Manipal News: ಮಣಿಪಾಲ: ಯುವಕ ನಾಪತ್ತೆ, ಸೇತುವೆ ಬಳಿ ಬೈಕ್ ಪತ್ತೆ

Manipal News (ಮಣಿಪಾಲ): ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ನಾಪತ್ತೆಯಾಗಿದ್ದಾರೆ. ಜಯಂತ್ (34 ವರ್ಷ) ಎಂಬವರೇ ನಾಪತ್ತೆ ಆದ ಯುವಕ.
ಉಡುಪಿ ಜಿಲ್ಲೆಯ ಶಿವಳ್ಳಿ ಗ್ರಾಮದ ಮಣಿಪಾಲ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದ ಜಯಂತ್ ಅಕ್ಟೋಬರ್ 4 ರಂದು ಮಧ್ಯಾಹ್ನ ತನ್ನ ರೂಮಿನಿಂದ ಬೈಕ್ನಿಂದ ತೆರಳಿದ್ದಾರೆ. ತದನಂತರದಲ್ಲಿ ಜಯಂತ್ ನಾಪತ್ತೆ ಆಗಿದ್ದಾರೆ.
ಜಯಂತ್ ಅವರ ಬೈಕ್ ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಮಾಣೈ ಸೇತುವೆಯ ಬಳಿಯಲ್ಲಿ ಬೈಕ್ ಪತ್ತೆಯಾಗಿತ್ತು. ಆದರೆ ಜಯಂತ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಸಂದೇಶ್ ಎಂಬವರು ದೂರು ನೀಡಿದ್ದಾರೆ.
Also Read: ಮಣಿಪಾಲ: ಜುಗಾರಿ ಅಡ್ಡೆ ಮೇಲೆ ದಾಳಿ, ನಾಲ್ವರ ಬಂಧನ
ಜಯಂತ್ ಸುಮಾರು 14 ವರ್ಷಗಳಿಂದ ಮಣಿಪಾಲದಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಹುಡ್ಕೋ ಕಾಲೋನಿಯಲ್ಲಿ ಸಹೋದರನೊಂದಿಗೆ ವಾಸವಾಗಿದ್ದರು.
ಈ ಕುರಿತು ಮಣಿಪಾಲ(Manipal) ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Also Read: ಕುಂದಾಪುರ: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿ ರಂಪಾಟ, ಪ್ರಕರಣ ದಾಖಲು



