ನಟ ರಕ್ಷಿತ್​ ಶೆಟ್ಟಿಗೆ ದೆಹಲಿ ಹೈಕೋರ್ಟ್​ನಿಂದ ಬಿಗ್​ ಶಾಕ್​ : ಜೈಲಾಪಾಲಾಗುವುದರಿಂದ ಜಸ್ಟ್​ ಮಿಸ್​

ಬ್ಯಾಚುಲರ್​ ಪಾರ್ಟಿ ಸಿನಿಮಾದಲ್ಲಿ ಅನುಮತಿ ಪಡೆಯದೇ ಎರಡು ಹಾಡುಗಳನ್ನು ಬಳಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟೂ 25 ಲಕ್ಷ ರೂಪಾಯಿಗಳ ದಂಡವನ್ನು ದೆಹಲಿ ಹೈಕೋರ್ಟ್ ವಿಧಿಸಿದೆ

ಕನ್ನಡ ಚಿತ್ರರಂಗದ ಹೆಸರಾಂತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಕ್ಷಿತ್​ ಶೆಟ್ಟಿಗೆ (Rakshith Shetty) ಹೊಸ ಸಂಕಷ್ಟ ಎದುರಾಗಿದೆ. ದೆಹಲಿ ಹೈಕೋರ್ಟ್ ‘ಪರಂವಾ ಸ್ಟುಡಿಯೋಸ್​’ಗೆ ಭಾರೀ ಮೊತ್ತದ ದಂಡ ವಿಧಿಸಿದೆ. ಬ್ಯಾಚುಲರ್​ ಪಾರ್ಟಿ ಸಿನಿಮಾದಲ್ಲಿ ಅನುಮತಿ ಪಡೆಯದೇ ಎರಡು ಹಾಡುಗಳನ್ನು ಬಳಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟೂ 25 ಲಕ್ಷ ರೂಪಾಯಿಗಳ ದಂಡವನ್ನು ದೆಹಲಿ ಹೈಕೋರ್ಟ್ ವಿಧಿಸಿದೆ.

ಪರಂವಾ ಸ್ಟುಡಿಯೋಸ್​ನಿಂದ ನಿರ್ಮಾಣಗೊಂಡ ಬ್ಯಾಚುಲರ್​ ಪಾರ್ಟಿ ಸಿನಿಮಾದಲ್ಲಿ ನಮ್ಮ ಮಾಲೀಕತ್ವದ ಎರಡು ಹಾಡುಗಳನ್ನು ಬಳಸಲಾಗಿದೆ ಎಂದು ಖ್ಯಾತ ಮ್ಯೂಸಿಕ್​ ಕಂಪನಿ ಎಂಆರ್​ಟಿ ಮ್ಯೂಸಿಕ್​ ದೂರು ದಾಖಲಿಸಿತ್ತು. ಈ ಸಿನಿಮಾಗಳಲ್ಲಿ ಅನುಮತಿ ಪಡೆಯದೇ ನಮ್ಮ ಮಾಲೀಕತ್ವದ ನ್ಯಾಯ ಎಲ್ಲಿದೆ ಹಾಗೂ ಒಮ್ಮೆ ನಿನ್ನನ್ನು ಎಂಬ ಎರಡು ಹಾಡುಗಳನ್ನು ಬಳಕೆ ಮಾಡಲಾಗಿದೆ ಎಂದು ಎಂಆರ್​ಟಿ ಸಂಸ್ಥೆ ವಾದಿಸಿತ್ತು. ಆದರೆ ಈ ಎರಡೂ ಹಾಡುಗಳನ್ನು ಅತ್ಯಂತ ಕಡಿಮೆ ಅವಧಿಗೆ ಬಳಕೆ ಮಾಡಿದ್ದೇವೆ ಎಂಬುದು ರಕ್ಷಿತ್​ ಶೆಟ್ಟಿ ತಂಡದ ವಾದವಾಗಿತ್ತು. ನ್ಯಾಯ ಎಲ್ಲಿದೆ ಹಾಡನ್ನು 7 ಸೆಕೆಂಡುಗಳ ಕಾಲ ಹಾಗೂ ಒಮ್ಮೆ ನಿನ್ನನ್ನು ಹಾಡನ್ನು ಕೇವಲ 31 ಸೆಕೆಂಡುಗಳ ಕಾಲ ಬಳಕೆ ಮಾಡಿದ್ದಾಗಿ ಸಮರ್ಥನೆ ನೀಡಿತ್ತು.

ಇದನ್ನೂ ಓದಿ: ರಿಷಬ್​ ಶೆಟ್ಟಿಯಿಂದ ಮುಂದುವರಿದ ಡಿಜಿಟಲ್​ ಡಿಟಾಕ್ಸ್​ – ಪತ್ನಿ ಪ್ರಗತಿ ಹೊರತುಪಡಿಸಿ ಮಿಕ್ಕೆಲ್ಲರೂ ಅನ್​ಫಾಲೋ

ಆದರೆ ರಕ್ಷಿತ್​ ಶೆಟ್ಟಿ ತಂಡದ ಈ ವಾದವನ್ನು ದೆಹಲಿ ಹೈಕೋರ್ಟ್ ತಳ್ಳಿ ಹಾಕಿದೆ. ಹಾಡುಗಳ ಬಳಕೆಯು ಉದ್ದೇಶಪೂರ್ವಕವಾಗಿಯೇ ಆಗಿದೆ. ಸಿನಿಮಾದ ನಾಯಕ ಸಂಕಷ್ಟದಲ್ಲಿರುವಾಗ ನ್ಯಾಯ ಎಲ್ಲಿದೆ ಎಂಬ ಹಾಡನ್ನು ಬಳಕೆ ಮಾಡಲಾಗಿದ್ದು, ಇದು ಸಂಪೂರ್ಣ ವಾಣಿಜ್ಯ ಉದ್ದೇಶಕ್ಕೆಂದೇ ಬಳಕೆ ಮಾಡಿರುವ ಹಾಡಾಗಿದೆ. ಹೀಗಾಗಿ ಇದು ಹಕ್ಕುಸ್ವಾಮ್ಯ ಪ್ರಕರಣವೇ ಆಗಿದೆ ಎಂದು ಕೋರ್ಟ್ ಆದೇಶ ನೀಡಿದೆ.

ಆದರೆ ಜೈಲು ಶಿಕ್ಷೆಯಿಂದ ರಕ್ಷಿತ್​ ಶೆಟ್ಟಿಗೆ ದೆಹಲಿ ಹೈಕೋರ್ಟ್ ವಿನಾಯಿತಿ ನೀಡಿದೆ. ಆದರೆ ಹಣಕಾಸಿನ ವಿಚಾರದಲ್ಲಿ ಮಾತ್ರ ಈಗಾಗಲೇ ಠೇವಣಿ ಇಟ್ಟಿರುವ 20 ಲಕ್ಷ ರೂಪಾಯಿಗಳನ್ನು ಎಂಆರ್​ಟಿ ಮ್ಯೂಸಿಕ್​ಗೆ ನೀಡುವಂತೆ ಸೂಚನೆ ನೀಡಲಾಗಿದೆ. ಆದರೆ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿರುವ ಆರೋಪದ ಅಡಿಯಲ್ಲಿ ಹೆಚ್ಚುವರಿ 5 ಲಕ್ಷ ರೂಪಾಯಿಗಳ ದಂಡ ವಿಧಿಸಲಾಗಿದ್ದು, ಒಟ್ಟೂ 25 ಲಕ್ಷ ರೂಪಾಯಿಗಳನ್ನು ರಕ್ಷಿತ್​ ಶೆಟ್ಟಿ ಒಡೆತನದ ಪರಂವಾ ಸ್ಟುಡಿಯೋಸ್​ ಪಾವತಿಸಬೇಕಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories