ಓಲಾದಿಂದ ಹೋಳಿ ಮಹೋತ್ಸವ ಆಚರಣೆ: ಹೀರೋ ಸೂಪರ್‌ ಸ್ಪ್ಲೆಂಡರ್‌ಗಿಂತ ಅಗ್ಗವಾದ ರೋಡ್‌ಸ್ಟರ್‌ X

ಓಲಾ ಇಲೆಕ್ಟ್ರಿಕ್‌ ತನ್ನ ಜನಪ್ರಿಯ ಸ್ಕೂಟರ್‌ ಮತ್ತು ಬೈಕ್‌ಗಳ ದರ ಕಡಿಮೆ ಮಾಡುವುದರ ಮೂಲಕ ಬಣ್ಣದ ಹಬ್ಬವನ್ನು ಇನ್ನಷ್ಟು ಕಲರ್‌ಫುಲ್‌ ಆಗಿಸಿದೆ.

Ola electric holi offer: ಓಲಾ ಇಲೆಕ್ಟ್ರಿಕ್‌ ತನ್ನ ವಾಹನಗಳ ಬೆಲೆ ಕಡಿಮೆ ಮಾಡುವುದರ ಮೂಲಕ ಹೋಳಿ ಹಬ್ಬ ಆಚರಿಸುತ್ತಿದೆ. ಹೌದು, ಓಲಾ ಇಲೆಕ್ಟ್ರಿಕ್‌ ತನ್ನ ಜನಪ್ರಿಯ ಸ್ಕೂಟರ್‌ ಮತ್ತು ಬೈಕ್‌ಗಳ ದರ ಕಡಿಮೆ ಮಾಡುವುದರ ಮೂಲಕ ಬಣ್ಣದ ಹಬ್ಬವನ್ನು ಇನ್ನಷ್ಟು ಕಲರ್‌ಫುಲ್‌ ಆಗಿಸಿದೆ. ಈಗ ಓಲಾದ ದ್ವಿಚಕ್ರ ವಾಹನಗಳು 79,999 ರೂ. (ಎಕ್ಸ್‌ ಶೋ ರೂಂ. ಬೆಲೆ) ಆರಂಭವಾಗುತ್ತದೆ. ಇದರಿಂದಾಗಿ ಕಡಿಮೆ ಬೆಲೆಯ ಪ್ರಯಾಣಿಕ ಮೋಟಾರ್‌ಸೈಕಲ್‌ ಹುಡುಕುತ್ತಿರುವ ಗ್ರಾಹಕರಿಗೆ ಸಂತೋಷದ ವಿಷಯವಾಗಿದೆ. ಕೈಗಟಕುವ ಬೆಲೆಯು ಮಲ್ಟಿಪಲ್‌ ICE ಮಾದರಿಗಳನ್ನು ಒಳಗೊಂಡಿದೆ.

ಓಲಾ ರೋಡ್‌ಸ್ಟರ್ X ವಾಹನ ಎರಡು ಬಗೆಯ ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯೊಂದಿಗೆ ಬರುತ್ತದೆ. ಒಂದು 3.5 kWh ಬ್ಯಾಟರಿ ಇನ್ನೊಂದು 4.5 kWh ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರುತ್ತದೆ. ಇದರ ಬೆಲೆ ಕ್ರಮವಾಗಿ 92,999 ಹಾಗೂ 99,999 ರೂ.ಗಳು. ಇದರಲ್ಲೇ ಸ್ವಲ್ಪ ದುಬಾರಿಯಾದ ರೋಡ್‌ಸ್ಟರ್‌ X+ ಮಾದರಿಯಲ್ಲೂ ಎರಡು ಬ್ಯಾಟರಿ ಪ್ಯಾಕ್‌ಗಳಿವೆ. ಇವುಗಳ ಬೆಲೆ ಕ್ರಮವಾಗಿ 1.10 ಲಕ್ಷ ರೂ. (ಎಕ್ಸ್‌ ಶೋ ರೂಂ) ಮತ್ತು 1.89 ಲಕ್ಷ ರೂ. (ಎಕ್ಸ್‌ ಶೋ ರೂಂ) ಆಗಿದೆ.

ಇದನ್ನೂ ಓದಿ: ಡ್ಯುಯಲ್ ಸಿಎನ್‌ಜಿ ಸಿಲಿಂಡರ್‌, 28 ಕಿ.ಮೀ.ವರೆಗೆ ಮೈಲೇಜ್‌ ನೀಡುವ ಟಾಪ್‌ 6 ಸಿಎನ್‌ಜಿ ಕಾರುಗಳು

ಇಷ್ಟೇ ಅಲ್ಲದೇ ಓಲಾ ಇಲೆಕ್ಟ್ರಿಕ್ ಆಚರಿಸುತ್ತಿರುವ ಸೀಮಿತ ಅವಧಿಯ ಹೋಳಿ ಮಹೋತ್ಸವವು ದೇಶದಲ್ಲಿ ಇಲೆಕ್ಟ್ರಿಕ್‌ ಮೋಟಾರ್‌ ಸೈಕಲ್‌ಗಳ ಬಳಕೆಯನ್ನು ಉತ್ತೇಜಿಸಲು ಮತ್ತು ಪ್ರಚಾರದ ಭಾಗವಾಗಿದೆ. ಹೇಗೆಂದರೆ ಬ್ರ್ಯಾಂಡ್‌ ಮುಹೂರ್ತ ಮಹೋತ್ಸವ ಸಮಯದಲ್ಲಿ ಓಲಾ ಇನ್‌ಸೈಡರ್ಸ್‌ ಸಮುದಾಯವು ಮಾಲೀಕರಿಗೆ 5,000 ರೂ. ಗಳ ಹೆಚ್ಚುವರಿ ಪ್ರಯೋಜನ ನೀಡುತ್ತಿದೆ. S1 Pro ಮತ್ತು S1 Pro+ ಮಾದರಿಗಳ ಮೇಲೆ 8 ವರ್ಷಗಳ ಎಕ್ಸ್‌ಟೆಂಡೆಡ್‌ ವ್ಯಾರಂಟಿಯನ್ನು ನೀಡುತ್ತಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories