ಕೋಟ: ಸಿಸಿ ಕ್ಯಾಮೆರಾ ಕಿರಿಕ್; ವೃದ್ಧೆಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ, 7 ಮಂದಿಯ ವಿರುದ್ಧ ಎಫ್‌ಐಆರ್

ಸಾಸ್ತಾನ ಸಮೀಪದ ಪಾಂಡೇಶ್ವರ ಗ್ರಾಮದ ನಿವಾಸಿ ರಾಧು ಪೂಜಾರ್ತಿ (65 ವರ್ಷ) ಎಂಬುವವರ ಮನೆಯ ಎದುರು ವಾಸವಾಗಿರುವ ಪ್ರೇಮ ಪೂಜಾರಿ ಎಂಬುವವರು, ತಮ್ಮ ಸಿಸಿ ಕ್ಯಾಮೆರಾವನ್ನು ರಾಧು ಪೂಜಾರ್ತಿ ಅವರ ಮನೆಯ ಕಡೆಗೆ ಮುಖಮಾಡಿ ಅಳವಡಿಸಿದ್ದರು.

ಕೋಟ : ಸಿಸಿ ಕ್ಯಾಮೆರಾ ಅಳವಡಿಕೆಯ ವಿಚಾರದಲ್ಲಿ ಆರಂಭವಾದ ಸಣ್ಣ ಕಿರಿಕ್, ಇದೀಗ ದೊಡ್ಡ ಜಗಳಕ್ಕೆ ಕಾರಣವಾಗಿ ವೃದ್ಧೆಯೊಬ್ಬರ ಮೇಲೆ ಹಲ್ಲೆ ನಡೆಸುವ ಹಂತಕ್ಕೆ ತಲುಪಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ ಸಮೀಪದ ಪಾಂಡೇಶ್ವರ ಗ್ರಾಮದ ನಿವಾಸಿ ರಾಧು ಪೂಜಾರ್ತಿ (65 ವರ್ಷ) ಎಂಬುವವರ ಮನೆಯ ಎದುರು ವಾಸವಾಗಿರುವ ಪ್ರೇಮ ಪೂಜಾರಿ ಎಂಬುವವರು, ತಮ್ಮ ಸಿಸಿ ಕ್ಯಾಮೆರಾವನ್ನು ರಾಧು ಪೂಜಾರ್ತಿ ಅವರ ಮನೆಯ ಕಡೆಗೆ ಮುಖಮಾಡಿ ಅಳವಡಿಸಿದ್ದರು. ಇದರಿಂದ ತಮ್ಮ ಖಾಸಗಿತನಕ್ಕೆ ತೊಂದರೆಯಾಗುತ್ತಿದೆ ಎಂದು ರಾಧು ಅವರು ಮಾರ್ಚ್ 9ರಂದು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನಿಂದ ಆರೋಪಿತರು ಕೆರಳಿದ್ದರು ಎನ್ನಲಾಗಿದೆ.

ದೂರು ನೀಡಿದ ದ್ವೇಷದಿಂದಾಗಿ, ಮಾರ್ಚ್ 13ರ ಬೆಳಿಗ್ಗೆ ಸುಮಾರು 8:25 ಗಂಟೆಗೆ ರಾಧು ಪೂಜಾರ್ತಿ ಅವರು ತಮ್ಮ ಮನೆಯ ಬಳಿ ಇದ್ದಾಗ, ಆರೋಪಿಗಳಾದ ಪ್ರೇಮ ಪೂಜಾರಿ, ಪ್ರವೀಣ್ ಟಿ ಪೂಜಾರಿ, ಯಶ್ವಿತಾ, ಪೂರ್ಣಿಮಾ, ಶಾಂತ, ಪ್ರಮೀಳಾ ಮತ್ತು ತಮ್ಮಯ್ಯ ಎಂಬುವವರು ಏಕಾಏಕಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ್ದಾರೆ.

Also Read : ಉಡುಪಿ : ಗ್ಯಾಸ್​ ಅಭಾವ.. ಸಂಕಷ್ಟದಲ್ಲಿ ಚಿನ್ನಾಭರಣ ತಯಾರಕರು..!

ವೃದ್ಧೆಯನ್ನು ಸುತ್ತುವರಿದ ಆರೋಪಿಗಳು, ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ, ಕೈಗಳಿಂದ ಹೊಡೆದು ದೈಹಿಕವಾಗಿ ಹಿಂಸಿಸಿದ್ದಾರೆ. ಅಷ್ಟೇ ಅಲ್ಲದೆ, “ಮನೆಯ ಬಳಿ ಎಲ್ಲಿಯೂ ನಡೆದಾಡಲು ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವೃದ್ಧೆಯ ಕಿರುಚಾಟ ಕೇಳಿ ಅವರ ಮಗ ಮತ್ತು ಸಂಬಂಧಿಕರು ಸ್ಥಳಕ್ಕೆ ಧಾವಿಸಿ ಅವರನ್ನು ರಕ್ಷಿಸಿದ್ದಾರೆ. ತಕ್ಷಣ ಅವರನ್ನು ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಈ ಇಡೀ ಕೃತ್ಯಕ್ಕೆ ಹರೀಶ್ ಎಂಬುವವರ ಕುಮ್ಮಕ್ಕು ಕಾರಣ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

Also Read : ಕುಂದಾಪುರ: ಅತಿಕ್ರಮಣಕ್ಕೆ ಬಿತ್ತು ಜೆಸಿಬಿ ಪೆಟ್ಟು; 2 ವರ್ಷದ ಬಳಿಕ ಕೃಷಿಕರಿಗೆ ಮುಕ್ತಿ

ಸಂತ್ರಸ್ತ ರಾಧು ಪೂಜಾರ್ತಿ ನೀಡಿದ ದೂರಿನ ಮೇರೆಗೆ ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ವಿಚಾರಣೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.

kota police register case against seven for assaulting elderly woman over cctv dispute sasthana Pandeshwara

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories