ತಮಿಳುನಾಡಿನ ಎಐಡಿಎಂಕೆಯಿಂದ ಭರ್ಜರಿ ಘೋಷಣೆ : ಪ್ರತಿ ಕುಟುಂಬಕ್ಕೆ 10,000 ರೂಪಾಯಿ

ತಮಿಳುನಾಡು : ಗ್ಯಾರಂಟಿ ಯೋಜನೆಗಳಿಂದ ದೇಶದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಸರ್ಕಾರದ ಯೋಜನೆಗಳು ಮತ ಸೆಳೆಯುವ ಆಮೀಷವಾಗಬಾರದು ಎಂದು ಸುಪ್ರೀಂ ಕೋರ್ಟ್ ಕೆಲವು ದಿನಗಳ ಹಿಂದೆಯಷ್ಟೇ ತಮಿಳುನಾಡಿನ ಆಢಳಿತಾರೂಢ ಡಿಎಂಕೆ ಪಕ್ಷಕ್ಕೆ ಛಾಟಿ ಬೀಸಿತ್ತು. ಆದರೂ ತಲೆಕೆಡಿಸಿಕೊಳ್ಳದ ಬಿಜೆಪಿ ಮಿತ್ರಪಕ್ಷ ಅಣ್ಣಾಡಿಎಂಕೆ ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಬಹುದೊಡ್ಡ ಗ್ಯಾರಂಟಿ ಯೋಜನೆ ಘೋಷಿಸಿದೆ. ಪ್ರತಿ ಕುಟುಂಬಕ್ಕೆ ಬರೋಬ್ಬರಿ 10 ಸಾವಿರ ರೂಪಾಯಿಗಳನ್ನು ನೀಡುವುದಾಗಿ ಹೇಳಿದೆ.
ಎಐಎಂಡಿಕೆ ಪಕ್ಷದ ಹಿರಿಯ ನಾಯಕಿ, ಮಾಜಿ ಸಿಎಂ ಜಯಲಲಿತಾ ಜನ್ಮದಿನದಂದೇ ಎಐಡಿಎಂಕೆ ಈ ನಿರ್ಧಾರ ಘೋಷಿಸಿದೆ. ತಮಿಳುನಾಡಿನಲ್ಲಿ ಅಣ್ಣಾಡಿಎಂಕೆ ಅಧಿಕಾರಕ್ಕೆ ಬರುತ್ತಿದ್ದಂತೆಯೆ ಪ್ರತಿ ಕುಟುಂಬಕ್ಕೆ ಒಂದು ಸಲ 10,000 ರು. ಪರಿಹಾರ ನೀಡಲಾಗುವುದು. ಉದ್ಯೋಗಕ್ಕಾಗಿ ಕಾಯುತ್ತಿರುವ ಪದವಿ ಪಡೆದವರಿಗೆ ತಿಂಗಳಿಗೆ 2,000 ರು. ನೀಡಲಾಗುವುದು, ದ್ವಿತೀಯ ಪಿಯುಸಿವರೆಗೆ ಓದಿ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿರುವವರಿಗೆ 1,000 ರು. ಸ್ಟೈಫಂಡ್ ನೀಡಲಾಗುವುದು ಎಂದು ಹೇಳಿದೆ.

ಇದನ್ನೂ ಓದಿ: ಬಾಲ ಆಧಾರ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್ : 5 ಮತ್ತು 15 ವರ್ಷ ತುಂಬಿದ ಕೂಡಲೇ ಮರೆಯದೇ ಈ ಕೆಲಸ ಮಾಡಿ !

ಮೀನುಗಾರಿಕೆ ನಿಷೇಧದ ಸಮಯದಲ್ಲಿ ಮೀನುಗಾರರ ಕುಟುಂಬಕ್ಕೆ 12 ಸಾವಿರ ರೂಪಾಯಿ, 1 ಸಾವಿರ ರೂಪಾಯಿ ಪೊಂಗಲ್​ ಪ್ರೋತ್ಸಾಹ ಧನ, ಕೈಮಗ್ಗ ನೇಕಾರರಿಗೆ 450 ಯುನಿಟ್​ , ಪವರ್​ ಲೂಮ್​ ನೇಕಾರರಿಗೆ 1,400 ಯುನಿಟ್​ ಉಚಿತ ವಿದ್ಯುತ್​, ಫುಟ್​ಪಾತ್​ ವ್ಯಾಪಾರಿಗಳ ಸಾಲಮನ್ನಾ ಸೇರಿದಂತೆ ಅನೇಕ ಫ್ರೀ ಭಾಗ್ಯಗಳನ್ನು ಘೋಷಣೆ ಮಾಡಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories