Delhi blast : ಬಾಬ್ರಿ ಮಸೀದಿ ದ್ವಂಸಕ್ಕೆ ಪ್ರತೀಕಾರವೇ ದೆಹಲಿ ಸ್ಪೋಟ : 32 ಕಡೆ ಸ್ಫೋಟಕ್ಕೆ ಹುನ್ನಾರ..!

ನವದೆಹಲಿ : ದೆಹಲಿ ಬಾಂಬ್ ಸ್ಫೋಟ (Delhi blast) ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ ಉಗ್ರರ ಸಂಚಿನ ಸ್ಫೋಟಕ ಮಾಹಿತಿಯನ್ನು ಹೊರಗೆಡವಿದೆ. ಬಾಬ್ರಿ ಮಸೀದಿ ಧ್ವಂಸಕ್ಕೆ ಪ್ರತೀಕಾರವಾಗಿ ದೆಹಲಿ ಸ್ಪೋಟ ನಡೆದಿದೆ ಎನ್ನಲಾಗುತ್ತಿದೆ.
1992ರ ಡಿಸೆಂಬರ್ 6 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದ್ದ ಬಾಬ್ರಿ ಮಸೀದಿ ಧ್ವಂಸ ನಡೆದಿತ್ತು. ನಂತರದಲ್ಲಿ ಸುಪ್ರೀಂ ಕೋರ್ಟ್ ಅಯೋಧ್ಯೆ, ಬಾಬ್ರಿ ಮಸೀದಿ ವಿವಾದಕ್ಕೆ ತೆರೆ ಎಳೆದಿತ್ತು.
ಆದ್ರೆ ಉಗ್ರರು ಬಾಬ್ರಿ ಮಸೀದಿ ದಾಳಿಗೆ ಪ್ರತೀಕಾರವಾಗಿ ಈ ದಾಳಿ ಅಲ್ಲದೇ ಈ ವರ್ಷ ಡಿಸೆಂಬರ್ ಆರರಂದು ಉಗ್ರರು ದೇಶದ ನಾನಾ ಭಾಗದ 32 ಕಡೆಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ 32 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ದೇಶದ 32 ಕಡೆಗಳಲ್ಲಿ ಬಾಂಬ್ ಸ್ಫೋಟಿಸಿ ಪ್ರತೀಕಾರ ತೀರಿಸಿಕೊಳ್ಳುವ ಹುನ್ನಾರ ಉಗ್ರರದ್ದಾಗಿತ್ತು ಎನ್ನಲಾಗಿದೆ.
ಇನ್ನು ಈ ಸ್ಫೋಟ ನಡೆಸಲು ಆರೋಪಿಗಳು ಬರೋಬ್ಬರಿ 23 ಲಕ್ಷ ರೂಪಾಯಿಗಳನ್ನು ವ್ಯಯಿಸಿದ್ದರು. ಹೀಗಾಗಿ ಅಲ್ – ಫಲಾಹ್ ವಿಶ್ವವಿದ್ಯಾಲಯಕ್ಕೆ ಕೇಂದ್ರದಿಂದ ಬರುತ್ತಿದ್ದ ಅನುದಾನಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗಿದ್ಯಾ ಎಂಬ ದಿಕ್ಕಿನಲ್ಲಿಯೂ ಇಡಿ ತನಿಖೆ ಚುರುಕುಗೊಳಿಸಿದೆ. ಈ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ವೈದ್ಯರು ಇದೇ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ದೆಹಲಿ ಸ್ಫೋಟ : ಪ್ರಮುಖ ಬೆಳವಣಿಗೆಗಳು
ಭಯೋತ್ಪಾದಕ ಕೃತ್ಯವೆಂದು ಮೋದಿ ಘೋಷಣೆ
ಕೇಂದ್ರ ಸರಕಾರ ದೆಹಲಿಯ ಕಾರು ಸ್ಫೋಟವನ್ನು ಭಯೋತ್ಪಾದಕ ಕೃತ್ಯ ಎಂದು ಅಧಿಕೃತವಾಗಿ ಘೋಷಿಸಿದೆ. ಅಲ್ಲದೇ ಕೇಂದ್ರ ಸಚಿವ ಸಂಪುಟದಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಎನ್ಐಎ ತನಿಖೆ ಚುರುಕು
ದೆಹಲಿ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಒಂದು ವಿಶೇಷ ತಂಡವನ್ನು ರಚಿಸಿ ತನಿಖೆಯನ್ನು ತೀವ್ರಗೊಳಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಭದ್ರತಾ ಸಭೆಯೂ ನಡೆದಿದೆ.
ಇದನ್ನೂ ಓದಿ : ಬಿಹಾರ ಚುನಾವಣೆ ಎನ್ಡಿಎ ಮೈತ್ರಿಕೂಟಕ್ಕೆ ಗೆಲುವು : ಕ್ಲೀನ್ ಸ್ವೀಪ್ ಮಾಡ್ತಾರಾ ಮೋದಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರದ ಯುವ ವೈದ್ಯ ಡಾ. ಆದಿಲ್ ಅಹ್ಮದ್ ಎಂಬಾತನನ್ನು ಬಂಧಿಸಲಾಗಿದೆ. ಈತ ಸ್ಫೋಟದ ಒಂದು ವಾರದ ಮೊದಲು ಶ್ರೀನಗರದಿಂದ ದೆಹಲಿಗೆ ಪ್ರಯಾಣಿಸಿದ್ದ ವಿಮಾನದ ಟಿಕೆಟ್ ಪತ್ತೆಯಾಗಿದೆ. ಬಂಧಿತ ಶಂಕಿತರು ತಮ್ಮ ಸಂವಹನಕ್ಕಾಗಿ ‘ತ್ರೀಮಾ’ (Threema) ಎಂಬ ಗೂಢಲಿಪಿಯ ಮೆಸೇಜಿಂಗ್ ಅಪ್ಲಿಕೇಶನ್ ಬಳಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ದೆಹಲಿ ಸ್ಫೋಟ ನಡೆಸಲು 8 ಶಂಕಿತರು 4 ನಗರಗಳಲ್ಲಿ ಸರಣಿ ಸ್ಫೋಟ ನಡೆಸಲು ಯೋಜಿಸಿದ್ದರು ಎಂಬ ಅಂಶ ತನಿಖೆಯಿಂದ ತಿಳಿದುಬಂದಿದೆ. ಕೆಂಪುಕೋಟೆಯ ಬಳಿಯಲ್ಲಿ ನಡೆದಿದ್ದ ಸ್ಫೋಟದಲ್ಲಿ ಇದುವರೆಗೆ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಯಿಂದಾಗಿ ಮೃತದೇಹಗಳು ಛಿದ್ರಗೊಂಡಿದ್ದು, ಡಿಎನ್ಎ ಮಾದರಿಗಳ ಮೂಲಕ ಗುರುತು ಪತ್ತೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
Delhi blast are revenge for the Babri Masjid demolition Explosions planned at 32 places



