ರಸ್ತೆ ಅಪಘಾತ ಕೊಲೆಯಲ್ಲಿ ಅಂತ್ಯ : ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ

Road accident: ಬೈಕ್​ ಅಪಘಾತದ ಬಳಿಕ ನಡೆದ ಜಗಳ ತಾರಕ್ಕೇರಿದ್ದು ಈ ಗಲಾಟೆಯು ಕೊಲೆಯಲ್ಲಿ ಅಂತ್ಯವಾದ ಘಟನೆಯು ಮಧ್ಯಪ್ರದೇಶದ(Madhyapradesh) ಉಜ್ಜಯಿನಿಯಲ್ಲಿ ಸಂಭವಿಸಿದೆ. 35 ವರ್ಷದ ವ್ಯಕ್ತಿಯನ್ನು ಇರಿದು ಕೊಲೆ ಮಾಡಲಾಗಿದ್ದು ಕೊಲೆಯ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಕರಣದ ಆರೋಪಿಗಳಿಗಾಗಿ ಪೊಲಿಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಸಂದೀಪ್​ ರಾಥೋಡ್​ ಎಂಬಾತ ತನ್ನ ಸ್ನೇಹಿತ ವಿಕಾಸ್​ ಹಾಗೂ ಯುವತಿಯೊಂದಿಗೆ ಬೈಕ್​ನಲ್ಲಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಒಂದು ಸಣ್ಣ ಅಪಘಾತ ಸಂಭವಿಸಿದ್ದು ಬೈಕ್​ ಸವಾರರ ನಡುವೆ ವಾಗ್ವಾದ ಉಂಟಾಗಿತ್ತು.

Also Read: Kerala: ಅಯ್ಯೋ ಇದೆಂಥಾ ಅವಸ್ಥೆ..! ಆಕಳಿಕೆ ತೆಗೆಯಲೆಂದು ಬಾಯಿ ತೆರೆದವನ ಬಾಯಿ ಮುಚ್ಚಿಸಲು ವೈದ್ಯರೇ ಬರಬೇಕಾಯ್ತು..!

ತನ್ನನ್ನೇ ಹಿಂಬಾಲಿಸಿ ಬರುತ್ತಿದ್ದ ಯುವಕನ ಮೇಲೆ ಸಂದೀಪ್​ ಹಲ್ಲೆ ನಡೆಸಿದ್ದ. ಹಲ್ಲೆ ಬಳಿಕ ಯುವಕ ಪರಾರಿಯಾಗಿದ್ದ, ಆದರೆ ಮೂರ್ನಾಲ್ಕು ದಿನ ಬಿಟ್ಟು ಆತ ತನ್ನ ಸಹಚರರೊಂದಿಗೆ ಸಂದೀಪ್​ ಎದುರು ಪ್ರತ್ಯಕ್ಷನಾಗಿ ಹಲ್ಲೆ ನಡೆಸಿದ್ದ. ಮಾರಣಾಂತಿಕ ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಸಂದೀಪ್​ನನ್ನು ಆಸ್ಪತ್ರೆಗೆ ಸೇರಿಸಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.

ಕೃತ್ಯ ನಡೆದ ಸ್ಥಳದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ರಾಥೋಡ್​ನನ್ನು ಸುತ್ತುವರಿದ ಯುವಕರ ತಂಡ ಕುತ್ತಿಗೆ, ಬೆನ್ನು ಹಾಗೂ ಹೊಟ್ಟೆಗೆ ಅನೇಕ ಬಾರಿ ಇರಿದಿದ್ದರು. ಸಂದೀಪ್​ ರಸ್ತೆಯಲ್ಲೇ ಕುಸಿದು ಬಿದ್ದರೆ, ಸಂದೀಪ್​ ಸ್ನೇಹಿತ ಸ್ಥಳದಿಂದ ಕಾಲ್ಕಿತ್ತಿದ್ದ.

Also Read: ಐಎನ್​​ಎಸ್​ ವಿಕ್ರಾಂತ್​​ ಪಾಕಿಸ್ತಾನಿಗಳ ನಿದ್ದೆಗೆಡಿಸಿದೆ, ಭಾರತದೆದುರು ಮಂಡಿಯೂರಿದೆ : ಪ್ರಧಾನಿ ಮೋದಿ

ಬಳಿಕ ಆರೋಪಿಗಳು ಎರಡು ಬೈಕ್​ಗಳಲ್ಲಿ ಪರಾರಿಯಾಗಿದ್ದರು. ಆದರೆ ಸಂದೀಪ್​ ಇನ್ನೂ ಜೀವಂತವಾಗಿದ್ದಾನೆಯೇ ಎಂದು ಮತ್ತೊಮ್ಮೆ ಪರಿಶೀಲಿಸಲು ಅದೇ ಸ್ಥಳಕ್ಕೆ ಮತ್ತೊಮ್ಮೆ ಹಿಂತಿರುಗಿ ಬಳಿಕ ಎಸ್ಕೇಪ್​ ಆಗಿದ್ದಾರೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳಾಗಿ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿ ಕೊತ್ವಾಲಿ ಪೊಲೀಸ್​ ಠಾಣಾಧಿಕಾರಿ ಬಿಎಸ್​ ತೋಮರ್, ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಸಿಸಿ ಕ್ಯಾಮರಾ ದೃಶ್ಯಗಳನ್ನಾಧರಿಸಿ ತನಿಖೆ ನಡೆಸುತ್ತಿದ್ದೇವೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories