ಮಾನಸಿಕ ಖಿನ್ನತೆ : ನದಿಗೆ ಹಾರಿ ಯುವಕ ಆತ್ಮಹತ್ಯೆ

Hiriadka News: ಹಿರಿಯಡ್ಕ: ಮಾನಸಿಕ ಖಿನ್ನತೆಯಿಂದ ಜುಗುಪ್ಸೆಗೊಂಡ ಯುವಕನೊರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಹಿರಿಯಡ್ಕ(Hiriadka) ಸಮೀಪದಲ್ಲಿ ನಡೆದಿದೆ.

ಭಟ್ಕಳದ ಕುಂಟುವಾಣಿ ಗ್ರಾಮದ ನಿವಾಸಿ ಜಯಂತ ನಾಗೇಶ್‌ ದೇಶ್‌ ಭಂಡಾರಿ (34 ವರ್ಷ) ಎಂಬವರೇ ಮೃತ ದುರ್ದೈವಿ. ಉಡುಪಿ ತಾಲೂಕಿನ ಹಿರಿಯಡ್ಕ ಸಮೀಪದ ಮಾಣೈ ಸೇತುವೆಯ ಬಳಿ ಸುವರ್ಣ ನದಿಗೆ ಹಾರಿ ಜಯಂತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Also Read: Padubidri Fraud: 2 ಲಕ್ಷ ಹಣ ಪಡೆದು ವಂಚಿಸಿದ ದಂಪತಿ: ದೂರು ದಾಖಲು

ಜಯಂತ್ ಅವರು ಮಣಿಪಾಲದ ಎಂಪಿಐ 2 ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮಣಿಪಾಲದ ಹುಡ್ಕೋ ಕಾಲನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಮೃತ ಜಯಂತ್ ಅವರ ಅಣ್ಣ ರಾಘವೇಂದ್ರ ಎನ್‌ ದೇಶ್‌ ಭಂಡಾರಿ ಅವರು ಹಿರಿಯಡ್ಕ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಜಯಂತ್ ಅವರು ಮಾನಸಿಕ ಖಿನ್ನತೆಯಿಂದಲೋ ಅಥವಾ ಇತರ ಕಾರಣಗಳಿಂದಲೋ ಜೀವನದಲ್ಲಿ ಜುಗುಪ್ಸೆಗೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

Also Read: ಉಡುಪಿ : ಸಾರ್ವಜನಿಕ ಸ್ಥಳದಲ್ಲಿ ಜಗಳ, ಪ್ರಕರಣ ದಾಖಲು

ಈ ಕುರಿತು ಹಿರಿಯಡ್ಕ ಠಾಣೆಯ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories