ಬ್ಯಾಂಕ್ ಉದ್ಯೋಗಿಯಾಗುವ ಸುವರ್ಣಾವಕಾಶ: ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 600 ಅಪ್ರೆಂಟಿಸ್‌ಶಿಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Bank OF Maharashtra Recruitment 2026: ಬ್ಯಾಂಕ್ ಆಫ್ ಮಹಾರಾಷ್ಟ್ರ ದೇಶಾದ್ಯಂತ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಖಾಲಿ ಇರುವ 600 ಅಪ್ರೆಂಟಿಸ್‌ಶಿಪ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿಯನ್ನು ಪ್ರಕಟಿಸಿದೆ.
ಇದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಇದು ಸುವರ್ಣಾವಕಾಶವಾಗಿದೆ. ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳು ಬ್ಯಾಂಕ್ ಆಫ್ ಮಹಾರಾಷ್ಟ್ರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ನೇಮಕಾತಿ ಪ್ರಕ್ರಿಯೆಯು ಜನವರಿ 15ರಿಂದ ಪ್ರಾರಂಭವಾಗಿದ್ದು ಜನವರಿ 25ರ ವರೆಗೆ ಇರಲಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನದ ಒಳಗೆ ಅರ್ಜಿ ಭರ್ತಿ ಮಾಡಬಹುದು.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳೇನು ಎಂದು ನೋಡೋಣ.
ವಿದ್ಯಾರ್ಹತೆ
ಬ್ಯಾಂಕ್ ಆಫ್ ಬರೋಡದಲ್ಲಿ ಅಪ್ರೆಂಟಿಸ್‌ಶಿಪ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ
ಯಾವುದೇ ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ
ಅಭ್ಯರ್ಥಿಯ ಕನಿಷ್ಠ ವಯಸ್ಸು 20 ವರ್ಷಗಳು ಹಾಗೂ ಗರಿಷ್ಠ ವಯಸ್ಸು 28 ವರ್ಷಗಳು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ಅರ್ಜಿ ಶುಲ್ಕ
ಮೀಸಲಾತಿ ರಹಿತ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗಗಳ ಅಭ್ಯರ್ಥಿಗಳು ಫಾರ್ಮ್ ಅನ್ನು ಭರ್ತಿ ಮಾಡುವುದರ ಜೊತೆಗೆ ₹150 ಜೊತೆಗೆ ಜಿಎಸ್ಟಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳು ₹100 ಜೊತೆಗೆ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಪಿಡಬ್ಲ್ಯೂಬಿಡಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಈ ನೇಮಕಾತಿಗೆ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
ಬ್ಯಾಂಕ್ ಆಫ್ ಮಹಾರಾಷ್ಟ್ರ ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ.
ಅರ್ಜಿ ಸಲ್ಲಿಕೆ ಹೇಗೆ?
- ಬ್ಯಾಂಕ್ ಆಫ್ ಮಹಾರಾಷ್ಟ್ರ ನೇಮಕಾತಿ ಅರ್ಜಿ ನಮೂನೆಯನ್ನು ಭರ್ತಿ ಮಾಡಲು, ನೀವು ಮೊದಲು ibpsreg.ibps.in/bomdec25/ ಪೋರ್ಟಲ್‌ಗೆ ಭೇಟಿ ನೀಡಬೇಕು.
- ಮೊದಲಿಗೆ ‘ಹೊಸ ನೋಂದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ’ ಮೇಲೆ ಕ್ಲಿಕ್ ಮಾಡಬೇಕು.
- ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
- ಬಳಿಕ ನಿಮ್ಮ ಇತರ ವಿವರಗಳು, ಸಹಿ, ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಬೇಕು.
- ಇದಾದನಂತರ, ನಿಗದಿತ ಶುಲ್ಕವನ್ನು ಪಾವತಿಸಿ.
- ಈಗ ಇನ್ನೊಮ್ಮೆ ಫಾರ್ಮ್ ಅನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ.
- ಅಂತಿಮವಾಗಿ, ಭರ್ತಿ ಮಾಡಿದ ನಮೂನೆಯ ಮುದ್ರಣವನ್ನು ತೆಗೆದುಕೊಳ್ಳಿ.
ಇದನ್ನೂ ಓದಿ: ಅಸ್ಸಾಂ ರೈಫಲ್ಸ್‌ನಲ್ಲಿ 95 ರೈಫಲ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಕ್ರೀಡಾಪಟುಗಳಿಗೆ ಸುವರ್ಣಾವಕಾಶ!
ರಾಜ್ಯವಾರು ನೇಮಕಾತಿ ವಿವರಗಳು
ಆಂಧ್ರಪ್ರದೇಶ: 11 ಹುದ್ದೆಗಳು
ಅರುಣಾಚಲ ಪ್ರದೇಶ: 1 ಹುದ್ದೆ
ಅಸ್ಸಾಂ: 7 ಹುದ್ದೆಗಳು
ಬಿಹಾರ: 15 ಹುದ್ದೆಗಳು
ಚಂಡೀಗಢ: 2 ಹುದ್ದೆಗಳು
ಛತ್ತೀಸ್‌ಗಢ: 13 ಹುದ್ದೆಗಳು
ದಾದ್ರಾ ಮತ್ತು ನಗರ: 1 ಹುದ್ದೆ
ಗೋವಾ: 6 ಹುದ್ದೆಗಳು
ಗುಜರಾತ್: 25 ಹುದ್ದೆಗಳು
ಹರಿಯಾಣ: 13 ಹುದ್ದೆಗಳು
ಹಿಮಾಚಲ ಪ್ರದೇಶ: 3 ಹುದ್ದೆಗಳು
ಜಮ್ಮು ಮತ್ತು ಕಾಶ್ಮೀರ: 3 ಹುದ್ದೆಗಳು
ಜಾರ್ಖಂಡ್: 9 ಹುದ್ದೆಗಳು
ಕರ್ನಾಟಕ: 21 ಹುದ್ದೆಗಳು
ಕೇರಳ: 13 ಹುದ್ದೆಗಳು
ಮಧ್ಯಪ್ರದೇಶ: 45 ಹುದ್ದೆಗಳು
ಮಹಾರಾಷ್ಟ್ರ: 261 ಹುದ್ದೆಗಳು
ಮಿಜೋರಾಂ: 1 ಹುದ್ದೆ
ದೆಹಲಿಯ ಎನ್‌ಸಿಟಿ: 12 ಹುದ್ದೆಗಳು
ಒಡಿಶಾ: 13 ಹುದ್ದೆಗಳು
ಪುದುಚೇರಿ: 1 ಹುದ್ದೆ
ಪಂಜಾಬ್: 15 ಹುದ್ದೆಗಳು
ರಾಜಸ್ಥಾನ: 15 ಹುದ್ದೆಗಳು
ತಮಿಳುನಾಡು: 21 ಹುದ್ದೆಗಳು
ತೆಲಂಗಾಣ: 17 ಹುದ್ದೆಗಳು
ತ್ರಿಪುರ: 1 ಹುದ್ದೆ
ಉತ್ತರ ಪ್ರದೇಶ: 34 ಹುದ್ದೆಗಳು
ಉತ್ತರಾಖಂಡ: 7 ಹುದ್ದೆಗಳು
ಪಶ್ಚಿಮ ಬಂಗಾಳ: 14 ಹುದ್ದೆಗಳು



