Fake GST: ನಕಲಿ ಜಿಎಸ್‌ಟಿ ನಂಬರ್‌ನ್ನು ನೀವೇ ಪತ್ತೆಹಚ್ಚಿ! ಇಲ್ಲಿದೆ ಸರಳ ವಿಧಾನ

Fake GST Checking steps: ಇತ್ತೀಚಿನ ದಿನಗಳಲ್ಲಿ ಜಿಎಸ್‌ಟಿ ಹೆಸರಿನಲ್ಲಿ ಗ್ರಾಹಕರಿಂದ ಹಣ ವಸೂಲಿ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಕೆಲವು ಅಂಗಡಿಕಾರರು ಅಥವಾ ಸಂಸ್ಥೆಗಳು ರದ್ದಾದ ಅಥವಾ ನಕಲಿ ಜಿಎಸ್‌ಟಿ ಸಂಖ್ಯೆಗಳನ್ನು ಬಳಸಿ ತೆರಿಗೆ ಸಂಗ್ರಹಿಸುತ್ತವೆ. ಇದನ್ನು ತಪ್ಪಿಸಲು ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.

ಅಧಿಕೃತ ಜಿಎಸ್‌ಟಿ ಪೋರ್ಟಲ್ ಮೂಲಕ ಪರಿಶೀಲನೆ:
ಇದು ಅತ್ಯಂತ ಸುರಕ್ಷಿತ ಮತ್ತು ಅಧಿಕೃತ ಮಾರ್ಗವಾಗಿದೆ.

    ಮೊದಲು ಜಿಎಸ್‌ಟಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: www.gst.gov.in

    ವೆಬ್‌ಸೈಟ್‌ನ ಮುಖಪುಟದಲ್ಲಿರುವ ‘Search Taxpayer’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

    ಅಲ್ಲಿ ‘Search by GSTIN/UIN’ ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.

    ನೀವು ಪರಿಶೀಲಿಸಬೇಕಿರುವ 15 ಅಂಕಿಗಳ ಜಿಎಸ್‌ಟಿ ಸಂಖ್ಯೆಯನ್ನು ನಮೂದಿಸಿ ಮತ್ತು ಕೆಳಗಿರುವ ‘Captcha’ ಕೋಡ್ ಹಾಕಿ ‘Search’ ಬಟನ್ ಒತ್ತಿರಿ.

    ಫಲಿತಾಂಶದಲ್ಲಿ ಏನು ಗಮನಿಸಬೇಕು?
    ನೀವು ಸರ್ಚ್ ಕೊಟ್ಟಾಗ ಆ ಸಂಖ್ಯೆ ಅಸಲಿಯಾಗಿದ್ದರೆ ಈ ಕೆಳಗಿನ ವಿವರಗಳು ಪರದೆಯ ಮೇಲೆ ಕಾಣಿಸುತ್ತವೆ:

      Legal Name of Business: ವ್ಯವಹಾರದ ಅಧಿಕೃತ ಹೆಸರು.

      GSTIN Status: ಇಲ್ಲಿ ‘Active’ ಎಂದು ಇರಬೇಕು. ಒಂದು ವೇಳೆ ‘Cancelled’ ಅಥವಾ ‘Suspended’ ಎಂದು ಇದ್ದರೆ ಆ ಸಂಖ್ಯೆ ಅಮಾನ್ಯ ಎಂದರ್ಥ.

      Date of Registration: ನೋಂದಣಿಯಾದ ದಿನಾಂಕ.

      Business Structure: ಅದು ಪಾಲುದಾರಿಕೆ ಸಂಸ್ಥೆಯೇ ಅಥವಾ ವೈಯಕ್ತಿಕ ಸಂಸ್ಥೆಯೇ ಎಂಬ ಮಾಹಿತಿ.

      ಜಿಎಸ್‌ಟಿ ಸಂಖ್ಯೆಯ ರಚನೆಯನ್ನು ಗಮನಿಸಿ:
      ಒಂದು ಸರಿಯಾದ ಜಿಎಸ್‌ಟಿ ಸಂಖ್ಯೆ 15 ಅಂಕಿಗಳನ್ನು ಹೊಂದಿದ್ದು, ಅದರ ರಚನೆ ಹೀಗಿರುತ್ತದೆ:

        ಮೊದಲ 2 ಅಂಕಿಗಳು: ರಾಜ್ಯದ ಕೋಡ್ (ಉದಾಹರಣೆಗೆ ಕರ್ನಾಟಕಕ್ಕೆ 29).

        ನಂತರದ 10 ಅಂಕಿಗಳು: ಉದ್ದಿಮೆದಾರನ ಅಥವಾ ಸಂಸ್ಥೆಯ PAN ಸಂಖ್ಯೆ.

        13ನೇ ಅಂಕಿ: ಅದೇ ಪಾನ್ ಕಾರ್ಡ್ ಅಡಿಯಲ್ಲಿ ಆ ರಾಜ್ಯದಲ್ಲಿ ಎಷ್ಟು ನೋಂದಣಿಯಾಗಿದೆ ಎಂಬುದನ್ನು ಸೂಚಿಸುತ್ತದೆ.

        14ನೇ ಅಂಕಿ: ಇದು ಸಾಮಾನ್ಯವಾಗಿ ‘Z’ ಅಕ್ಷರವಾಗಿರುತ್ತದೆ.

        15ನೇ ಅಂಕಿ: ಇದನ್ನು ‘ಚೆಕ್ ಕೋಡ್’ ಎಂದು ಕರೆಯಲಾಗುತ್ತದೆ (ಇದು ಅಕ್ಷರ ಅಥವಾ ಸಂಖ್ಯೆಯಾಗಿರಬಹುದು).

        ಇನ್‌ವಾಯ್ಸ್ (ಬಿಲ್) ನಲ್ಲಿ ಗಮನಿಸಬೇಕಾದ ಅಂಶಗಳು:
        ಯಾವುದೇ ವ್ಯಾಪಾರಿ ನಿಮ್ಮ ಬಳಿ ಜಿಎಸ್‌ಟಿ ತೆರಿಗೆ ವಸೂಲಿ ಮಾಡುತ್ತಿದ್ದರೆ, ಬಿಲ್ ಮೇಲೆ ಜಿಎಸ್‌ಟಿ ಸಂಖ್ಯೆ ಇರುವುದು ಕಡ್ಡಾಯ.

          ಕಾಂಪೋಸಿಷನ್ ಸ್ಕೀಮ್ (Composition Scheme) ಅಡಿಯಲ್ಲಿ ಬರುವ ವ್ಯಾಪಾರಿಗಳಿಗೆ ಗ್ರಾಹಕರಿಂದ ಜಿಎಸ್‌ಟಿ ವಸೂಲಿ ಮಾಡುವ ಅಧಿಕಾರವಿಲ್ಲ. ಅಂತಹ ಬಿಲ್‌ಗಳ ಮೇಲೆ “Composition taxable person, not eligible to collect tax on supplies” ಎಂದು ನಮೂದಿಸಿರಬೇಕು.

          ಸುಕನ್ಯಾ ಸಮೃದ್ಧಿ ಯೋಜನೆ: ಹೆಣ್ಣುಮಕ್ಕಳ ಬಾಳು ಬಂಗಾರವಾಗಲು ಹೀಗೆ ಮಾಡಿ

          ನಕಲಿ ಎಂದು ಕಂಡುಬಂದಲ್ಲಿ ದೂರು ನೀಡುವುದು ಹೇಗೆ?
          ಒಂದು ವೇಳೆ ನೀವು ಪರಿಶೀಲಿಸಿದ ಜಿಎಸ್‌ಟಿ ಸಂಖ್ಯೆ ನಕಲಿ ಎಂದು ತಿಳಿದುಬಂದರೆ, ನೀವು ಈ ಕೆಳಗಿನ ಮಾರ್ಗಗಳ ಮೂಲಕ ದೂರು ನೀಡಬಹುದು:

          ಜಿಎಸ್‌ಟಿ ಸಹಾಯವಾಣಿ: 1800-103-4786

          ಅಧಿಕೃತ ಇಮೇಲ್: cbecmitra.helpdesk@icegate.gov.in

          ಟ್ವಿಟರ್: @askGST_GoI ಮೂಲಕವೂ ದೂರು ಸಲ್ಲಿಸಬಹುದು.

          ಗಮನಿಸಿ: ಬಿಲ್ ಪಾವತಿಸುವ ಮೊದಲು ಜಿಎಸ್‌ಟಿ ಸಂಖ್ಯೆಯನ್ನು ಪರಿಶೀಲಿಸುವುದು ನಿಮ್ಮ ಹಕ್ಕು. ಇದು ವಂಚನೆಯನ್ನು ತಡೆಯಲು ನೆರವಾಗುತ್ತದೆ.

          Vidhya | ವಿದ್ಯಾಶ್ರೀ

          ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

          Related Stories