Kerala: ಅಯ್ಯೋ ಇದೆಂಥಾ ಅವಸ್ಥೆ..! ಆಕಳಿಕೆ ತೆಗೆಯಲೆಂದು ಬಾಯಿ ತೆರೆದವನ ಬಾಯಿ ಮುಚ್ಚಿಸಲು ವೈದ್ಯರೇ ಬರಬೇಕಾಯ್ತು..!
Kerala: ಆಕಳಿಕೆ ಎನ್ನುವುದು ಮನುಷ್ಯನಿಗೆ ಸರ್ವೇ ಸಾಮಾನ್ಯವಾಗಿ ಬರುತ್ತದೆ. ನಿದ್ರೆ ಬರುವಾಗ, ಬೇಸರವಾದಾಗೆಲ್ಲ ಆಕಳಿಕೆ ಬರುವುದು ಸಾಮಾನ್ಯ. ಅದೇ ರೀತಿ ಬಸ್ಗೋ ರೈಲಿಗೂ ಅಂತಾ ಕಾಯುತ್ತಾ ಸುಮಾರು ಹೊತ್ತು ಕುಳಿತರೆ ಅಲ್ಲಿಯೂ ಆಕಳಿಕೆ ಬರುತ್ತದೆ.
ಆಕಳಿಗೆ ಹೊತ್ತು – ಗೊತ್ತು ಇರುವುದಿಲ್ಲ. ಆಕಳಿಕೆಯ ಬಗ್ಗೆ ಇಷ್ಟೆಲ್ಲ ಪ್ರಸ್ತಾಪ ಮಾಡಲು ಕಾರಣವಿದೆ. ಕೇರಳದ ಪಾಲಕ್ಕಾಡ್ನಲ್ಲಿ ರೈಲು ಪ್ರಯಾಣಿಕನೊಬ್ಬ ರೈಲ್ವೆ ನಿಲ್ದಾಣದಲ್ಲಿ ಆಕಳಿಕೆ ತೆರೆಯಲು ಹೋಗಿ ಪೇಚಿಗೆ ಸಿಲುಕಿದ್ದಾನೆ.
ಆಕಳಿಕೆ ತೆಗೆಯಲೆಂದು ಬಾಯಿ ತೆರೆದ ಯುವಕನಿಗೆ ಎಷ್ಟೇ ಪ್ರಯತ್ನಿಸಿದರೂ ಬಾಯಿ ಮುಚ್ಚಲು ಆಗಲೇ ಇಲ್ಲ. ಯಾರು ಎಷ್ಟೇ ಸಹಾಯ ಮಾಡಿದರೂ ಸಹ ಬಾಯಿ ಮುಚ್ಚುವುದು ಮಾತ್ರ ಅಸಾಧ್ಯ ಎಂಬಂತಾಗಿತ್ತು. ಕೊನೆಗೆ ಬೇರೆ ವಿಧಿ ಕಾಣದೇ ವೈದ್ಯರನ್ನು ಸ್ಥಳಕ್ಕೆ ಕರೆಯಿಸಲಾಗಿದೆ.
ಬಾಯಿ ತೆರೆದುಕೊಂಡೇ ಇದ್ದ ಯುವಕನನ್ನು ನೋಡಿದ ವೈದ್ಯರು ಕೂಡಲೇ ಆತನ ಬಾಯಿಯ ಒಳಗೆ ಟಿಶ್ಯೂ ಪೇಪರ್ಗಳನ್ನಿಟ್ಟು ಬಳಿಕ ಆತನ ಬಾಯಿಯನ್ನು ಸರಿ ಮಾಡಿದ್ದಾರೆ. ಕೊನೆಗೂ ಬಾಯಿ ಸರಿಯಾಯ್ತಲ್ಲಾ ದೇವರೇ ಅಂತಾ ಯುವಕ ಕೂಡ ನಿಟ್ಟುಸಿರು ಬಿಟ್ಟಿದ್ದಾನೆ.
Also Read: ಐಎನ್ಎಸ್ ವಿಕ್ರಾಂತ್ ಪಾಕಿಸ್ತಾನಿಗಳ ನಿದ್ದೆಗೆಡಿಸಿದೆ, ಭಾರತದೆದುರು ಮಂಡಿಯೂರಿದೆ : ಪ್ರಧಾನಿ ಮೋದಿ
ಆಕಳಿಕೆ ತೆಗೆಯಲು ಕೆಲವರು ಅತಿಯಾಗಿ ಬಾಯಿ ತೆರೆಯುತ್ತಾರೆ. ಇಂತಹ ಸಂದರ್ಭದಲ್ಲಿ ವಸಡಿನ ಮೂಳೆಗಳ ಸ್ಥಾನಪಲ್ಲಟವಾಗುವುದರಿಂದ ಈ ರೀತಿ ಸಮಸ್ಯೆ ಕಾಣುತ್ತದೆ ಎನ್ನಲಾಗಿದೆ.
ಇದೊಂದು ತಾತ್ಕಾಲಿಕ ಸಮಸ್ಯೆಯಾಗಿದ್ದು ಸೂಕ್ತ ಚಿಕಿತ್ಸೆ ಮೂಲಕ ಸರಿಪಡಿಸಬಹುದಾಗಿದೆ. ಹೀಗಾಗಿ ಆಕಳಿಕೆ ತೆಗೆಯುವಾಗ ಎಷ್ಟು ಬೇಕೋ ಅಷ್ಟು ಮಾತ್ರ ಬಾಯಿ ತೆರೆಯಬೇಕು ಎಂದು ವೈದ್ಯರು ಹೇಳಿದ್ದಾರೆ. ಈ ಎಲ್ಲದರ ನಡುವೆ ಬಾಯಿ ತೆರೆದುಕೊಂಡೇ ರೈಲು ನಿಲ್ದಾಣದಲ್ಲಿ ಕುಳಿತಿದ್ದ ಯುವಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Also Read: ಭಾರತದ ಏಕೈಕ ಟ್ರಾಫಿಕ್ ಜಾಮ್ ಇಲ್ಲದ ನಗರ : ಈ ಊರಲ್ಲಿ ಕೇಳಿಸದು ವಾಹನಗಳ ಹಾರ್ನ್ !



