Omission of ghee: ತಿರುಪತಿಯಿಂದ ಕಲಬೆರಕೆ ಲಡ್ಡು 20 ಕೋಟಿ ಭಕ್ತರಿಗೆ ಹಂಚಿಕೆ : ತುಪ್ಪದ ಲೋಪ.. ನಕಲಿ ಲಡ್ಡು ವಿತರಣೆ
ತಿರುಪತಿ : Omission of ghee: ಭಾರತ ಪ್ರಸಿದ್ದ ದೇವಾಲಯವಾಗಿರಿವ ತಿರುಮಲ(Tirumala) ದೇವಸ್ಥಾನದಲ್ಲಿ ಕಲಬೆರಕೆ ಲಡ್ಡು ಪ್ರಸಾದ ವಿತರಣೆ ಪ್ರಕರಣದಲ್ಲಿ ಎಸ್ಐಟಿ ತನಿಖೆ ಚುರುಕುಗೊಳಿಸಿದೆ. ಈ ವೇಳೆ ಟಿಟಿಡಿ ಅಧ್ಯಕ್ಷ ಬಿ.ಆರ್ ನಾಯ್ಡು ಕಲಬೆರಕೆ ತುಪ್ಪ ಪೂರೈಕೆ ವಿಚಾರದಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ.
2019ರಿಂದ 24ರ ಅವಧಿಯಲ್ಲಿ ಹಲವು ಕಂಪನಿಗಳಿಂದ 68 ಲಕ್ಷ ಕೆಜಿ ನಕಲಿ ತುಪ್ಪ ಪೂರೈಕೆಯಾಗಿತ್ತು. ಈ ಅವಧಿಯಲ್ಲಿ ಒಟ್ಟೂ 49 ಕೋಟಿ ಲಡ್ಡು ತಯಾರಿಸಲಾಗಿದ್ದು ಅದರಲ್ಲಿ 20 ಕೋಟಿ ನಕಲಿ ತುಪ್ಪದಿಂದ ತಯಾರಾದ ಲಡ್ಡು ಎಂದು ಹೇಳಿದ್ದಾರೆ. ಈ ಅವಧಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆ 11 ಕೋಟಿ ಭಕ್ತರು ಆಗಮಿಸಿದ್ದರು ಎನ್ನಲಾಗಿದೆ.
Also Read: Delhi Blast: ದೆಹಲಿ ಸ್ಫೋಟವನ್ನು ಸದನದಲ್ಲಿ ಹಾಡಿಹೊಗಳಿದ ಪಾಕ್ ರಾಜಕಾರಣಿ : ಮತ್ತೊಮ್ಮೆ ಬಯಲಾಯ್ತು ಪಾಕ್ ನೀಚಕೃತ್ಯ
ಈ ಅವಧಿಯಲ್ಲಿ ಒಟ್ಟೂ 1.61 ಕೋಟಿ ಕೆಜಿ ತುಪ್ಪ ಖರೀದಿ ಮಾಡಲಾಗಿತ್ತು. ಇದರಲ್ಲಿ ಉತ್ತರಾಖಂಡದ ಭೋಲೆ ಬಾಬಾ ಡೈರಿ ಮತ್ತು ಅದರ ಒಡನಾಡಿ ಕಂಪನಿಗಳಿಂದ 68 ಲಕ್ಷ ಕೆಜಿ ತುಪ್ಪ ಪೂರೈಕೆಯಾಗಿದೆ. ಅಂದರೆ ಐದು ವರ್ಷದ ಅವಧಿಯಲ್ಲಿ ಪೂರೈಕೆಯಾದ ಒಟ್ಟೂ ತುಪ್ಪದಲ್ಲಿ 42 ಪ್ರತಿಶತ ತುಪ್ಪ ನಕಲಿಯಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.



