ಪ್ರತಿಯೊಬ್ಬ ಮಹಿಳೆ ತಿಳಿದುಕೊಳ್ಳಲೇ ಬೇಕಾದ ಆರೋಗ್ಯ ತಪಾಸಣೆಗಳು
ಈಗಲಂತೂ ನಮ್ಮ ಆಹಾರದ ಶೈಲಿ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಪೌಷ್ಟಿಕ ಆಹಾರ ಬಿಟ್ಟು, ರೋಡ್ಸೈಡ್ ಆಹಾರಕ್ಕೆ ಹೆಚ್ಚು ಹೊಂದಿಕೊಂಡು ಬಿಟ್ಟಿದ್ದೀವಿ. ಇಂತಹ ಜೀವನ ಶೈಲಿಯಲ್ಲಿ ನಾವು ಯಾವ ರೀತಿಯ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕು ಎಂಬುದರ ಕುರಿತಾದ ಕೆಲವೊಂದಿಷ್ಟು ಮಾಹಿತಿಗಳು ಇಲ್ಲಿವೆ.
ಮುಖ್ಯವಾಗಿ ಮಹಿಳೆಯರ ಆರೋಗ್ಯ ಹೆಚ್ಚು ಸೂಕ್ಷ್ಮ. ಹಾಗಾಗಿ ಮಹಿಳೆಯರು ಮುಖ್ಯವಾಗಿ ಗಮನಿಸಬೇಕಾದ ಕೆಲವು ಮಾಹಿತಿಗಳನ್ನು ತಿಳಿಯೋಣ.
ತಿಳಿಯಬೇಕಾದ ಅಂಶಗಳು:
ವಿಳಂಬ ಮಾಡಬೇಡಿ : ಮಹಿಳೆಯರು ವೈದ್ಯಕೀಯ ಸಲಹೆಯನ್ನು ಪಡೆಯುಲು ಹೆಚ್ಚು ವಿಳಂಬ ಮಾಡುತ್ತಿದ್ದಾರೆ. ಕೆಲವು ರೋಗಗಳಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಕೊಡುವುದು ಅಗತ್ಯವಾಗಿರುತ್ತದೆ. ಹಾಗಿರುವಾಗ ವಿಳಂಬ ಮಾಡಿ ದೀರ್ಘಕಾಲಿಕ ರೋಗಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುವದರಿಂದ, ಯಾವುದೇ ರೋಗದ ಲಕ್ಷಣಗಳು ಬಂದಲ್ಲಿ ಮೊದಲು ಹತ್ತಿರದ ಆಸ್ಪತ್ರೆಯಲ್ಲಿನ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ.
ಮಹಿಳೆಯರಿಗೆ, ಸ್ತನ ಮತ್ತು ಗರ್ಭಕ್ಕೆ ಸಂಬಂಧಿಸಿದ ಕ್ಯಾನ್ಸರ್ಗಳು, ಕ್ಷಯರೋಗ(ಟಿಬಿ) ಮತ್ತು ಹೆಚ್ಐವಿ – ಏಡ್ಸ್ನಂತಹ ಸಾಂಕ್ರಾಮಿಕ ರೋಗಗಳು, ಥೈರೈಡ್, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಮೊದಲೇ ಪತ್ತೆ ಹಚ್ಚಿದರೆ ಅದನ್ನು ಉತ್ತಮವಾಗಿ ನಿರ್ವಹಿಸಲು ಸಹಾಯವಾಗತ್ತದೆ.
ಪ್ರತಿಯೊಬ್ಬ ಮಹಿಳೆ ತಿಳಿದುಕೊಳ್ಳಬೇಕಾದ ಅಗತ್ಯ ತಪಾಸಣೆಗಳು:
ತಡೆಗಟ್ಟುವಿಕೆಯು ರೋಗದ ಹೊರೆಯನ್ನ ಕಡಿಮೆ ಮಾಡುತ್ತದೆ. ಮತ್ತು ಆರೋಗ್ಯದ ಒಟ್ಟಾರೆ ಫಲಿತಾಂಶವನ್ನು ಸುಧಾರಿಸುತ್ತದೆ. ರೋಗವನ್ನ ಫ್ರಾರಂಭದಲ್ಲೇ ತಡೆದರೆ ಉತ್ತಮ ಆರೋಗ್ಯಕ್ಕುಂಟಾಗುವ ದುಷ್ಪರಿಣಾವನ್ನು ತಪ್ಪಿಸಬಹುದು.
ಕ್ಯಾನ್ಸರ್ ಅಪಾಯದ ತಪಾಸಣೆ:
ಕ್ಯಾನ್ಸರ್ಗಳು ಹೆಚ್ಚಾಗಿ ಜೀವಕೋಶಗಳಲ್ಲಿನ ಬದಲಾವಣೆಗಳಿಂದ ಉಂಟಾಗುವಂಥದ್ದು. ಕೆಲವು ಆನುವಂಶಿಕವಾಗಿಯೂ ಇರಬಹುದು. ನಿಮ್ಮ ಕುಂಟುಂಬದಲ್ಲಿ ಕ್ಯಾನ್ಸರ್ ಬಳಲಿತ ವ್ಯಕ್ತಿ ಇದ್ದರೆ ನೀವೂ ಕೂಡಾ ಒಮ್ಮೆ ವೈದ್ಯರನ್ನ ಭೇಟಿ ಮಾಡಿ ಸಲಹೆ ಪಡೆಯುವುದು ಉತ್ತಮ.
ಸಂತಾನದ ಆರೋಗ್ಯ ಪರೀಕ್ಷೆ:
ಗರ್ಭಾವಸ್ಥೆಯಲ್ಲಿ ಪ್ರತಿ ಮಹಿಳೆ ಆರೋಗ್ಯವನ್ನು ಅತ್ಯಂತ ಸೂಕ್ಷ್ಮ ಮತ್ತು ಕಾಳಜಿಯಿಂದ ನೋಡಿಕೊಳ್ಳಲೇಬೇಕು. ಹಾಗಾಗಿ ಆರೋಗ್ಯದಲ್ಲಿನ ವ್ಯತ್ಯಾಸವನ್ನು ಪರೀಕ್ಷಿಸುತ್ತಾ ಇರುವುದು ಉತ್ತಮ.
ಜೀವನಶೈಲಿಯ ಕಾಯಿಲೆಗಳಿಗೆ ತಪಾಸಣೆ:
ರಕ್ತದೊತ್ತಡ, ಕೊಲೆಸ್ಟ್ರಾಲ್, ಶುಗರ್, ಬಿಪಿ, ಪೌಷ್ಟಿಕತೆಯ ಕೊರತೆ, ಅಶಕ್ತಿ ಈ ಥರಹದ ಸಮಸ್ಯೆಗಳು ಸಾಮಾನ್ಯವಾಗಿ ನಮ್ಮ ಜೀವನಶೈಲಿಯ ಮೇಲೆ ಅವಲಂಬಿತವಾಗಿರುತ್ತದೆ. ಅದರಲ್ಲೂ ಹೆಚ್ಚಾಗಿ ತಾಂತ್ರಿಕ ಯುಗದಲ್ಲಿ ಸಮಯಕ್ಕೆ ಸರಿಯಾಗಿ ಊಟ ತಿಂಡಿ ನಿದ್ದೆ ಮಾಡದೇ ಇರುವುದು ಇಂತಹ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹೀಗಿರುವಾಗ ನೀವು ವೈದ್ಯರ ಸಲಹೆಯ ಮೂಲಕ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳಿ. ನಿಮ್ಮ ಆರೋಗ್ಯವನ್ನು ಹೆಚ್ಚು ಉತ್ತಮವಾಗಿರಿಸಿಕೊಳ್ಳುವತ್ತ ಗಮನವಹಿಸಿ.



