ಬಯೋಮೆಟ್ರಿಕ್ ಹಾಜರಾತಿ ಪದ್ಧತಿಗೆ ಕೊನೆಗೂ ಬ್ರೇಕ್ : ಕರ್ತವ್ಯ ಆ್ಯಪ್ ಬಳಕೆ ಇನ್ಮುಂದೆ ಕಡ್ಡಾಯ
ರಾಜ್ಯ ಸರ್ಕಾರವು ಸರ್ಕಾರಿ ನೌಕರರ ಹಾಜರಾತಿ ಪ್ರಕ್ರಿಯೆಯಲ್ಲಿ ಮತ್ತೊಂದು ಮಹತ್ವದ ಬದಲಾವಣೆ ತಂದಿದೆ. ಕಾಗದ ಪತ್ರಗಳಲ್ಲಿ ನಡಯುತ್ತಿದೆ ಹಾಜರಾತಿ ವ್ಯವಸ್ಥೆಗೆ ಬ್ರೇಕ್ ಹಾಕಿ, ಸರ್ಕಾರಿ ಕಚೇರಿಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲಾಗಿತ್ತು, ಇದೀಗ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಗೂ ಕೊಕ್ ನೀಡಲು ರಾಜ್ಯ ಸರ್ಕಾರ ಸಜ್ಜಾಗಿದ್ದು, ಮೊಬೈಲ್ನಲ್ಲೇ ಅಟೆಂಡೆನ್ಸ್ (Kartavya App) ಹಾಕುವ ಪದ್ಧತಿ ಜಾರಿಗೆ ಬರಲಿದೆ.
ಮೇ 1ರಿಂದ ಈ ನೂತನ ಹಾಜರಾತಿ ಪ್ರಕ್ರಿಯೆ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಇದಕ್ಕಾಗಿ ರಾಜ್ಯ ಸರ್ಕಾರಿ ನೌಕರರು ಕರ್ತವ್ಯ ಎಂಬ ಹೆಸರಿನಲ್ಲಿ ಅಪ್ಲಿಕೇಶನ್ನನ್ನು ಮೊಬೈಲ್ನಲ್ಲಿ ಹೊಂದಿರುವುದು ಕಡ್ಡಾಯವಾಗಿದೆ. ಕೃತಕ ಬುದ್ಧಿಮತ್ತೆ ಹಾಗೂ ಜಿಯೋ ಫೆನ್ಸಿಂಗ್ ತಂತ್ರಜ್ಞಾನವನ್ನು ಬಳಸಿ ಸಿದ್ಧಪಡಿಸಿರುವ ರಾಜ್ಯದ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆಯಾಗಿದ್ದು, ಸರ್ಕಾರಿ ನೌಕರರು ತಮ್ಮ ಕಚೇರಿ ಆವರಣದಲ್ಲಿ ನಿಂತು ಮಾತ್ರವೇ ಹಾಜರಾತಿ ಹಾಕಲು ಸಾಧ್ಯವಿದೆ.
ಇದನ್ನೂ ಓದಿ: ಇಂದು ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಫಲಿತಾಂಶ – ಮಧ್ಯಾಹ್ನ 3 ಗಂಟೆಗೆ ರಿಸಲ್ಟ್ ಪ್ರಕಟ
ಸ್ಮಾರ್ಟ್ಫೋನ್ಗಳನ್ನು ಹೊಂದಿರದ ಸರ್ಕಾರಿ ನೌಕರರಿಗೆ ಕಚೇರಿಗಳಲ್ಲಿ ಬೇರೆ ಸಾಧನವನ್ನು ಅಳವಡಿಸಲಾಗುತ್ತದೆ. ಇದನ್ನು ಕರ್ತವ್ಯ ಡಿವೈಸ್ ಎಂದು ಕರೆಯಲಾಗುತ್ತದೆ. ಬಯೋಮೆಟ್ರಿಕ್ ವ್ಯವಸ್ಥೆಯನ್ನು ಸರ್ಕಾರ ಹಿಂಪಡೆದಿದ್ದು, ಇನ್ಮುಂದೆ ಈ ಆ್ಯಪ್ ಮೂಲಕವೇ ಸರ್ಕಾರಿ ನೌಕರರ ಹಾಜರಾತಿ ನಮೂದಾಗಲಿದೆ. ಮೊಬೈಲ್ನಲ್ಲಿ ಹಾಜರಾತಿ ದಾಖಲೆ ಎಂದು ಎಲ್ಲೆಲ್ಲೋ ನಿಂತು ಅಟೆಂಡೆನ್ಸ್ ನಮೂದಿಸಲು ಸಾಧ್ಯವಾಗುವುದಿಲ್ಲ. ಸರ್ಕಾರಿ ನೌಕರನು ತನ್ನ ಕಚೇರಿಗೆ ಆಗಮಿಸಿದ ಬಳಿಕವೇ ಹಾಜರಾತಿ ದಾಖಲಿಸಬಹುದಾಗಿದೆ.



