Digital fraud: ಡಿಜಿಟಲ್​ ವಂಚಕರ ಜಾಲಕ್ಕೆ ಬ್ರೇಕ್​ ಹಾಕಲು ಕೇಂದ್ರ ಸರ್ಕಾರ ದಿಟ್ಟ ಕ್ರಮ : ಇನ್ಮುಂದೆ ನಡೆಯಲ್ಲ ಸೈಬರ್​ ಕಳ್ಳರ ಕಾಟ

Digital fraud: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಡಿಜಿಟಲ್​ ಅರೆಸ್ಟ್​ನಂತಹ ಸೈಬರ್​ ವಂಚನೆ ಜಾಲಗಳು ಬೆಳಕಿಗೆ ಬರುತ್ತಲೇ ಇದೆ. ಸೈಬರ್ ವಂಚನೆಯಿಂದಾಗಿ ಅನೇಕರು ತಮ್ಮ ಜೀವಮಾನದ ಉಳಿತಾಯದ ಮೊತ್ತವನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸೈಬರ್​ ವಂಚನೆಯ ಜಾಲಕ್ಕೆ ಬ್ರೇಕ್​ ಹಾಕಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

ಈ ಸಂಬಂಧ ಹೊಸ ನಿಯಮ ರೂಪಿಸಿರುವ ದೂರ ಸಂಪರ್ಕ ಸಚಿವಾಲಯ (Department of Telecommunications), ದೇಶದಲ್ಲಿ ನ್ಮುಂದೆ ಮಾರಾಟವಾಗುವ ಎಲ್ಲಾ ಹೊಸ ಸ್ಮಾರ್ಟ್​ ಫೋನ್​​ಗಳಲ್ಲಿ ಸಂಚಾರ ಸಾಥ್​​ ಕಡ್ಡಾಯಗೊಳಿಸಲು ಸೂಚನೆ ನೀಡಿದೆ.

ಈ ಆ್ಯಪ್​ನ್ನು ಡಿಲೀಟ್​ ಮಾಡಲು ಆಗದ ರೀತಿಯಲ್ಲಿ ಇನ್​ಸ್ಟಾಲ್​ ಮಾಡುವಂತೆ ಎಲ್ಲಾ ಸ್ಮಾರ್ಟ್​ಫೋನ್​ ತಯಾರಕಾ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಈ ಆ್ಯಪ್​ನ ಸಹಾಯದಿಂದ ಯಾವುದೇ ಮೊಬೈಲ್​ಗಳಲ್ಲಿ ಸೈಬರ್​ ವಂಚನೆ ನಡೆಯದಂತೆ ತಡೆಯಬಹುದಾಗಿದೆ.

Also Read: Bombay Name Change : ಐಐಟಿ ಬಾಂಬೆ ಐಐಟಿ ಮುಂಬೈ ಆಗುತ್ತಾ? ಶುರುವಾಗಿದೆ ಹೆಸರು ಬದಲಾವಣೆಯ ಚರ್ಚೆ!

ನವೆಂಬರ್​ 28ರಂದು ಈ ಆದೇಶ ನೀಡಲಾಗಿದ್ದು ಸ್ಮಾರ್ಟ್​ಫೋನ್​ ತಯಾರಕ ಕಂಪನಿಗಳಿಗೆ 90 ದಿನಗಳ ಸಮಯಾವಕಾಶ ನೀಡಿದೆ. ಅಲ್ಲದೇ ಈಗಾಗಲೇ ಮಾರಾಟವಾಗಿರುವ ಮೊಬೈಲ್​ಗಳಲ್ಲಿಯೂ ಈ ಆ್ಯಪ್​​ ಅಳವಡಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಒಮ್ಮೆ ಈ ಆ್ಯಪ್​ ಇನ್​ಸ್ಟಾಲ್​ ಮಾಡಿದ ಬಳಿಕ ಮತ್ತೆಂದೂ ಡಿಲೀಟ್​ ಆಗದ ರೀತಿಯಲ್ಲಿ ಮೊಬೈಲ್​ಗಳ ಸಾಫ್ಟ್​ವೇರ್​ಗಳಲ್ಲಿ ಬದಲಾವಣೆ ತರುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories