‘ಸಂಪಾಯಿತಲೇ ಪರಾಕ್​’ : ಸುಕ್ಷೇತ್ರ ಮೈಲಾರದಲ್ಲಿ ಹೊರಬಿತ್ತು ವಾರ್ಷಿಕ ಕಾರಣಿಕ

ಐತಿಹಾಸಿಕ ಸುಕ್ಷೇತ್ರ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಮೈಲಾರದಲ್ಲಿ ನಡೆಯುವ ಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ಜನಸ್ತೋಮವೇ ಹರಿದುಬಂದಿತ್ತು. ಈ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ ಕಾರ್ಣಿಕ ನುಡಿ 2026 ಹೊರಬಿದ್ದಿದ್ದು ಭವಿಷ್ಯ ವಾಣಿ ತಿಳಿದು ಭಕ್ತಾದಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
18 ಅಡಿ ಬಿಲ್ಲನೇರಿದ ಗೊರವಯ್ಯ ರಾಮಪ್ಪ ‘ಸಂಪಾಯಿತಲೇ ಪರಾಕ್​’ ಎಂದು ದೇವವಾಣಿ ನುಡಿದಿದ್ದಾರೆ. ವರ್ಷಕ್ಕೊಮ್ಮೆ ನುಡಿಯುವ ಈ ಭವಿಷ್ಯವಾಣಿಯು ನಮ್ಮ ನಾಡಿನ ಮಳೆ, ಬೆಳೆ, ರಾಜಕೀಯಗಳ ಏಳು ಬೀಳುಗಳ ಬಗ್ಗೆ ನೀಡುವ ಮುನ್ಸೂಚನೆಯಾಗಿದೆ.

ಈ ಬಾರಿ ಗೊರವಯ್ಯ ಸಂಪಾಯಿತಲೇ ಪರಾಕ್​ ಎಂದು ಹೇಳಿದ್ದಾರೆ. ಇದರ ಅರ್ಥ ಈ ವರ್ಷದ ನಾಡಿನಲ್ಲಿ ಸಮೃದ್ಧಿ, ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸಲಿದೆ. ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಲಿದೆ. ಹಾಗೂ ಯಾವುದೇ ಪ್ರಾಕೃತಿಕ ವಿಕೋಪಗಳು ಸಂಭವಿಸುವುದಿಲ್ಲ. ರಾಜಕೀಯದಲ್ಲಿಯೂ ಯಾವುದೇ ಅಸ್ಥಿರತೆ ಇಲ್ಲ ಎಂದು ಹೇಳಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories