಗೃತ ಮಾಡಿಕೊಂಡರೆ ಮಾನಸಿಕ ದೃಡತೆ ಹಾಗೂ ಮಾನಸಿಕ ರೋಗಗಳು ನಿವಾರಣೆಯಾಗುತ್ತೆ .

ಬ್ರಹ್ಮ ಚಾರಿಣಿ ವಿಶೇಷ ಆಚರಣೆ

ಆಚರಣೆಯ ವಿಚಾರಕ್ಕೆ ಬರೋದಾದ್ರೆ ಈ ದಿನ ಒಂದರಿಂದ ಹತ್ತು ವರ್ಷದ ಬಾಲಕಿಯರನ್ನು ಕರೆದು ಪೂಜಿಸುವ ಪರಿಪಾಠವಿದೆ. ಈ ಬಾಲಕಿಯರು ತಾಯಿ ಬ್ರಹ್ಮಚಾರಿ ಸ್ವರೂಪವೆಂದು ನಂಬಲಾಗುತ್ತದೆ. ಮಕ್ಕಳನ್ನು ಕರೆದು ಪಾದ ಪೂಜೆ ಮಾಡುವುದರಿಂದ ಸಂಪತ್ತು ನೆಮ್ಮದಿ ಹಾಗೂ ಹಾಗೂ ಭವ ರೋಗಗಳು ನಿರ್ಮೂಲನೆಯಾಗುತ್ತವೆ ಅನ್ನುವ ನಂಬಿಕೆ ಇದೆ.

Vandana kommunje | ವಂದನಾ ಕೊಮ್ಮುಂಜೆ

Vandana Kommunje Senior Content Writer. Working in more than 10 Years in Kannada Famous News Channesl. Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories