ಅಡುಗೆ ಅನಿಲ ಪೂರೈಕೆಯಲ್ಲಿ ವಿಳಂಬವಾಗುತ್ತಿದೆಯೇ ? ಈ ಸಹಾಯವಾಣಿಗೆ ದೂರು ಸಲ್ಲಿಸಿ

ರಾಜ್ಯ ಆಹಾರ , ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವಾಲಯ ರಾಜ್ಯದಲ್ಲಿ ಸಿಲಿಂಡರ್​ಗಳ ಪೂರೈಕೆಯಲ್ಲಿ ಯಾವುದೇ ಅಭಾವವಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಬೆಂಗಳೂರು : ಅಮೆರಿಕ, ಇಸ್ರೇಲ್​ ಹಾಗೂ ಇರಾನ್​ ನಡುವಿನ ಯುದ್ಧದಿಂದಾಗಿ ಇಂಧನ ಅನಿಲಗಳಿಗೆ ಭಾರತದಲ್ಲಿ ಸಂಕಷ್ಟ ಎದುರಾಗಿದೆ. ಹೋರ್ಮುಜ್​ ಜಲಸಂಧಿಯಲ್ಲಿ ಇಂಧನ ಹಡಗುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಸಂಕಷ್ಟ ಎದುರಾಗಿದೆ.

ಈಗಾಗಲೇ ಭಾರತದಲ್ಲಿ ಅಡುಗೆ ಅನಿಲ ದರ ಕೂಡ ಏರಿಕೆಯಾಗಿದೆ. ಅಡುಗೆ ಅನಿಲಗಳ ದರ ಏರಿಕೆಯ ಜೊತೆಯಲ್ಲಿ ಸಿಲಿಂಡರ್​ಗಳಿಗೆ ಅಭಾವ ಕೂಡ ಕಂಡು ಬರುತ್ತಿದ್ದು ಇದೇ ರೀತಿ ಮುಂದುವರಿದರೆ ಒಂದೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ಬಂದರೆ ಹೇಗಪ್ಪ ಎಂಬ ಚಿಂತೆಯಂತೂ ಶುರುವಾಗಿದೆ.

ಆದರೆ ರಾಜ್ಯ ಆಹಾರ , ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವಾಲಯ ರಾಜ್ಯದಲ್ಲಿ ಸಿಲಿಂಡರ್​ಗಳ ಪೂರೈಕೆಯಲ್ಲಿ ಯಾವುದೇ ಅಭಾವವಿಲ್ಲ ಎಂದು ಸ್ಪಷ್ಟನೆ ನೀಡಿದೆ. ಆದರೆ ಮುಂದೆ ಅಭಾವ ಉಂಟಾಗಬಹುದು ಎಂದು ಸುಮ್ಮನೇ ಗ್ಯಾಸ್​ ಸಿಲಿಂಡರ್​ಗಳನ್ನು ಬುಕ್​ ಮಾಡಿಕೊಂಡು ಕೃತಕ ಅಭಾವ ಸೃಷ್ಠಿಯಾಗುವಂತೆ ಮಾಡಬೇಡಿ ಎಂದು ಜನತೆಯಲ್ಲಿ ಮನವಿ ಮಾಡಿದೆ.

Also Read : ಕದ್ರಿ ಶ್ರೀ ಮಂಜುನಾಥ ಸನ್ನಿಧಿಗೂ ತಟ್ಟಿದ ಗ್ಯಾಸ್​ ಟ್ರಬಲ್​ : ಅಡುಗೆ ಒಲೆಯಲ್ಲಿ ಭೋಜನ ವ್ಯವಸ್ಥೆ

ಇತ್ತ ಕೇಂದ್ರ ಸರ್ಕಾರವು ಒಂದು ಸಿಲಿಂಡರ್​ನಿಂದ ಮತ್ತೊಂದು ಸಿಲಿಂಡರ್​ ನಡುವಿನ ಬುಕ್ಕಿಂಗ್​ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಏರಿಕೆ ಮಾಡಿದೆ. ನೀವು ಎಲ್​ಪಿಜಿ ಸಿಲಿಂಡರ್​ಗಳನ್ನು ಬುಕ್​ ಮಾಡಿದ ಬಳಿಕ ವಿತರಣೆದಾರರು ನಿಮ್ಮಿಂದ ಹೆಚ್ಚಿನ ಹಣ ವಸೂಲಿಗೆ ಮುಂದಾದರೆ, ಅಥವಾ ಗ್ಯಾಸ್​ ವಿತರಣೆಯಲ್ಲಿ ವಿಳಂಬ ಮಾಡಿದರೆ ದೂರು ಸಲ್ಲಿಸಲು ಸಹಾಯವಾಣಿಯನ್ನೂ ಆರಂಭಿಸಲಾಗಿದೆ.

ಅಡುಗೆ ಅನಿಲ ತುರ್ತು ಸಹಾಯವಾಣಿ ಸಂಖ್ಯೆಗಳು ಈ ಕೆಳಗಿನಂತಿವೆ :

ಇಂಡೇನ್​ ಗ್ಯಾಸ್​ :

  • ಟೋಲ್-ಫ್ರೀ ಸಂಖ್ಯೆ: 1800-2333-555
  • ತುರ್ತು ಸಹಾಯವಾಣಿ (ಗ್ಯಾಸ್ ಸೋರಿಕೆ): 1906 (24×7)

ಭಾರತ್ ಗ್ಯಾಸ್ ಸಹಾಯವಾಣಿ

ಗ್ರಾಹಕ ಸೇವಾ ಸ್ಮಾರ್ಟ್‌ಲೈನ್ ಹಾಗೂ ತುರ್ತು ಸಹಾಯವಾಣಿ: 1800 22 4344

ಹೆಚ್.ಪಿ. ಗ್ಯಾಸ್ ಸಹಾಯವಾಣಿ

  • ಸಹಾಯವಾಣಿ ಸಂಖ್ಯೆ: 1800 233 3555
  • ಹಆನ್‌ಲೈನ್ ಪೋರ್ಟಲ್ ಮೂಲಕವೂ ದೂರು ಸಲ್ಲಿಕೆ ಮಾಡಬಹುದು.
Also Read : ಶಾಲಾ ಬಿಸಿಯೂಟಕ್ಕೆ ಯಾವುದೇ ತಡೆಯಿಲ್ಲದೆ ಎಲ್‌ಪಿಜಿ ಪೂರೈಕೆ: ಜಿಲ್ಲಾಧಿಕಾರಿಗಳಿಗೆ ಸರ್ಕಾರದಿಂದ ಮಹತ್ವದ ಸೂಚನೆ

ಉಜ್ವಲ ಯೋಜನೆ ಬಳಕೆದಾರರಿಗೆ ಸಹಾಯವಾಣಿ

  •  ಟೋಲ್-ಫ್ರೀ ಸಹಾಯವಾಣಿ: 1800-233-3555
  •  ಉಜ್ವಲ ಸಹಾಯವಾಣಿ: 1800-266-6696

ವಾಣಿಜ್ಯ ಸಿಲಿಂಡರ್​ಗಳನ್ನು ಸದ್ಯ ಆದ್ಯತೆಯ ಮೇರೆಗೆ ಶಿಕ್ಷಣ ಸಂಸ್ಥೆಗಳು, ಕಾರಾಗೃಹ, ಆಸ್ಪತ್ರೆಗಳಿಗೆ ನೀಡಲಾಗುತ್ತಿದೆ. ಆದರೆ ಗೃಹ ಬಳಕೆಯ ಸಿಲಿಂಡರ್​ಗಳಲ್ಲಿ ಈವರೆಗೆ ಯಾವುದೇ ಅಭಾವ ಕಂಡುಬಂದಿಲ್ಲ. ಹೀಗಾಗಿ ಜನತೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸರ್ಕಾರ ಮಾಹಿತಿ ನೀಡಿದೆ.

karnataka LPG Gas delivery delay complaint helpline

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories