ನಿಮ್ಮ ಮನೆಯ ಜಾತಿಗಣತಿ ನೀವೇ ಮಾಡಿ : ಮೊಬೈಲ್‌ನಲ್ಲಿ ಜಾತಿ ಸಮೀಕ್ಷೆ ಮಾಡುವುದು ಹೇಗೆ ?

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ (Karnataka State Commission for Backward Classes – KSCBC) ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 (Social and Educational Survey 2025) ನಡೆಸುತ್ತಿದೆ. ಜಾತಿಗಣತಿಯಲ್ಲಿ ಸಮೀಕ್ಷೆದಾರರಿಗೆ ಕಾಯದೇ ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ಸ್ವಯಂ ಸಮೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ಕರ್ನಾಟಕ ರಾಜ್ಯದ ಎಲ್ಲಾ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಗತಿಯ ಬಗ್ಗೆ ಸಮಗ್ರ ದತ್ತಾಂಶವನ್ನು ಸಂಗ್ರಹಿಸುವುದಾಗಿದೆ.

ಜಾತಿಗಣತಿಯಲ್ಲಿ ಭಾಗವಹಿಸಲು ಎರಡು ಮುಖ್ಯ ವಿಧಾನಗಳಿವೆ, ಮತ್ತು ಎರಡರಲ್ಲೂ ಮೊಬೈಲ್ ಅಥವಾ ಆನ್‌ಲೈನ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ:

ನೀವೇ ಸ್ವಯಂ ಘೋಷಣೆ ಮಾಡಿ (Self-Declaration)

ಗಣತಿದಾರರು ನಿಮ್ಮ ಮನೆಗೆ ಭೇಟಿ ನೀಡುವುದನ್ನು ತಪ್ಪಿಸಿದ್ರೆ ಅಥವಾ ಗಣತಿದಾರರ ಜೊತೆಗೆ ನೀವು ವಿವರಗಳನ್ನು ಹಂಚಿಕೊಳ್ಳಲು ಇಷ್ಟ ಇಲ್ಲದೇ ಇದ್ರೆ, ನೀವು ಮನೆಯಲ್ಲಿಯೇ ಕುಳಿತು ಸರ್ವೆ ಕಾರ್ಯವನ್ನು ಮಾಡಿಸಿಕೊಳ್ಳಲು ಅವಕಾಶವಿದೆ.

ನೀವು ಮೊಬೈಲ್‌ನಲ್ಲಿ ಆಪ್‌ ಬಳಸಿಕೊಂಡು, ಮೊಬೈಲ್‌ ಸಂಖ್ಯೆಯನ್ನು ನಮೂದಿಸುವ ಮೂಲಕ ನೀವೇ, ನಿಮ್ಮ ಮಾಹಿತಿಯನ್ನು ಸ್ವಯಂ ಆಗಿ ನಮೂದಿಸಬಹುದಾಗಿದೆ.

ಜಾತಿಗಣತಿ ಅಧಿಕೃತ ವೆಬ್‌ಸೈಟ್‌ ಕ್ಲಿಕ್‌ ಮಾಡಿ

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧಿಕೃತ ವೆಬ್‌ಸೈಟ್‌ https://kscbcselfdeclaration.karnataka.gov.in/ ಅಥವಾ KSCBC ಕ್ಯೂ ಆರ್‌ ಕೋಡ್‌ ಬಳಸಿಕೊಂಡು ಸರ್ವೆ ಕಾರ್ಯವನ್ನು ನಡೆಸಬಹುದಾಗಿದೆ. ಹಾಗಾದ್ರೆ ನೀವೆ ನಿಮ್ಮ ಮನೆಯ ಜಾತಿಗಣತಿ ಮಾಡಲು ಈ ಕೆಳಗಿನ ಹಂತವನ್ನು ಅನುಸರಿಸಿ.

  • ಮೊದಲು https://kscbcselfdeclaration.karnataka.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿ OTP ಮೂಲಕ ಲಾಗಿನ್ ಆಗಿ.
  • ಸಮೀಕ್ಷೆಯಲ್ಲಿ ಕೇಳಲಾದ 60 ಪ್ರಶ್ನೆಗಳ ಫಾರ್ಮ್ ಅನ್ನು ನೀವೇ ಭರ್ತಿ ಮಾಡಿ.
  • ಎಲ್ಲಾ ವಿವರಗಳನ್ನು ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ (Submit).

ಸಹಾಯವಾಣಿ (Helpline): ಯಾವುದಾದರೂ ಗೊಂದಲ ಅಥವಾ ದೂರುಗಳಿದ್ದರೆ, ಆಯೋಗವು 8050770004 ಎಂಬ ಸಹಾಯವಾಣಿಯನ್ನು ಸಹ ಪ್ರಾರಂಭಿಸಿದೆ. ಈ ಸಂಖ್ಯೆಗೆ ಕರೆ ಮಾಡುವ ಮೂಲಕವೂ ಮಾಹಿತಿ ನೀಡುವ ಆಯ್ಕೆಯನ್ನು ಪರಿಗಣಿಸಲಾಗಿದೆ.

ಜಾಣತಿದಾರರು ಮನೆಗೆ ಬಂದು ಡೇಟಾ ಸಂಗ್ರಹಿಸುವುದೇ ಸಮೀಕ್ಷೆಯ ಪ್ರಮುಖ ಭಾಗವಾಗಿದೆ. ಆನ್‌ಲೈನ್/ಸ್ವಯಂ ಘೋಷಣೆಯ ಆಯ್ಕೆಯು ಗಣತಿದಾರರಿಂದ ತಪ್ಪಿಹೋದ ಕುಟುಂಬಗಳಿಗೆ ಮಾತ್ರ ಹೆಚ್ಚುವರಿ ಸೌಲಭ್ಯವಾಗಿದೆ.

ನಿಮ್ಮ ಗಣತಿ ನೀವೇ ಮಾಡಿದ್ರೆ ಅನುಕೂಲವೇನು ?

ಜಾತಿಗಣತಿಯ ವೇಳೆಯಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳನ್ನು ಅರಿಯಲು ಆಯೋಗ ಹಲವು ಪ್ರಶ್ನೆಗಳನ್ನು ನೀಡಿದೆ. ಒಂದೊಮ್ಮೆ ಗಣತಿದಾರರ ಜೊತೆಗೆ ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳಲು ಇಷ್ಟ ಇಲ್ಲದೇ ಇದ್ದರೆ, ನೀವೇ ಮನೆಯಲ್ಲಿಯೇ ಕುಳಿತು ಆಯೋಗದ ವೆಬ್‌ಸೈಟ್‌ ಮೂಲಕ ದಾಖಲೆಯನ್ನು ನಮೂದಿಸಬಹುದಾಗಿದೆ.

ಒಂದೊಮ್ಮೆ ನೀವೇ ಸರ್ವೆ ಕಾರ್ಯವನ್ನು ನಡೆಸಲು ಇಚ್ಚಿಸಿದ್ರೆ ನೀವು ಗಣತಿದಾರರು ಮನೆಗೆ ಬರುವವರೆಗೂ ಕಾಯಬೇಕಾದ ಅಗತ್ಯವಿಲ್ಲ. ನೀವು ಮನೆಯಲ್ಲಿಯೇ ಕುಳಿತು ರೇಷನ್‌ ಕಾರ್ಡ್‌ ಅಥವಾ ಆಧಾರ್‌ ಕಾರ್ಡ್‌ ಬಳಸಿಕೊಂಡು ನೋಂದಣಿ ಮಾಡಬಹುದು. ರೇಷನ್‌ ಕಾರ್ಡ್‌ ಮೂಲಕ ಲಾಗಿನ್‌ ಮಾಡಿದ್ರೆ ಕುಟುಂಬದ ಎಲ್ಲಾ ಸದಸ್ಯರ ಮಾಹಿತಿ ಲಿಂಕ್‌ ಆಗಿರುತ್ತೆ. ಹೆಚ್ಚುವರಿ ಜನರನ್ನು ಸೇರಿಸಲು ಆಧಾರ್‌ ಕಾರ್ಡ್‌ ಬಳಕೆ ಮಾಡಬಹುದು.

ಒಂದೊಮ್ಮೆ ನಿಮ್ಮ ಬಳಿ ರೇಷನ್‌ ಕಾರ್ಡ್‌ ಇಲ್ಲದೇ ಇದ್ದರೆ, ಆಧಾರ್‌ ಕಾರ್ಡ್‌ ಬಳಸಿಕೊಂಡು ಮೊಬೈಲ್‌ ಒಟಿಪಿ ಮೂಲಕ ಲಾಗಿನ್‌ ಮಾಡಬಹುದು. ನಂತರ ಕುಟುಂಬದ ಎಲ್ಲಾ ಸದಸ್ಯರನ್ನು ಜಾಯಿನ್‌ ಮಾಡಲು ಅವಕಾಶವಿದೆ.

ಇದನ್ನೂ ಓದಿ: ಜನಗಣತಿಗೆ ಬಿಜೆಪಿ ವಿರೋಧವಿಲ್ಲ, ಕಾಂಗ್ರೆಸ್‌ನಲ್ಲೇ ಅಪಸ್ವರ : ಸುನಿಲ್‌ ಕುಮಾರ್‌

ಸ್ವಯಂ ಘೋಷಣೆ: ಯಾವೆಲ್ಲಾ ದಾಖಲೆ ನೀಡಬೇಕು ?

ಕುಟುಂಬದ ಗುರುತು ಮತ್ತು ವಿಳಾಸಕ್ಕಾಗಿ:

    ಆಧಾರ್ ಕಾರ್ಡ್ (Aadhaar Card): ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಸಂಖ್ಯೆಗಳು ಕಡ್ಡಾಯವಾಗಿ ಬೇಕಾಗುತ್ತವೆ. ಇದನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಿ ದೃಢೀಕರಿಸಲಾಗುತ್ತದೆ.

    ರೇಷನ್ ಕಾರ್ಡ್ (Ration Card) / ಪಡಿತರ ಚೀಟಿ: ಕುಟುಂಬದ ಸದಸ್ಯರ ವಿವರಗಳು ಮತ್ತು ಸರ್ಕಾರಿ ಸೌಲಭ್ಯಗಳ ದೃಢೀಕರಣಕ್ಕೆ ಇದು ಮುಖ್ಯ.

    ವೋಟರ್ ಐಡಿ (Voter ID): ಕುಟುಂಬದ ಸದಸ್ಯರ ಪಟ್ಟಿ ಮತ್ತು ವಿಳಾಸದ ದೃಢೀಕರಣಕ್ಕೆ ಬೇಕಾಗಬಹುದು.

    ಯುನಿಕ್ ಹೌಸ್‌ಹೋಲ್ಡ್ ಐಡಿ (UHID): ವಿದ್ಯುತ್ ಮೀಟರ್ ಸಂಖ್ಯೆಯ ಆಧಾರದ ಮೇಲೆ ನಿಮ್ಮ ಮನೆಗೆ ನೀಡಲಾದ ವಿಶಿಷ್ಟ ಗುರುತಿನ ಸಂಖ್ಯೆ.

    ಶೈಕ್ಷಣಿಕ ಮತ್ತು ಆರ್ಥಿಕ ವಿವರಗಳಿಗಾಗಿ:

    ಜಾತಿ ಮತ್ತು ಆದಾಯ ಪ್ರಮಾಣಪತ್ರ (Caste and Income Certificate): ನಿಮ್ಮ ಜಾತಿ ಮತ್ತು ಆದಾಯದ ವಿವರಗಳ ಬಗ್ಗೆ ಕೇಳಿದಾಗ, ಅಧಿಕೃತ ಪ್ರಮಾಣಪತ್ರಗಳಿಂದ ಮಾಹಿತಿ ನೀಡಿದರೆ ನಿಖರವಾಗಿರುತ್ತದೆ.

      ಶೈಕ್ಷಣಿಕ ಪ್ರಮಾಣಪತ್ರಗಳು (Educational Documents): ಮನೆಯ ಸದಸ್ಯರ ಶಿಕ್ಷಣದ ಮಟ್ಟದ ಬಗ್ಗೆ ನಿಖರವಾದ ಮಾಹಿತಿ ನೀಡಲು.

      ಆಸ್ತಿ/ಭೂ ದಾಖಲೆಗಳು (Land/Property Documents): ಭೂ ಮಾಲೀಕತ್ವ, ವಾಹನಗಳು ಮತ್ತು ಇತರ ಆರ್ಥಿಕ ವಿವರಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು.

      ಬ್ಯಾಂಕ್ ಖಾತೆ ವಿವರಗಳು (Bank Account Details): ಮನೆಯ ಮುಖ್ಯಸ್ಥರು ಸರ್ಕಾರಿ ಯೋಜನೆಗಳ ಲಾಭ ಪಡೆಯುತ್ತಿದ್ದರೆ, ಆರ್ಥಿಕ ಸ್ಥಿತಿಯ ದೃಢೀಕರಣಕ್ಕೆ.

      ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಓಟರ್‌ ಐಡಿ, ಆಧಾರ್‌ ನೋಂದಾಯಿತ ಮೊಬೈಲ್‌ ನಿಮ್ಮ ಬಳಿಯಲ್ಲಿಯೇ ಇರಲಿ. ಇಷ್ಟು ದಾಖಲೆ ಸಿದ್ದವಾಗಿಟ್ರೆ ಜಾತಿಗಣತಿ ನಡೆಸೋದಕ್ಕೆ ಸಾಧ್ಯವಾಗಲಿದೆ.

      ಇದನ್ನೂ ಓದಿ : Karnataka Caste Survey : ಜಾತಿಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು : ಸರಕಾರದ ವಿರುದ್ದ ಶಿಕ್ಷಕರ ಆಕ್ರೋಶ

      ಗಣತಿದಾರರ (Enumerator) ಭೇಟಿ ಮೂಲಕ ಗಣತಿ

      ಶಿಕ್ಷಕರು ಅಥವಾ ಇತರ ಸರ್ಕಾರಿ ಸಿಬ್ಬಂದಿಯನ್ನು ಒಳಗೊಂಡಿರುವ ಸುಮಾರು 1.75 ಲಕ್ಷ ಗಣತಿದಾರರು (Enumerators) ಮನೆ ಮನೆಗೆ ಭೇಟಿ ನೀಡುತ್ತಾರೆ.

      ಗಣತಿದಾರರು KSCBC S&E Survey ಎಂಬ ವಿಶೇಷ ಮೊಬೈಲ್ ಅಪ್ಲಿಕೇಶನ್ (ಆ್ಯಪ್) ಅನ್ನು ಬಳಸುವ ಮೂಲಕ ಕುಟುಂಬದ ಮುಖ್ಯಸ್ಥರಿಂದ ಮತ್ತು ಸದಸ್ಯರಿಂದ ಮಾಹಿತಿಯನ್ನು ಸಂಗ್ರಹಿಸುತ್ತಾರೆ.

      ರೇಷನ್‌ ಕಾರ್ಡ್‌ ಅಥವಾಆಧಾರ್ ಕಾರ್ಡ್ ವಿವರಗಳನ್ನು ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿ ದೃಢೀಕರಿಸಲಾಗುತ್ತದೆ. ಈ ಸಂದರ್ಭದಲ್ಲಿ OTP ಅಥವಾ ಫೇಸ್ ರೆಕಗ್ನಿಷನ್ ತಂತ್ರಜ್ಞಾನವನ್ನು ಸಹ ಬಳಸಲಾಗುತ್ತಿದೆ.

      ಕರ್ನಾಟಕ ರಾಜ್ಯದ ಪ್ರತೀ ಮನೆಯಲ್ಲಿ ಯುಎಚ್ಐಡಿ ಸಂಖ್ಯೆಯನ್ನು ಒಳಗೊಂಡಿರುವ ಸ್ಟಿಕ್ಕರ್‌ ಅಳವಡಿಸಲಾಗಿದೆ. ಈ ಸ್ಟಿಕ್ಕರ್‌ನಲ್ಲಿ ಇರುವ ಯುಎಚ್‌ಐಡಿ ಸಂಖ್ಯೆಯನ್ನು ಬಳಸಿಕೊಂಡು ಗಣತಿದಾರರು ಸರ್ವೆ ಕಾರ್ಯವನ್ನು ನಡೆಸುತ್ತಾರೆ.

      ನಿಮ್ಮ ಮನೆಗೆ ಬರುವ ಗಣತಿದಾರರಿಗೆ ಸರ್ವೆಗಾಗಿ ಕೇಳಲಾದ 60 ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸಬೇಕು. ಗಣತಿ ಕಾರ್ಯಕ್ಕೆ ಯಾವುದೇ ಕ್ಷಣದಲ್ಲೂ ನಿಮ್ಮ ಮನೆಗೆ ಭೇಟಿ ನೀಡಬಹುದು. ನೀವು ಕಡ್ಡಾಯವಾಗಿ ರೇಷನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಮತ್ತು ಇತರ ಆಸ್ತಿ ವಿವರಗಳ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಉತ್ತಮ.

      Kannada News Next Desk

      Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

      Related Stories