ಶಬರಿಮಲೆಯ ಚಿನ್ನ ಲೂಟಿ ಪ್ರಕರಣಕ್ಕೆ ಟ್ವಿಸ್ಟ್ : ಕೇರಳ ಹೈಕೋರ್ಟ್ಗೆ ಇಂದು ವರದಿ ಸಲ್ಲಿಕೆ

Sabarimala Gold Theft case : ತಿರುವನಂತಪುರ : ಭಾರತದ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ನಡೆದಿರುವ ಚಿನ್ನ ಲೂಟಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಪ್ರಕರಣ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ ಇಂದು ಹೈಕೋರ್ಟ್ ಗೆ ವರದಿ ಸಲ್ಲಿಸಿದ್ದು, ನಷ್ಟವಾದ ಚಿನ್ನದ ಅಂದಾಜು ಪ್ರಮಾಣ ಮತ್ತು ಹೆಚ್ಚಿನ ಪರೀಕ್ಷೆಯ ಅಗತ್ಯವನ್ನು ಹೈಕೋರ್ಟ್ಗೆ ತಿಳಿಸಲಿದೆ.
ಶಬರಿಮಲೆ ಚಿನ್ನದ ಲೂಟಿಗೆ ಸಂಬಂಧಿಸಿದಂತೆ ಮಾದರಿಗಳ ಪರೀಕ್ಷೆ ನಡೆಸಿದ್ದ ತಿರುವನಂತಪುರದ ವಿಎಸ್ಎಸ್ಸಿ ಲ್ಯಾಬ್ ವಿಜ್ಞಾನಿಗಳ ಜೊತೆಗೆ ಎಸ್ಐಟಿ ಅಧಿಕಾರಿಗಳು ಚರ್ಚೆ ನಡೆಸಿದ್ದರೂ ಕೂಡ ಬಾಗಿಲಿಗೆ ಅಳವಡಿಸಲಾಗಿರುವ ಚಿನ್ನದ ಪದರಗಳ ಅಸಲಿಯತ್ತು ಬಯಲಾಗಿಲ್ಲ.
Also Read : RCB IPL 2026 : ಐಪಿಎಲ್ 2026ಕ್ಕೆ ಸಜ್ಜಾಗುತ್ತಿದೆ ಆರ್ಸಿಬಿ ತಂಡ : ರಾಯಲ್ ಚಾಲೆಂಜರ್ಸ್ಗೆ ಹೊಸ ಮಾಲೀಕ ಯಾರು ?
ರಾಸಾಯನಿಕ ಕ್ರಿಯೆಯಿಂದ ಪದರಗಳ ರಾಸಾಯನಿಕ ರಚನೆಯಲ್ಲಿ ಕೆಲವೊಂದು ಬದಲಾವಣೆ ಆಗಿದೆ ಎಂದಷ್ಟೇ ವಿಜ್ಞಾನಿಗಳು ತಿಳಿಸಿದ್ದರು. ಇದರ ನಿಖರತೆಗಾಗಿ ಮುಂದಿನ ವಾರ ಮಾಸಿಕ ಪೂಜೆಗೆ ದೇವಾಲಯಕ್ಕೆ ತೆರಳಿ ಎಸ್ಐಟಿ ಅಧಿಕಾರಿಗಳು ಮತ್ತೊಮ್ಮೆ ಮಾದರಿಗಳನ್ನು ಸಂಗ್ರಹ ಮಾಡಲಿದ್ದಾರೆ.
ಶಬರಿಮಲೆಯ ಅಯ್ಯಪ್ಪನ ಸನ್ನಿಧಿಯಲ್ಲಿ ನಡೆದಿರುವ ಚಿನ್ನ ಲೂಟಿ ಪ್ರಕರಣ ಸದ್ಯ ಎಸ್ಐಟಿ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಶಬರಿಮಲೆಯ ಚಿನ್ನವನ್ನು ಹೇಗೆ ದುರುಪಯೋಗ ಪಡಿಸಿಕೊಂಡಿದ್ದಾರೆ.
Also Read : ವಿಶ್ವಕಪ್ ಫೈನಲ್ನಲ್ಲಿ 175 ರನ್ ಸಿಡಿಸಿದರೂ ವೈಭವ್ ಸೂರ್ಯವಂಶಿ ಸದ್ಯಕ್ಕೆ ಟೀಮ್ ಇಂಡಿಯಾಕ್ಕೆ ಸೇರುವಂತಿಲ್ಲ! ಯಾಕೆ ಗೊತ್ತೇ?
ವಿಶ್ವಾಸ ದ್ರೋಹ ಹಾಗೂ ಭ್ರಷ್ಟಾಚಾರ ತಡೆ ಕಾಯ್ಡೆಯನ್ನು ನ್ಯಾಯಾಲಯದಲ್ಲಿ ಸಾಬೀತು ಪಡಿಸುವುದು ತನಿಖಾ ತಂಡಕ್ಕೆ ಸವಾಲಾಗಿ ಪರಿಣಿಸಿದೆ.
Sabarimala Gold Theft case Big twist SIT Investigation



