Mundagodu smuggling : ಕಾಡುಹಂದಿ ಮಾಂಸ, ಜಿಂಕೆ ಚರ್ಮ ಸಾಗಾಟ : ಐವರು ಅರೆಸ್ಟ್‌

Mundagodu smuggling : ಮುಂಡಗೋಡ : ಅಕ್ರಮವಾಗಿ ಕಾಡು ಪ್ರಾಣಿಗಳನ್ನೂ ಭೇಟಿಯಾಡಿ, ಕಾಡುಹಂದಿ ಮಾಂಸ ಹಾಗೂ ಜಿಂಕೆಯ ಚರ್ಮವನ್ನು ಸಾಗಾಟ ಮಾಡುತ್ತಿದ್ದ ಐವರನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಕಾತೂರಿನಲ್ಲಿ ನಡೆದಿದೆ.

ಮುಂಡಗೋಡು ತಾಲೂಕಿನ ಬಾಳೆಕೊಪ್ಪ ಗ್ರಾಮದ ಕನಕಪ್ಪ ದುರ್ಗಪ್ಪ ಮಾದರ್‌, ಪರಶುರಾಮ್ ಕನಕಪ್ಪ ಮಾದ‌ರ್ ಹಾಗೂ ಸೊರಬ ತಾಲೂಕಿನ ಕೋಡಿಕೊಪ್ಪ ಗ್ರಾಮದ ಸುರೇಶ ದೇವಪ್ಪ, ಶಿವಪುತ್ರಪ್ಪ ಹನುಮಂತಪ್ಪ ಮತ್ತು ಉಮೇಶ ಗುಡ್ಡಪ್ಪ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.

ಕಾತೂರು ಅರಣ್ಯ ವಲಯದ ಬಾಳೆಕೊಪ್ಪ (ಕರ್ಕಲ ಜಡ್ಡಿ) ಗ್ರಾಮದ ವ್ಯಾಪ್ತಿಯಲ್ಲಿ ವನ್ಯಜೀವಿಗಳ ಬೇಟೆ ನಡೆಯುತ್ತಿರುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿದ್ದರು.

ದಾಳಿಯ ವೇಳೆಯಲ್ಲಿ ಎರಡು ಬೈಕ್‌ಗಳಲ್ಲಿ ಜಿಂಕೆ ಚರ್ಮ ಹಾಗೂ 3.9 ಕೆಜಿಯಷ್ಟು ಕಾಡು ಹಂದಿಯ ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಕಂಡು ಬಂದಿದೆ. ಕೂಡಲೇ ಆರೋಪಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಎರಡು ಬೈಕ್‌, ಹಂದಿಯ ಮಾಂಸ, ಜಿಂಕೆಯ ಚರ್ಮವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಜಪ್ತಿ ಮಾಡಿದ್ದಾರೆ. ಸದ್ಯ ಎಲ್ಲಾ ಐವರು ಆರೋಪಿಗಳ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Mundagodu Karawar Five arrested for smuggling wild boar meat and deer skin

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories