ಜಾತೀ ಸಮೀಕ್ಷೆ ಎಡವಟ್ಟು, ಸತ್ತ ಸಿಬ್ಬಂದಿಗೆ ಸಮೀಕ್ಷೆಯ ಡ್ಯೂಟಿ..!

ಬೆಂಗಳೂರು: Cast Survey: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸರ್ವೆ ಕಾರ್ಯದ ಕುರಿತು ವಿವಾದಗಳು ಸದ್ಯಕ್ಕೆ ಬೆನ್ನು ಬಿಡುವ ಲಕ್ಷಣ ಗೋಚರಿಸುತ್ತಿಲ್ಲ.

ಜಾತಿ ಸಮೀಕ್ಷೆಯಿಂದಾಗಿ ಜನ ಸಾಮಾನ್ಯರು ಒಂದೆಡೆ ಗೊಂದಲಕ್ಕೆ ಸಿಲುಕಿದ್ರೆ, ಮತ್ತೊಂದೆಡೆಯಲ್ಲಿ ಅಧಿಕಾರಿಗಳ ಆಟಕ್ಕೆ ಶಿಕ್ಷಕರು ಸುಸ್ತಾಗಿದ್ದಾರೆ. ಈ ನಡುವಲ್ಲೇ ಅಧಿಕಾರಿಗಳು ಸತ್ತ ಸಿಬ್ಬಂದಿಗಳನ್ನೂ ಸಮೀಕ್ಷೆಯ ಕಾರ್ಯಕ್ಕೆ ನಿಯೋಜನೆ ಮಾಡಿದ್ದಾರೆ.

ಗ್ರೇಟರ್‌ ಬೆಂಗಳೂರು ಅಥಾರಿಟಿ ಸರ್ವೆ ಕಾರ್ಯಕ್ಕಾಗಿ ಈಗಾಗಲೇ ಮೃತಪಟ್ಟಿರುವ ಸಿಬ್ಬಂದಿಯನ್ನು ನೇಮಕ ಮಾಡಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದೆ.

ಮೃತ ಸಿಬ್ಬಂದಿಗಳನ್ನು ಜಾತಿ ಸಮೀಕ್ಷೆಗೆ ನಿಯೋಜನೆ ಮಾಡುವ ಮೂಲಕ ರಾಜ್ಯ ಸರಕಾರ ಮತ್ತೊಮ್ಮೆ ಮುಖಭಂಗಕ್ಕೆ ಒಳಗಾಗಿದೆ.

ಇದು ಸತ್ತ ಸರಕಾರವೋ ಅಥವಾ ಬದುಕಿರುವಂತೆ ನಟಿಸುತ್ತಿರುವ ನಿರ್ಜೀವ ಸರಕಾರವೋ ಅಥವಾ ಸತ್ತವರನ್ನೂ ಬೆಂಬಿಡದೆ ಬೆನ್ನತ್ತಿರುವ ಸರಕಾರವೋ ಎಂದು ಜೆಡಿಎಸ್ ಪ್ರಶ್ನಿಸಿದೆ. ‌

ಜಾತಿಗಣತಿಗೆ ನೇಮಕಗೊಂಡಿರುವ ಸಿಬ್ಬಂದಿಗಳ ಪೈಕಿ ಕೆಲವರು ಈಗಾಗಲೇ ಮೃತಪಟ್ಟಿದ್ದಾರೆ. ಆದರೆ ಅವರನ್ನು ಹೆಸರನ್ನು ಸಿಬ್ಬಂದಿ ಪಟ್ಟಿಯಲ್ಲಿ ಸೇರಿಸಲಾಗಿದೆ.

ಸತ್ತ ವ್ಯಕ್ತಿಗಳು ಬಂದು ಸಮೀಕ್ಷೆ ನಡೆಸೋದಕ್ಕೆ ಸಾಧ್ಯವೇ ಎಂದು ಜೆಡಿಎಸ್‌ ಪ್ರಶ್ನಿಸಿದೆ. ಇಷ್ಟು ದೊಡ್ಡ ತಪ್ಪು ನಡೆದಿದ್ದರೂ ಕೂಡ ಗ್ರೇಟರ್‌ ಬೆಂಗಳೂರು ಅಥಾರಿಟಿ ಇದುವರೆಗೂ ಯಾವುದೇ ಪ್ರತಿಕ್ರೀಯೆ ನೀಡಿಲ್ಲ.

Also Read: ಹಾಸನಾಂಬೆ ದರ್ಶನ : ಒಂದೇ ದಿನ 1 ಕೋಟಿ ಆದಾಯ

ದಿನಕ್ಕೊಂದು ರೂಲ್ಸ್‌, ಶಿಕ್ಷಕರು ಹೈರಾಣು

ಜಾತಿ ಸಮೀಕ್ಷೆ ಆರಂಭವಾದ ದಿನದಿಂದಲೂ ಅಧಿಕಾರಿಗಳು ಶಿಕ್ಷಕರಿಗೆ ಒತ್ತಡ ಹೇರುವ ಕಾರ್ಯವನ್ನು ಮಾಡಿದ್ದಾರೆ. ಆರಂಭದಲ್ಲಿ ಶಿಕ್ಷಕರಿಗೆ ಯುಎಚ್‌ಐಡಿ ನೀಡುವ ಮೂಲಕ ಟಾರ್ಗೇಟ್‌ ಫಿಕ್ಸ್‌ ಮಾಡಲಾಗಿತ್ತು.

ನಂತರದಲ್ಲಿ ಯಾವುದೇ ಯುಎಚ್‌ಐಡಿಯನ್ನು ಬಳಸಿ ಸರ್ವೆ ಕಾರ್ಯ ನಡೆಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಆದರೆ ಶಿಕ್ಷಕರು ತಮಗೆ ನೀಡಿದ್ದ ಟಾರ್ಗೆಟ್‌ ಮುಗಿಸಿದ ಬಳಿಕ, ಬಾಕಿ ಇರುವ ಯುಎಚ್‌ಐಡಿ ಸರ್ವೆ ಕಾರ್ಯ ಮುಗಿಸಿ ಎಂದು ಆದೇಶಿಸಲಾಗಿದೆ.

ಮಂಗಳೂರಿನಲ್ಲಿ ಶಿಕ್ಷಕರಿಗೆ ಸರಿಯಾಗಿ ತರಬೇತಿಯನ್ನೂ ನೀಡದೇ, ತರಬೇತಿಗೆ ನಿಯೋಜನೆ ಮಾಡಲಾಗಿದೆ. ಸರಕಾರ ನೀಡಿದ್ದ ಟಾರ್ಗೇಟ್‌ ಮುಗಿಸುವ ಸಲುವಾಗಿ ಶಿಕ್ಷಕರನ್ನು, ಸಿಬ್ಬಂದಿಗಳನ್ನು ಒತ್ತಡಕ್ಕೆ ಸಿಲುಕಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ.

Also Read: ಬಾರೀ ಮಳೆ : ಕರಾವಳಿ ಸೇರಿ ರಾಜ್ಯದ 14 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories