Sai Pallavi Marriage : ಶೀಘ್ರದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಾ ನಟಿ ಸಾಯಿಪಲ್ಲವಿ..?
ನಿತೀಶ್ ತಿವಾರಿ ನಿರ್ದೇಶನದ ಬಿಗ್ ಬಜೆಟ್ ಮೂವಿ ರಾಮಾಯಣದಲ್ಲಿಯೂ ನಟಿ ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನ ಪಾತ್ರ ನಿರ್ವಹಿಸಿದರೆ ನಟ ಯಶ್ ರಾವಣ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

Sai Pallavi Marriage: ತಮ್ಮ ಸರಳತೆಯ ಮೂಲಕವೇ ಎಲ್ಲರ ಮನಗೆಲ್ಲುವ ದಕ್ಷಿಣ ಭಾರತದ ಹೆಸರಾಂತ ನಟಿ ಸಾಯಿ ಪಲ್ಲವಿ ಸದ್ಯ ತಮ್ಮ ಮದುವೆಯ ವಿಚಾರದಿಂದ ಸುದ್ದಿಯಲ್ಲಿದ್ದಾರೆ. ಈಗಾಗಲೇ ನಟಿ ಸಾಯಿ ಪಲ್ಲವಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿ ಎಲ್ಲೆಡೆ ಹರಿದಾಡಿದ್ದು ಶೀಘ್ರದಲ್ಲಿಯೇ ವೈವಾಹಿಕ ಜೀವನಕ್ಕೂ ಕಾಲಿಡಲಿದ್ದಾರೆ ಎನ್ನಲಾಗಿದೆ.
ಯಾರಪ್ಪ ಸಾಯಿ ಪಲ್ಲವಿ ಅವರ ಮನಗೆದ್ದ ಚೋರ ಎಂದು ಅಭಿಮಾನಿಗಳು ಯೋಚಿಸುತ್ತಿರುವಾಗಲೇ ಈ ಎಲ್ಲಾ ವದಂತಿಗಳಿಗೆ ಸ್ವತಃ ನಟಿ ಸಾಯಿ ಪಲ್ಲವಿ ಸ್ಪಷ್ಟನೆ ನೀಡಿದ್ದಾರೆ.
ಸಿನಿಮಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಮದುವೆ ವಿಚಾರವಾಗಿ ಪ್ರರ್ತಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ ಸಾಯಿ ಪಲ್ಲವಿ, ಸದ್ಯ ನಾನು ಮದುವೆಯಾಗುವ ಯೋಚನೆಯಲ್ಲಿಯೇ ಇಲ್ಲ.
ಒಬ್ಬಂಟಿ ಜೀವನವೇ ನನಗೆ ಇಷ್ಟ ಎನಿಸುತ್ತಿದೆ, ಸದ್ಯ ನನ್ನ ಗಮನ ಏನಿದ್ದರೂ ಸಿನಿಮಾಗಳ ಮೇಲೆ. ಉತ್ತಮ ಸಿನಿಮಾಗಳನ್ನು ನನ್ನ ಅಭಿಮಾನಿಗಳಿಗೆ ನೀಡಲು ನಾನು ಬದ್ಧನಾಗಿರುವೆ. ನಾನೀಗ ನಟಿಯಾಗಿ ನನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದೇನೆ, ಮದುವೆ ಬಗ್ಗೆ ಯೋಚನೆಯನ್ನೂ ಮಾಡಿಲ್ಲ ಎಂದು ಹೇಳುವ ಮೂಲಕ ಎಲ್ಲಾ ವದಂತಿಗಳಿಗೆ ನಟಿ ಸಾಯಿ ಪಲ್ಲವಿ ತೆರೆ ಎಳೆದಿದ್ದಾರೆ.
Also Read : ರೇಣುಕಸ್ವಾಮಿ ಕೊಲೆ ಪ್ರಕರಣ : ಆರೋಪಿ ವಕೀಲರಿಗೆ ದಂಡ ವಿಧಿಸಿದ ನ್ಯಾಯಾಲಯ
ದಕ್ಷಿಣ ಭಾರತದಲ್ಲಿ ಅಗಣಿತ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಸಾಯಿ ಪಲ್ಲವಿ ತಮ್ಮ ಸರಳತೆಯ ಮೂಲಕವೇ ಸದಾ ಸುದ್ದಿಯಲ್ಲಿರ್ತಾರೆ. ಸದ್ಯ ಬಾಲಿವುಡ್ ನಲ್ಲಿಯೂ ಛಾಪು ಮೂಡಿಸಲು ಮುಂದಾಗಿರುವ ಈ ಸಿಂಪಲ್ ಬ್ಯೂಟಿ ಅಮೀರ್ ಖಾನ್ ಅವರ ಪುತ್ರ ಜುನೈದ್ ಖಾನ್ ಅವರೊಂದಿಗೆ ಏಕ್ ದಿನ್ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ.
ಇದರ ಜೊತೆಯಲ್ಲಿ ನಿತೀಶ್ ತಿವಾರಿ ನಿರ್ದೇಶನದ ಬಿಗ್ ಬಜೆಟ್ ಮೂವಿ ರಾಮಾಯಣದಲ್ಲಿಯೂ ನಟಿ ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನ ಪಾತ್ರ ನಿರ್ವಹಿಸಿದರೆ ನಟ ಯಶ್ ರಾವಣ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
Also Read : ಪುತ್ತೂರಿನ ಜಿ.ಎಲ್ ಮಾಲ್ನಲ್ಲಿ ದಿ ಕೇರಳ ಸ್ಟೋರಿ 2 ಉಚಿತ ಪ್ರದರ್ಶನ : ಅನ್ಯಧರ್ಮೀಯರಿಂದ ಮಾಲ್ಗೆ ಬಹಿಷ್ಕಾರ
ಈ ಸಿನಿಮಾದ ಬಳಿಕ ಮಣಿರತ್ನಂ ಅವರ ಮುಂದಿನ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಸಾಯಿ ಪಲ್ಲವಿ, ಮದುವೆಯ ಯೋಚನೆಯನ್ನೂ ಮಾಡ್ತಿಲ್ಲ ಎನ್ನಲಾಗಿದೆ.
Sai Pallavi Marriage Rumors Who is the Lucky Groom



