ಕಾಮ ದಹನದ ನಂತರ ಈ ಒಂದು ವಸ್ತುವನ್ನು ಮನೆಗೆ ತನ್ನಿ: ನಿಮ್ಮ ಆರ್ಥಿಕ ಸಂಕಷ್ಟಗಳೆಲ್ಲಾ ದೂರವಾಗುತ್ತವೆ
Holi 2026: ಕೆಟ್ಟದರ ಮೇಲೆ ಒಳ್ಳೆಯದರ ವಿಜಯದ ಸಂಕೇತ ಹೋಳಿ. ಜೀವನದಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುವ ಹಬ್ಬ ಇದು. ಕೆಟ್ಟದರ ಕಪ್ಪು ನೆರಳು ಹೋಗಿ ಎಲ್ಲಡೆ ಬಣ್ಣಗಳು ತುಂಬುವ ರಂಗಿನ ಹಬ್ಬ ಹೋಳಿ.
ಬಣ್ಣದೋಕುಳಿಯಲ್ಲಿ ಮಿಂದೇಳುವ ಹಿಂದಿನ ದಿನ ಕಾಮ ದಹನ ಅಥವಾ ಹೋಳಿಕಾ ದಹನ ಮಾಡಲಾಗುತ್ತದೆ. ಇದು ಜೀವನದಲ್ಲಿ ತುಂಬಿರುವ ಕೆಟ್ಟದ್ದನ್ನು ಸುಟ್ಟು ಹಾಕುವುದರ ಸಂಕೇತ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಾಮ ದಹನ ಅಥವಾ ಹೋಳಿಕಾ ದಹನಕ್ಕೆ ವಿಶೇಷ ಮಹತ್ವವಿದೆ. ಇದು ನಕಾರಾತ್ಮಕತೆಯನ್ನು ತೊಡೆದುಹಾಕಿ, ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕಾಮ ದಹನದಿಂದ ಸಿಗುವ ಭಸ್ಮಕ್ಕೆ ಅಧ್ಬುತ ಶಕ್ತಿಯಿದೆ ಎಂಬ ನಂಬಿಕೆಯಿದೆ. ಅದು ಆರ್ಥಿಕ ತೊಂದರೆಗಳನ್ನು ದೂರಮಾಡಿ ಸುಖ, ಸಮೃದ್ಧಿ ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
ಪೌರಾಣಿಕ ಮಹತ್ವ ಏನು?
ಹೋಳಿಯ ಭಸ್ಮವನ್ನು ಬಹಳ ಪವಿತ್ರ ಎಂದು ಪರಿಗಣಿಸಲಾಗಿದೆ. ಪುರಾಣಗಳ ಪ್ರಕಾರ ರಾಕ್ಷಸ ರಾಜ ಹಿರಣ್ಯಕಶಿಪುವಿನ ದುಷ್ಟಶಕ್ತಿಯನ್ನು ಬೆಂಕಿಯಲ್ಲಿ ಸುಟ್ಟು ಬೂದಿ ಮಾಡಿದಂತೆ, ನಮ್ಮ ಜೀವನದಲ್ಲಿರುವ ಅಡೆತಡೆಗಳನ್ನು ನಿವಾರಿಸುತ್ತದೆ.
ಆದ್ದರಿಂದ ಭಸ್ಮವನ್ನು ಮನೆಗೆ ತರುವುದರಿಂದ ಮನೆಯೊಳಗಿರುವ ದುಷ್ಟಶಕ್ತಿಯನ್ನು ದೂರಮಾಡಬಹುದು. ವ್ಯಾಪಾರ ವ್ಯವಹಾರ, ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ.
ಇದನ್ನೂ ಓದಿ: ಬ್ಲಡ್ ಮೂನ್’ ಚಂದ್ರಗ್ರಹಣ ಯಾವ ರಾಶಿಗಳ ಮೇಲೆ ಪ್ರಭಾವ ?
ಹೋಳಿಯ ಭಸ್ಮವನ್ನು ಬಳಸುವುದು ಹೇಗೆ?
- ಹೋಳಿಯ ಭಸ್ಮವನ್ನು ಮನೆಗೆ ತನ್ನಿ. ಅದನ್ನು ಕೆಂಪು ರೇಷ್ಮೆ ಬಟ್ಟೆಯಲ್ಲಿ ಇಟ್ಟು, ಅದರೊಳಗೆ ಬೆಳ್ಳಿ ನಾಣ್ಯ ಇರಿಸಿ. ಅದನ್ನು ನಿಮ್ಮ ಹಣದ ತಿಜೋರಿಯಲ್ಲಿಡಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ದೊರಕುತ್ತದೆ. ಸಂಪತ್ತು ವೃದ್ದಿಯಾಗುತ್ತದೆ. ನಿಮ್ಮ ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ.
- ಮನೆಯಲ್ಲಿ ಪದೇ ಪದೇ ಜಗಳ, ಘರ್ಷಣೆಗಳು ನಡೆಯುತ್ತಿದ್ದರೆ ಭಸ್ಮವನ್ನು ನೀರಿನಲ್ಲಿ ಹಾಕಿ. ಅದನ್ನು ಮನೆಯ ಸುತ್ತ ಸಿಂಪಡಿಸಿ. ಇದು ನಕಾರಾತ್ಮಕ ಶಕ್ತಿ ದೂರ ಮಾಡಿ, ಮನೆಯ ಸದಸ್ಯರಲ್ಲಿ ಪರಸ್ಪರ ಪ್ರೀತಿ ಮೂಡುವಂತೆ ಮಾಡುತ್ತದೆ.
- ದುಷ್ಟ ಕಣ್ಣುಗಳು ನಿಮ್ಮ ಮೇಲೆ ಇದೆ ಎಂದಾದರೆ ಭಸ್ಮವನ್ನು ಹಣೆಯ ಮೇಲೆ ಹಚ್ಚಿಕೊಳ್ಳಿ. ಆಗ ದುಷ್ಟ ಕಣ್ಣುಗಳಿಂದ ರಕ್ಷಣೆ ಸಿಗುತ್ತದೆ. ನಿಮ್ಮ ಮನಸ್ಸಿನ ಶಾಂತಿ ಹೆಚ್ಚಿ, ಜೀವನದಲ್ಲಿ ಪ್ರಗತಿ ಕಾಣಿಸುತ್ತದೆ.



