ಸಾಲ ತೀರಿಸದ ಸಹೋದರರು, ಪತ್ನಿಗೂ ವಿಷವುಣಿಸಿ ತಾನೂ ಆತ್ಮ*ಹತ್ಯೆಗೆ ಶರಣಾದ ಅಣ್ಣ..!

Mathura : ಕಷ್ಟ ಕಾಲದಲ್ಲಿ ಸಾಲ ಮಾಡಿ ಬಳಿಕ ಅದನ್ನು ತೀರಿಸುವುದು ತಪ್ಪಲ್ಲ. ಆದರೆ ಸಾಲ ಮಾಡುವುದೇ ಒಂದು ಚಟವಾಗಬಾರದು. ನಮ್ಮಲ್ಲಿ ಎಷ್ಟು ಸಾಲವನ್ನು ತೀರಿಸುವ ಶಕ್ತಿಯಿದೆಯೋ ಅಷ್ಟು ಮಾತ್ರ ಸಾಲ ಮಾಡಿಕೊಳ್ಳಬೇಕು.
ಈ ಮಾತನ್ನು ಹೇಳೋಕೆ ಕಾರಣ ಕೂಡ ಇದೆ. ಮಥುರಾದಲ್ಲಿ ಇದೇ ಮಾದರಿಯ ಘಟನೆಯೊಂದು ಸಂಭವಿಸಿದ್ದು ಸಾಲಗಾರರ ಕಿರುಕುಳ ತಾಳಲು ಸಾಧ್ಯವಾಗದೇ 38 ವರ್ಷದ ಆಟೋ ಚಾಲಕನೊಬ್ಬ ಬಲವಂತದಿಂದ ಪತ್ನಿಗೆ ವಿಷವುಣಿಸಿ ಬಳಿಕ ತಾನೂ ವಿಷ ಸೇವಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಆಟೋ ಚಾಲಕ ಯೋಗೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆ, ಆತನ ಪತ್ನಿ 35 ವರ್ಷದ ರೇಣು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹತ್ರಾಸ್‌ನ ಮಹಾವತ್‌ಪುರ ಗ್ರಾಮದ ಯೋಗೇಶ್, ತನ್ನ ಪತ್ನಿ ಮತ್ತು ನಾಲ್ವರು ಮಕ್ಕಳೊಂದಿಗೆ ರಾಧಾ ವಿಹಾರ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಎಂದು ರಿಫೈನರಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಜಯ್ ವರ್ಮಾ ತಿಳಿಸಿದ್ದಾರೆ.
ತನ್ನ ಕಿರಿಯ ಸಹೋದರರ ಜೀವನಕ್ಕೆ ವ್ಯವಸ್ಥೆ ಮಾಡಿಕೊಡಬೇಕೆಂದು ಅಪರಿಚಿತ ವ್ಯಕ್ತಿಯಿಂದ ಸಾಲ ಪಡೆದು ಯೋಗೇಶ್ ಆಟೋ ಕೊಡಿಸಿದ್ದರು ಎನ್ನಲಾಗಿದೆ. ಆದರೆ ಇಬ್ಬರೂ ಸಹೋದರರು ಸಾಲ ಮರುಪಾವತಿ ಸಮಯಕ್ಕೆ ಮಾಡಲು ವಿಫಲರಾದ ಹಿನ್ನೆಲೆಯಲ್ಲಿ ಯೋಗೇಶ್ ಸಾಲಗಾರರ ಕಾಟಕ್ಕೆ ಸಿಲುಕಿದ್ದರು ಎಂಬುದು ಪ್ರಾಥಮಿಕ ತನಿಖೆ ಸಂದರ್ಭದಲ್ಲಿ ತಿಳಿದುಬಂದಿದೆ.
ಸಾಲದ ಕಂತು ಪಾವತಿಯಾಗದ ಹಿನ್ನೆಲೆಯಲ್ಲಿ ಯೋಗೇಶ್ನನ್ನು ಭೇಟಿ ಮಾಡಿದ ಸಾಲಗಾರರು, ಯೋಗೇಶ್ರನ್ನು ನಿಂದಿಸಿ ಅವರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ : ಕರುಳು ಹಿಂಡುತ್ತೆ ಸಾವಿಗೂ ಮುನ್ನ ಪಾಪಿ ಪತಿಗೆ ಕೃತಿಕಾ ರೆಡ್ಡಿ ಕಳುಹಿಸಿದ ಸಂದೇಶ : ಏನದು ಮೆಸೇಜ್ ?
ಈ ಅವಮಾನದಿಂದ ಅತೀವ ದುಃಖ ಮತ್ತು ಕೋಪಕ್ಕೆ ಒಳಗಾಗಿದ್ದ ಯೋಗೇಶ್ ಸೀದಾ ಮನೆಗೆ ಬಂದು ಪತ್ನಿ ಬಳಿ ಘಟನೆಯನ್ನು ವಿವರಿಸಿದ್ದರು ಎನ್ನಲಾಗಿದೆ. ಅಲ್ಲದೇ ತಾನು ಸಾಯುವುದಾಗಿಯೂ ಹೇಳಿಕೊಂಡಿದ್ದಾರೆ.
ಪತ್ನಿ ಇದನ್ನು ತಡೆಯಲು ಎಷ್ಟೇ ಯತ್ನಿಸಿದರೂ ಸಹ ಕೇಳದೇ ಆಕೆಯನ್ನೂ ಬೆದರಿಸಿ ವಿಷ ಮಿಶ್ರಿತ ನೀರು ಸೇವಿಸುವಂತೆ ಒತ್ತಾಯಿಸಿದ್ದಾರೆ. ಬಳಿಕ ಅದೇ ನೀರನ್ನು ಯೋಗೇಶ್ ಕೂಡ ಕುಡಿದಿದ್ದ ಎಂದು ತಿಳಿದು ಬಂದಿದೆ.
ದಂಪತಿ ವಿಷ ಕುಡಿದಿರುವ ವಿಚಾರ ತಿಳಿಯುತ್ತದಂತೆಯೇ ಅಕ್ಕ ಪಕ್ಕದ ಮನೆಯವರು ದಂಪತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಯೋಗೇಶ್ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಆಗ್ರಾದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಇದನ್ನೂ ಓದಿ : ವಿದ್ಯಾರ್ಥಿನಿ ಮೇಲೆ ಜ್ಯೂನಿಯರ್ ವಿದ್ಯಾರ್ಥಿಯಿಂದ ಅತ್ಯಾ*ಚಾರ : ವಿದ್ಯಾರ್ಥಿ ಅರೆಸ್ಟ್
ಆದರೆ ಚಿಕಿತ್ಸೆ ಫಲಕಾರಿಯಾಗದೇ ಯೋಗೇಶ್ ಮೃತಪಟ್ಟಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿರುವ ಯೋಗೇಶ್ ಪತ್ನಿ ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Mathura Brothers who failed to repay debt, brother poisons wife and commits suicide himself



