ನಾಳೆ ಲಾಂಚ್‌ ಆಗಲಿದೆ ಟಾಟಾ ಸಿಯಾರಾ ಇವಿ : ಟೀಸರ್‌ ನೋಡಿ ಬೆರಗಾದ ಕಾರು ಪ್ರಿಯರು..!

ಟಾಟಾ ಈಗಾಗಲೇ ಐಸಿಇ ಮಾದರಿಯಲ್ಲಿ ಬಿಡುಗಡೆ ಮಾಡಿರುವ ಕಾರನ್ನು ಇವಿ ಆವೃತ್ತಿಯಲ್ಲಿ ನಾಳೆ ಅಂದರೆ ಜೂನ್‌ 30, 2026ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಬಿ

ಭಾರತದ ಕಾರು ನಿರ್ಮಾತೃ ದಿಗ್ಗಜ ಕಂಪನಿ ಟಾಟಾ ಮೋಟಾರ್ಸ್‌ ತನ್ನ ಹಳೆಯ ಕಾರುಗಳಲ್ಲಿ ಒಂದಾದ ಸಿಯಾರಾವನ್ನು ಹೊಸ ಇವಿ ಅವತಾರದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈಗಾಗಲೇ ಐಸಿಇ ಮಾದರಿಯಲ್ಲಿ ಬಿಡುಗಡೆ ಮಾಡಿರುವ ಕಾರನ್ನು ಇವಿ ಆವೃತ್ತಿಯಲ್ಲಿ ನಾಳೆ ಅಂದರೆ ಜೂನ್‌ 30, 2026ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಬಿಡುಗಡೆ ಮಾಡುವುದಕ್ಕೂ ಮುನ್ನ ಕಂಪನಿ ಈ ಎಲೆಕ್ಟ್ರಿಕ್‌ ಎಸ್‌ಯುವಿಯ ಟೀಸರ್‌ ಬಿಡುಗಡೆ ಮಾಡಿದೆ. ಅದರ ಪ್ರಕಾರ ವೀಡಿಯೋದಲ್ಲಿ ಕಾರು ಯುಎಇಯ ಅಬುಧಾಬಿಯಲ್ಲಿರುವ ವಿಶ್ವದ ಅತಿ ಎತ್ತರದ ಹಾಗೂ ಅತ್ಯಂತ ಅಪಾಯಕಾರಿ ಮರಭೂಮಿ ತಾಲ್‌ ಮೊರೀಬ್‌ನ ಮರಳು ದಿಬ್ಬಗಳನ್ನು ಬಹಳ ಸುಲಭವಾಗಿ ಹತ್ತುವುದನ್ನು ಕಾಣಬಹುದು. ಇದರ ಮೂಲಕ ಕಾರಿಗಿರುವ ಅದ್ಭುತ ಶಕ್ತಿಯನ್ನು ಸಾಬೀತುಪಡಿಸುತ್ತಿದೆ. ಇಂತಹ ಅದ್ಭುತ ಎಲೆಕ್ಟ್ರಿಕ್‌ ಕಾರಿನ ವೈಶಿಷ್ಟ್ಯಗಳೇನು? ಟೀಸರ್‌ನಿಂದ ತಿಳಿದು ಬರುವುದೇನು ಎಂದು ನೋಡೋಣ.

ಟಾಟಾ ಸಿಯಾರಾ ಇವಿ ಸಾಮರ್ಥ್ಯ ಹೇಗಿದೆ?

ಹೊಸ ಸಿಯಾರಾ ಇವಿ ಕೇವಲ ನಗರ ಸಂಚಾರಕಷ್ಟೇ ಅಲ್ಲ ಒರಟಾದ ಭೂಭಾಗಗಳಿಗೂ ಸೂಕ್ತವಾಗಿದೆ ಎಂಬುದನ್ನು ಟೀಸರ್‌ ಸ್ಪಷ್ಟಪಡಿಸುತ್ತದೆ. ಅಂದರೆ ಇದರಲ್ಲಿ ಅತ್ಯುತ್ತಮ ಆಫ್‌–ರೋಡ್‌ ಸಾಮರ್ಥ್ಯವಿದೆ.

ಟಾಟಾದ ಮುಂಬರುವ ಹ್ಯಾರಿಯರ್ ಇವಿಯಂತೆ, ಇದು ಕೂಡಾ ಡ್ಯುಯಲ್-ಮೋಟಾರ್ ಕ್ವಾಡ್ ವೀಲ್ ಡ್ರೈವ್ (4WD) ವ್ಯವಸ್ಥೆಯನ್ನು ಹೊಂದಿದೆ. ಅಂದರೆ ಎಲ್ಲಾ ನಾಲ್ಕು ಚಕ್ರಗಳು ಪ್ರತ್ಯೇಕವಾಗಿ ಚಾಲಿಸಬಲ್ಲದು.

ಟೀಸರ್‌ನಲ್ಲಿ ತೋರಿಸಿದಂತೆ ಈ ಕಾರು ಮರಳು ದಿಬ್ಬಗಳನ್ನು ಸುಲಭವಾಗಿ ಏರಬಹುದಾದ ವೈಶಿಷ್ಟ್ಯವನ್ನ ಹೊಂದಿದೆ. ಅಂದರೆ ಇದರಲ್ಲಿ ಸ್ಯಾಂಡ್‌ ಮೋಡ್‌ ಇದೆ.

ಕಡಿದಾದ ಇಳಿಜಾರುಗಳಲ್ಲಿ ಹೆಚ್ಚಿನ ಶಕ್ತಿಯ ಅಗತ್ಯವಿರುವಾಗ ಬೂಸ್ಟ್ ಮೋಡ್ ಉಪಯುಕ್ತವಾಗುತ್ತದೆ. ಒಮ್ಮೆ ಸಕ್ರಿಯಗೊಳಿಸಿದ ನಂತರ, ವಾಹನವು ತಕ್ಷಣವೇ ಅದರ ಪೂರ್ಣ ಶಕ್ತಿ ಮತ್ತು ಟಾರ್ಕ್ ಅನ್ನು ಪಡೆಯುತ್ತದೆ. ಆಗ ಸುಲಭವಾಗಿ ಇಳಿಜಾರಿನ ಕಠಿಣ ರೋಡ್‌ಗಳಲ್ಲಿ ಡ್ರೈವ್‌ ಮಾಡಬಹುದಾಗಿದೆ. ಟೀಸರ್ ನಲ್ಲಿ ಕಂಪನಿ ಇದನ್ನೂ ಕೂಡಾ ಬಹಿರಂಗಪಡಿಸಿದೆ.

ಇದನ್ನೂ ಓದಿ: ಓಲಾಕ್ಕೆ ನೇರ ಸ್ಪರ್ಧೆ ನೀಡಿದ ಎಂಪಿಯರ್‌ ಎಲೆಕ್ಟ್ರಿಕ್‌ ಸ್ಕೂಟರ್‌ಗಳು : ಸೂಪರ್‌ ಲುಕ್ಕಿಗೆ ಫಿದಾ ಆದ ಗ್ರಾಹಕರು

ಬ್ಯಾಟರಿ ಹೇಗಿದೆ?

ಇನ್ನು ಬ್ಯಾಟರಿಯ ಕ್ಷಮತೆಯ ಬಗ್ಗೆ ಹೇಳುವುದಾದರೆ ಟೀಸರ್‌ನಲ್ಲಿ ಇದರ ವ್ಯಾಪ್ತಿಯನ್ನು ಬಹಿರಂಗಪಡಿಸಿದೆ. ಅದರ ಪ್ರಕಾರ ಬ್ಯಾಟರಿ 80% ಚಾರ್ಜ್‌ ಆದಾಗ ಕಾರು 424 ಕಿಲೋಮೀಟರ್ ಓಡಬಹುದು ಎಂದು ಪರದೆಯು ತೋರಿಸಿದೆ. ಅಂದರೆ ಬ್ಯಾಟರಿಯನ್ನು ಸಂಪೂರ್ಣವಾಗಿ 100% ರಷ್ಟು ಚಾರ್ಜ್ ಮಾಡಿದಾಗ, ಈ ಕಾರು ಸುಮಾರು 530 ಕಿಲೋಮೀಟರ್ ದೂರವನ್ನು ಸುಲಭವಾಗಿ ಕ್ರಮಿಸುತ್ತದೆ ಎಂದು ಅಂದಾಜಿಸಲಾಗಿದೆ. ಕಾರು ಖರೀದುದಾರರಿಗೆ 65 kWh ಮತ್ತು 75 kWh ನ ಎರಡು ದೊಡ್ಡ ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯಿರುತ್ತದೆ.

ಮತ್ತೇನಿದೆ ವೈಶಿಷ್ಟ್ಯ?

* ಕಾರಿನ ಸುತ್ತಲೂ ಇರುವ ಶೈನಿಂಗ್‌ ಬ್ಲಾಕ್‌ ಪ್ಲಾಸ್ಟಿಕ್‌ ಕ್ಲಾಡಿಂಗ್‌ ಇದಕ್ಕೆ ಸ್ಟೈಲಿಶ್‌ ಎಸ್‌ಯುವಿ ಲುಕ್‌ ಅನ್ನು ನೀಡುತ್ತದೆ.

* ಅತಿ ದೊಡ್ಡ ಪನೋರಮಿಕ್‌ ಸನ್‌ರೂಫ್‌, ಮೂರು ಟಚ್‌ಸ್ಕ್ರೀನ್‌ ಇರುವ ವಿಶಿಷ್ಟ ಡ್ಯಾಶ್‌ಬೊರ್ಡ್‌ ವಿನ್ಯಾಸ, ಮುಂಭಾಗದಲ್ಲಿ ಏರ್‌ಕಂಡೀಶನ್‌ ಸೀಟುಗಳು ಡ್ಯುಯಲ್-ಜೋನ್ ಎಸಿ ಮತ್ತು ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕವನ್ನು ಒಳಗೊಂಡಿರುವ ನಿರೀಕ್ಷೆಯಿದೆ.

* ಇದರ ಸ್ಟಿಯರಿಂಗ್‌ ವೀಲ್‌ ಗ್ಲಾಸ್ ಬ್ಲಾಕ್‌ ಪ್ಯಾನಲ್‌ ಹೊಂದಿದ್ದು ಅದರ ಮೇಲೆ ಟಾಟಾ ಲೋಗೋವನ್ನು ಹೊಂದಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories