ಉಡುಪಿ : 70 ಸಾಧಕರಿಗೆ 2025ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

District Rajyotsava Award: ಗುರುವಾರದಂದು 2025ನೇ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾದ ಬೆನ್ನಲ್ಲೇ ಇಂದು ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಒಟ್ಟೂ 77 ಸಾಧಕರು ಹಾಗೂ ಸಂಘ ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.

ಸಮಾಜಸೇವೆ ಕ್ಷೇತ್ರದಿಂದ ಕುಂದಾಪುರದ ಎಸ್​. ಜಯಕರ ಶೆಟ್ಟಿ, ಆರೋಗ್ಯ ಮತ್ತು ಸಮಾಜ ಸೇವೆ ಕ್ಷೇತ್ರದಿಂದ ಸತೀಶ್​ ಬೇಕಲ್​, ಕ್ರೀಡಾ ಕ್ಷೇತ್ರದಲ್ಲಿ ಶ್ರೀ ಕುಮಾರಸ್ವಾಮಿ, ದೇವಾರಾಧನೆ ಕ್ಷೇತ್ರದಲ್ಲಿ ಕಾರ್ಕಳದ ಶ್ರೀಧರ್ ಭಟ್​, ಯಕ್ಷಗಾನ ಕ್ಷೇತ್ರದಲ್ಲಿ ಬ್ರಹ್ಮಾವರದ ಸರ್ವೋತ್ತಮ ಗಾಣಿಗ, ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದಿಂದ ಪ್ರಭಾಕರ ಬಿ. ಕುಂದರ್, ಸಂಗೀತ ಕ್ಷೇತ್ರದ ಶ್ರೀ ಪಾಂಡು ದೇವಾಡಿಗ, ಪಾಕ ತಜ್ಞ ಕ್ಷೇತ್ರದಿಂದ ಗುರುರಾಜ್​ ರಾವ್​, ಸಹಕಾರಿ ಕ್ಷೇತ್ರದಿಂದ ಶ್ರೀ ಕೊರಗ ಪೂಜಾರಿ, ಸಾಹಿತ್ಯ ಮತ್ತು ಸಮಾಜ ಸೇವೆ ಕ್ಷೇತ್ರದಿಂದ ಬಿಪಿನ್ ಚಂದ್ರಪಾಲ್​ ನಕ್ರೆ, ಸಮಾಜ ಸೇವೆ ಜಯವಂತ್​ ರಾವ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಇನ್ನುಳಿದಂತೆ ನಾಟಕ – ರೆಜಿನಾಲ್ಡ್ ಪುಟಾರ್ಡೋ, ಸಮಾಜ ಸೇವೆ – ಶೇಖ್​ ವಾಹಿದ್​, ಸಮಾಜ ಸೇವೆ – ವಿಠ್ಠಲ ಪೂಜಾರಿ, ಕೃಷಿ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರ – ರವೀಂದ್ರ ಶೆಟ್ಟಿ, ಚಲನಚಿತ್ರ – ರಾಜೀವ ಕೊಠಾರಿ, ವಿವಿಧ ಕಲಾ ಕ್ಷೇತ್ರ ಪ್ರೋತ್ಸಾಹ – ಮುರುಳೀಧರ ಜೋಗಿ, ಕೃಷಿ ಮತ್ತು ಸಮಾಜ ಸೇವೆ – ದಾಮೋದರ ಆಚಾರ್ಯ, ದೈವಾರಾಧನೆ – ಭಾಸ್ಕರ ಪಾಣ, ಸಮಾಜ ಸೇವೆ – ಲಕ್ಷ್ಮೀನಾರಾಯಣ ರಾವ್​, ಕೃಷಿ – ಕೋಡಿ ಗಂಗಾದರ್​ ಪೂಜಾರಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Also Read: ಮೂಡ್ಲಕಟ್ಟೆ ಐಎಂಜೆ ಕಾಲೇಜಿನಲ್ಲಿ ವರ್ಡ್‌ಪ್ರೆಸ್ ಕ್ಯಾಂಪಸ್ ಕನೆಕ್ಟ್ ಉಡುಪಿ 2025 ಯಶಸ್ವಿಯಾಗಿ ಮುಕ್ತಾಯ

ಜಾನಪದ – ಹೌಂದೇರಾಯನ ಓಲಗ ಗುಂಡು ಪೂಜಾರಿ, ಸಂಗೀತ ( ನಾಗಸ್ವರ ಮತ್ತು ಸ್ಯಾಕ್ಸೋಫೋನ್ ಕಲಾವಿದ ) – ಲಕ್ಷ್ಮಣ ಸೇರಿಗಾರ, ಜಾನಪದ – ಬಿ.ವಾಸುದೇವ, ವೈದ್ಯಕೀಯ – ಡಾ. ಸಂದೀಪ ಶಣೈ, ದೈವಾರಾಧನೆ – ಬೂಬ ಪರವ, ಸಮಾಜ ಸೇವೆ – ಉಮೇಶ ಪೂಜಾರಿ, ಶಿಲ್ಪಕಲೆ – ಶ್ರೀಕಾಂತ ಆಚಾರ್ಯ, ಯಕ್ಷಗಾನ – ಶೇಖರ ತಮಟೆ ಹಕ್ಲುಶೆಟ್ಟಿ , ವೈದ್ಯಕೀಯ ಸೇವೆ – ಡಾ. ಗೋಪಾಲ ಪೂಜಾರಿ, ಕ್ರೀಡೆ – ಶಾಲಿನಿ ರಾಜೇಶ ಶೆಟ್ಟಿ, ವೈದ್ಯಕೀಯ ಸಮಾಜ ಸೇವೆ – ಡಾ.ಕೆ ಪ್ರಶಾಂತ್​ ಶೆಟ್ಟಿ, ಸಮಾಜ ಸೇವೆ – ಗೋವಿಂದ ಭಂಡಾರಿ, ಸಮಾಜ ಸೇವೆ – ರಮೇಶ್ ಎಸ್. ತಿಂಗಳಾಯ , ಸಮಾಜ ಸೇವೆ – ವೀಣಾ ಆರ್. ಭಟ್, ಸಾಂಸ್ಕೃತಿಕ – ಶಿವಾನಂದ ಕೋಟ್ಯಾನ್​, ಚಿತ್ರಕಲೆ – ಸಂತೋಷ್​ ಕುಮಾರ್​ ಅವರಿಗೆ ಪ್ರಶಸ್ತಿ ಲಭಿಸಿದೆ.

ರಂಗಭೂಮಿ – ರಾಜೇಶ ಆಚಾರ್ಯ, ಸಮಾಜ ಸೇವೆ – ಸತೀಶ ಪೂಜಾರಿ, ಸಂಕೀರ್ಣ – ಡಾ. ಹಂಪಾರು ನಿತ್ಯಾನಂದ ಶೆಟ್ಟಿ, ಕೆತ್ತನೆ – ನಾಗಾರಾಜ ಆಚಾರ್ಯ, ಚಲನಚಿತ್ರ / ಸಾಹಿತ್ಯ – ಕೃಷ್ಣ ಉಪ್ಪಿನಕೋಟೆ, ಶಿಲ್ಪಕಲೆ – ಸಂತೋಷ್​, ಪತ್ರಿಕೋದ್ಯಮ – ಲಕ್ಷ್ಮೀ ಮಚ್ಚಿನ, ಸಮಾಜ ಸೇವೆ – ಶಂಕರ ಶೆಟ್ಟಿ, ಯಕ್ಷಗಾನ – ಪ್ರದೀಪ್ ಹೆಬ್ಬಾರ, ಸಾಂಸ್ಕೃತಿಕ, ಜಾನಪದ ಕಲೆ – ವಿಜಯ ಕುಮಾರ್, ಕ್ರೀಡೆ ಮತ್ತು ಕಲೆ – ಪ್ರಶಾಂತ್​ ಕೆ.ಎಸ್, ಯಕ್ಷಗಾನ – ಮಹೇಶ್ ಕುಮಾರ್ ಮಂದಾರ್ತಿ, ಕನ್ನಡ ಸಾಹಿತ್ಯ – ಸೌಮ್ಯಾ ಪುತ್ರನ್​ ಕಾತ್ಯಾಯಿನಿ, ಯಕ್ಷಗಾನ – ರಾಘವೇಂದ್ರ ಕರ್ಕೆರಾ, ಸಮಾಜ ಸೇವೆ – ಗಣಪತಿ ಎನ್​. ಟಿ, ದೇವರ ನರ್ತನೆ – ಗುರುಪ್ರಸಾದ್ ಭಟ್​, ಸಮಾಜ ಸೇವೆ – ಸುಲೈಮಾನ್​ ಮೊಹಮ್ಮದ್ ಬ್ಯಾರಿ, ಮಾಧ್ಯಮ – ಪ್ರಸಾದ್ ರಾವ್​, ಭಗವದ್ಗೀತೆ ಪಠಣ – ಸುಸಾಂತ್​, ಶಿಲ್ಪಕಲೆ – ಸತೀಶ್ , ಸಂಗೀತ – ಅಮಿತಾ, ಸಮಾಜ ಸೇವೆ – ಶರತ್​ ಕುಮಾರ್ ಮಟ್ಟು, ಸಮಾಜ ಸೇವೆ – ನವೀನ ಎಂ ಪೂಜಾರಿ, ದೈವ ನರ್ತಕ – ಭಾಸ್ಕರ ಬಂಗೇರಾ ಕೋಟ್ಯಾನ್​, ಕ್ರೀಡೆ – ಸುದೀಪ್​ ಶೆಟ್ಟಿ ಹಾಗೂ ಕುಮಾರಿ ನಯನಾ ಎಂ, ನಾಯ್ಕ, ನೃತ್ಯ ಮತ್ತು ಅಭಿನಯ – ಕುಮಾರಿ ಸಾನಿಧ್ಯ ಆಚಾರ್ಯ ಪ್ರಶಸ್ತಿ ಪಡೆದಿದ್ದಾರೆ.

Also Read: ಬ್ರಹ್ಮಾವರ : ಕಳಪೆ ಗುಣಮಟ್ಟದ ಚಿನ್ನಾಭರಣ ಅಡಮಾನವಿಟ್ಟು ವಂಚನೆ

ಸಮಾಜ ಸೇವೆ – ಶ್ರೀನಿಧಿ ಮಹಿಳಾ ಮಂಡಳಿ ಹೆರ್ಮಾಳು, ಜಾನಪದ ಕಲಾ ತಂಡ ಮತ್ತು ಸಮಾಜ ಸೇವೆ – ಕಲಾಮಯ ಜಾನಪದ ಕಲಾ ಸಂಘ ಕಾಪು, ಸಂಘ ಸಂಸ್ಥೆ – ಅನಂತ ಪದ್ಮನಾಭ ಫ್ರೆಂಡ್ಸ್​ ಹೆಬ್ರಿ, ಯಕ್ಷಗಾನ – ಪೊರ್ಸಾರು ಶ್ರೀಮಹಲಿಂಗೇಶ್ವರ ಯಕ್ಷಗಾನ ಕಲಾಮಂಡಳಿ ಕಾರ್ಕಳ, ಸಂಘ ಸಂಸ್ಥೆ , ಸಮಾಜ ಸೇವೆ – ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ, ಯಕ್ಷಗಾನ ಮತ್ತು ಸಮಾಜ ಸೇವೆ – ಶ್ರೀ ಬ್ರಹ್ಮ ಬೈದರ್ಕಳ ದೂಮಾವತಿ ಯಕ್ಷಗಾನ ಕಳಾಮಂಡಳಿ ಕಳಿಕಾರ್ ಕಿರಿಯೂರು , ಸಮಾಜ ಸೇವೆ – ಯುವ ಜನ ಮಂಡಳ ಉಪ್ಪೂರು, ನೃತ್ಯ – ಕಲಾ ನರ್ತನ ಡ್ಯಾನ್ಸ್ ಕ್ರೀವ್​ ಜನ್ನಾಡಿ, ಸಾಮಾಜಿಕ ಸೇವೆ – ಯುವ ವಿಚಾರ ವೇದಿಕೆ ಕೊಳಲಗಿರಿ, ಕಲೆ ಮತ್ತು ಸಾಂಸ್ಕೃತಿಕ – ಸುರಭಿ ಬೈಂದೂರು, ಸಮಾಜ ಸೇವೆ ಮತ್ತು ಧಾರ್ಮಿಕ ಸೇವೆ – ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೊಂಜಾಡಿ, ಕ್ರೀಡೆ ಮತ್ತು ಶಿಕ್ಷಣ , ಸಮಾಜ ಸೇವೆ – ಬೆಳಪು ಸ್ಪೋರ್ಟ್ಸ್ ಕ್ಲಬ್​ ಕಾಪು ತಾ. – ಹೋಳಿ ಕುಣಿತ ಯಕ್ಷಗಾನ – ಶ್ರೀದುರ್ಗಾ ಪರಮೇಶ್ವರಿ ಮರಾಠಿ ಸಮುದಾಯ ಕಲಾ ಸಂಘ ಹಿರಿಯಡ್ಕ ಸಂಘ ಸಂಸ್ಥೆಗಳು ಈ ವರ್ಷದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿವೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories