23ನೇ ವರ್ಷದಲ್ಲಿ ಎಸಗಿದ ಅಪರಾಧಕ್ಕೆ 81ನೇ ಪ್ರಾಯದಲ್ಲಿ ಜಾಮೀನು ಪಡೆದ ವ್ಯಕ್ತಿ..!
Old Crime: ಬರೋಬ್ಬರಿ 48 ವರ್ಷಗಳ ಹಿಂದೆ ತನ್ನ ಗೆಳತಿಯನ್ನು ಇರಿದ ಆರೋಪದ ಅಡಿಯಲ್ಲಿ ಐದು ದಶಕಗಳಿಂದ ತಲೆ ಮರೆಸಿಕೊಂಡಿದ್ದ ವ್ಯಕ್ತಿಯೋರ್ವ ಕೊನೆಗೂ ವಿಚಾರಣೆಗೆ ಹಾಜರಾಗಲಿದ್ದಾನೆ.
ದಕ್ಷಿಣ ಮುಂಬೈನ ಕೊಲಾಬಾದಲ್ಲಿ ತನ್ನ ಗೆಳತಿಗೆ ಇರಿದು ಕೊಲೆ ಮಾಡಲು ಯತ್ನಿಸಿದ ಆರೋಪದ ಅಡಿಯಲ್ಲಿ 1977ರಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಆರೋಪಿ ಚಂದ್ರಶೇಖರ್ ಮಧುಕರ್ಗೆ ಇದೀಗ 81 ವರ್ಷ ಪ್ರಾಯವಾಗಿದೆ. 81ನೇ ವಯಸ್ಸಿನಲ್ಲಿ ಚಂದ್ರಶೇಖರ್ ಮಧುಕರ್ ಕಲೆಕರ್ ಗೆ ಮುಂಬೈ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದೆ.
ತನ್ನ ಗೆಳತಿಯ ಮೇಲೆ ಅನುಮಾನಗೊಂಡು ಚಾಕುವಿನಿಂದ ಇರಿಯುವುಗಾ ಚಂದ್ರಶೇಖರ್ಗೆ ಕೇವಲ 23 ವರ್ಷ ಪ್ರಾಯವಾಗಿತ್ತು ಎನ್ನಲಾಗಿದೆ. ಕೊಲೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು. ಆದರೆ ಬಳಿಕ ಜಾಮೀನು ನೀಡಲಾಗಿತ್ತು. ಜಾಮೀನಿನ ಮೂಲಕ ಜೈಲಿನಿಂದ ಹೊರಬಂದ ಚಂದ್ರಶೇಖರ್ ಮತ್ತೆ ನ್ಯಾಯಾಲಯದ ಎದುರು ಹಾಜರಾಗಿರಲಿಲ್ಲ ಎನ್ನಲಾಗಿದೆ.
ನ್ಯಾಯಾಲಯವು ಚಂದ್ರಶೇಖರ್ನನ್ನು ಪರಾರಿಯಾಗಿರುವ ಆರೋಪಿ ಎಂದು ಘೋಷಿಸಿ ಜಾಮೀನು ರಹಿತ ವಾರಂಟ್ (NBW) ಹೊರಡಿಸಿತು. ಹಲವಾರು ಪ್ರಯತ್ನಗಳ ಹೊರತಾಗಿಯೂ, ಮುಂಬೈ ಪೊಲೀಸರು ಅವರನ್ನು ಪತ್ತೆಹಚ್ಚಲು ವಿಫಲರಾದರು, ಆತ ವಾಸಿಸುತ್ತಿದ್ದ ಕಟ್ಟಡವನ್ನು ಪುನರ್ನಿರ್ಮಿಸಲಾಯಿತು, ಇದರಿಂದಾಗಿ ಆತನನ್ನು ಪತ್ತೆ ಮಾಡುವುದು ಕಷ್ಟಕರವಾಯಿತು.
Also Read: ಸಾಲ ತೀರಿಸದ ಸಹೋದರರು, ಪತ್ನಿಗೂ ವಿಷವುಣಿಸಿ ತಾನೂ ಆತ್ಮ*ಹತ್ಯೆಗೆ ಶರಣಾದ ಅಣ್ಣ..!
ಹಲವು ವರ್ಷಗಳ ಬಳಿಕ ಹೊಸದೊಂದು ಪ್ರಕರಣದ ತನಿಖೆಯ ಸಂದರ್ಭದಲ್ಲಿ ರತ್ನಗಿರಿ ಜಿಲ್ಲೆಯ ದಪೋಲಿ ಪೊಲೀಸ್ ಠಾಣೆಯಲ್ಲಿ 2015ರ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಲೇಕರ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ಸುಳಿವು ಆಧರಿಸಿದ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿದ್ದರು.
ದಶಕಗಳು ಕಳೆದರೂ ಕಾಲೇಕರ್‌ನನ್ನು ಗುರುತಿಸುವುದು ಪೊಲೀಸರಿಗೆ ಒಂದು ದೊಡ್ಡ ಸವಾಲಾಗಿತ್ತು. ಆದಾಗ್ಯೂ, ಹಳೆಯ ಫೋಟೋಗಳನ್ನು ಬಳಸಿಕೊಂಡು ಅವನನ್ನು ಅಂತಿಮವಾಗಿ ಗುರುತಿಸಲಾಯಿತು ಮತ್ತು ವಿಚಾರಣೆಯ ಸಮಯದಲ್ಲಿ, ಅವನು ತನ್ನ ಅಪರಾಧವನ್ನು ಒಪ್ಪಿಕೊಂಡನು. ಕೊಲಾಬಾ ಪೊಲೀಸರು ಅವನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು ಮತ್ತು ಅವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
Also Read: ಅಕ್ರಮ ಗಣಿಗಾರಿಕೆ ವಿರೋಧಿಸಿ ದಲಿತ ಯುವಕನ ಮೇಲೆ ಮೂತ್ರ ವಿಸರ್ಜನೆ : ಮಾನವೀಯತೆ ಮರೆತ ಪಾಪಿಗಳು
ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಕಾಲೇಕರ್ ಪರ ವಕೀಲ, ತನ್ನ ಕಕ್ಷಿದಾರರಿಗೆ ಜಾಮೀನು ದೊರೆತ ಬಳಿಕ ನಿವಾಸ ಬದಲಾವಣೆಗೊಂಡಿದೆ. ಇದರಿಂದ ಆರೋಪಿಗೆ ಕೋರ್ಟ್ನ ನೋಟಿಸ್ ತಲುಪಿಲ್ಲ ಎಂದು ವಾದಿಸಿದ್ದಾರೆ. ಅವರಿಗೆ 81 ವರ್ಷ ಪ್ರಾಯವಾಗಿದ್ದು ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕೋರ್ಟ್ ಇವರಿಗೆ ಜಾಮೀನು ನೀಡಬೇಕು ಎಂದು ಒತ್ತಾಯಿಸಿದ್ದಾರೆ .
48 ವರ್ಷಗಳ ನಂತರ, ಚಂದ್ರಶೇಖರ್ ಮಧುಕರ್ ಕಾಲೇಕರ್ ವಿರುದ್ಧದ ವಿಚಾರಣೆ ಈಗ ಅಂತಿಮವಾಗಿ ಆರಂಭವಾಗಲಿದೆ.



