ತಿರುಪತಿ ತಿರುಮಲ ಲಡ್ಡು ತಯಾರಿಕೆಗೆ ಬಾತ್ರೂಮ್ ತೊಳೆಯುವ ರಾಸಾಯನಿಕ ಬಳಕೆ : ಹೊರಬಿತ್ತು ಸ್ಫೋಟಕ ಮಾಹಿತಿ

Tirupati Tirumala laddu : ವಿಶ್ವವಿಖ್ಯಾತ ತಿರುಪತಿ ಲಡ್ಡು ವಿಚಾರ ನಾನಾ ಕಾರಣಗಳಿಂದಲೇ ಸುದ್ದಿಯಾಗುತ್ತಲೇ ಇದೆ. ಇದೀಗ ಇದೇ ಲಡ್ಡು ವಿಚಾರದಲ್ಲಿ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.
ತಿರುಪತಿ ದೇಗುಲದಲ್ಲಿ ಲಡ್ಡು ತಯಾರಿಕೆಗೆ ಬಳಕೆ ಮಾಡಲಾಗುತ್ತಿದ್ದ ತುಪ್ಪದಲ್ಲಿ ಸ್ನಾನಗೃಹ, ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಬಳಕೆ ಮಾಡಲಾಗುತ್ತಿದ್ದ ರಾಸಾಯನಿಕಗಳನ್ನು ಬಳಸುತ್ತಿದ್ದರು ಎಂದು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.
ಆಂಧ್ರಪ್ರದೇಶದ ಯಮ್ಮಿಗನೂರು ಎಂಬಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಪವಿತ್ರವಾದ ತಿರುಪತಿ ತಿರುಮಲ ದೇವಸ್ಥಾನದ ಲಡ್ಡು ತಯಾರಿಕೆಯಲ್ಲಿ ಹಿಂದಿನ ಜಗನ್ ಸರ್ಕಾರ ಮಾಡಬಾರದ ಪ್ರಮಾದಗಳನ್ನು ಮಾಡಿದೆ.
ಈ ಪ್ರಮಾದಗಳು ಯಾವ ಮಟ್ಟಿಗೆ ಇದ್ದವು ಎಂದರೆ ಸ್ನಾನಗೃಹ ಮತ್ತು ಶೌಚಾಲಯಗಳಲ್ಲಿ ಬಳಕೆಮಾಡಲಾಗುತ್ತಿದ್ದ ರಾಸಾಯನಿಕಗಳಿಂದ ತಯಾರಾದ ತುಪ್ಪದಿಂದ ಲಡ್ಡುಗಳನ್ನು ತಯಾರಿಸಿ ಭಕ್ತಾದಿಗಳಿಗೆ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : ಹಕ್ಕಿ ಜ್ವರದ ಆತಂಕ : ಕರ್ನಾಟಕದಲ್ಲಿ ಹೈ ಅಲರ್ಟ್ ಘೋಷಣೆ
ವೈಎಸ್ಆರ್ಪಿ ಸರ್ಕಾರವು ಬರೋಬ್ಬರಿ ಐದು ವರ್ಷಗಳಿಂದ ಇದನ್ನು ಮಾಡುತ್ತಲೇ ಬಂದಿದೆ. ಶ್ರೀಶೈಲಂ ದೇವಸ್ಥಾನಕ್ಕೂ ಕೂಡ ಇದೇ ತುಪ್ಪವನ್ನು ಕಳುಹಿಸಿದ್ದ ವೈಎಸ್ಆರ್ಪಿ ಸರ್ಕಾರವು ಆ ದೇಗುಲದ ಪಾವಿತ್ರ್ಯತೆಯನ್ನೂ ಹಾಳುಮಾಡಿದೆ ಎಂದಿದ್ದಾರೆ.
ತುಪ್ಪಗಳಲ್ಲಿ ತರಕಾರಿ ಆಧಾರಿತ ತುಪ್ಪ ಬಳಕೆ ಮಾಡಲು ಹೆಚ್ಚು ಹಣ ಖರ್ಚಾಗುತ್ತದೆ ಎಂಬ ಉದ್ದೇಶದಿಂದ ಪ್ರಾಣಿಗಳ ಕೊಬ್ಬು ಬಳಕೆ ಮಾಡಿದ್ದಿರಬಹುದು. ಪ್ರಾಣಿಗಳ ಕೊಬ್ಬು ಆ ತುಪ್ಪದಲ್ಲಿ ಇರುವುದು ಈಗಾಗಲೇ ಸಾಬೀತು ಕೂಡ ಆಗಿದೆ. ಅದರ ಜೊತೆಯಲ್ಲಿ ಬಾತ್ರೂಮ್, ಟಾಯ್ಲೆಟ್ ಕ್ಲೀನರ್ಗಳಲ್ಲಿ ಬಳಸುವ ರಾಸಾಯನಿಕಗಳ ಬಳಕೆಯೂ ಆಗಿದೆ ಎಂದಿದ್ದಾರೆ.
ಇದನ್ನೂ ಓದಿ : ಹೆಗ್ಗುಂಜೆ – ಮಂದಾರ್ತಿಯಲ್ಲಿ ಹೊಸ ಸರ್ಕಾರಿ ಶಾಲೆ ಆರಂಭ : ಶಿಕ್ಷಣ ಸಚಿವರಿಗೆ ಶಾಸಕ ಕಿರಣ್ ಕೊಡ್ಗಿ ಮನವಿ
bathroom cleaning chemicals used to make Tirupati Tirumala laddu



