ಸರಕಾರಿ ಜಾಗದಿಂದ ಸಿಲಿಕಾನ್ ಮರಳು ಅಕ್ರಮ ಸಾಗಾಟ : ಪ್ರಕರಣ ದಾಖಲು

ಕಾಪು: Silicon sand: ಸರಕಾರಿ ಜಾಗದಿಂದ ಸಿಲಿಕಾನ್‌ ಮರಳನ್ನು ಅಕ್ರಮವಾಗಿ ಸಾಗಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮೂರು ಲಾರಿಗಳ ಮಾಲೀಕರು ಹಾಗೂ ಚಾಲಕರ ವಿರುದ್ದ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲೆಯ ಕಾಪು(Kapu) ತಾಲೂಕಿನ ಮುಳೂರು ಗ್ರಾಮದ ಪೊಯ್ಯದ ಗುಡ್ಡೆ ಪ್ರದೇಶದಲ್ಲಿ ಜೆಸಿಬಿ ಬಳಸಿ ಅಕ್ರಮವಾಗಿ ಸಿಲಿಕಾನ್‌ ಮರಳನ್ನು ಸಾಗಾಟ ಮಾಡಲಾಗುತ್ತಿತ್ತು.

ಕಾಪು ಪೊಲೀಸ್ ಠಾಣೆಯ ಹೆಚ್.ಸಿ. ಜಗನ್ನಾಥ ನಾಯ್ಕ್‌ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆಯಲ್ಲಿ ಸಿಲಿಕಾನ್‌ ಮರಳನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.

Also Read: ಇನ್‌ಸ್ಟಾಗ್ರಾಮ್ ಜಾಹೀರಾತು ನಂಬಿ 1.93 ಲಕ್ಷ ಕಳೆದುಕೊಂಡ ಯುವತಿ

ಕೂಡಲದೇ ಮೂಳೂರು ಎಸ್.ಎಸ್. ರಸ್ತೆಯ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದರು. ಕ್ಯಾಮರಾದಲ್ಲಿ ಅಕ್ಟೋಬರ್‌ 1ರಂದು ಬೆಳಿಗ್ಗೆ 08:30 ರಿಂದ 12:30 ಗಂಟೆಯ ನಡುವೆ, KA20AB3474 ಮತ್ತು KL18K8768 ನಂಬರ್‌ನ ಎರಡು ಲಾರಿಗಳು ಹಾಗೂ ನಂಬರ್ ತಿಳಿಯದ ಒಂದು ಹಳದಿ ಬಣ್ಣದ ಈಚರ್ ಟಿಪ್ಪರ್ ಲಾರಿಯಲ್ಲಿ ಸಿಲಿಕಾನ್ ಮರಳನ್ನು ತುಂಬಿಸಿಕೊಂಡು ಹೋಗಿರುವುದು ಕಂಡುಬಂದಿದೆ.

ಈ ವಾಹನಗಳ ಚಾಲಕರು ಮತ್ತು ಮಾಲಕರು ತಮ್ಮ ಸ್ವಂತ ಲಾಭಕ್ಕಾಗಿ ಸರ್ಕಾರಿ ಸ್ವತ್ತಾದ ಖನಿಜವನ್ನು ಕಳವು ಮಾಡಿರುವುದು ಕಂಡುಬಂದಿದೆ. ಈ ಕುರಿತು ಕಾಪು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ.

Also Read: ಮಾನಸಿಕ ಖಿನ್ನತೆ : ನದಿಗೆ ಹಾರಿ ಯುವಕ ಆತ್ಮಹತ್ಯೆ

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories