ಜೂನ್ 1 ರಿಂದ ನಿಮ್ಮ ಮನೆಯ ಎಲ್‌ಪಿಜಿ ಸಿಲಿಂಡರ್ ಕನೆಕ್ಷನ್ ರದ್ದಾಗಬಹುದು!
ಹೊಸ ನಿಯಮಗಳ ಪ್ರಕಾರ, ಈಗಾಗಲೇ ಪಿಎನ್‌ಜಿ (PNG -Piped Natural Gas) ಸಂಪರ್ಕ ಹೊಂದಿರುವ ಮನೆಗಳಲ್ಲಿನ ಎಲ್‌ಪಿಜಿ (LPG- Liquefied Petroleum Gas) ) ಸಿಲಿಂಡರ್ ಕನೆಕ್ಷನ್‌ಗಳು ರದ್ದಾಗುವ ಸಾಧ್ಯತೆಯಿದೆ.
ಗ್ರಾಹಕರಿಗೆ ಎದುರಾಗಬಹುದಾದ ಇಂಧನ ಬಿಕ್ಕಟ್ಟನ್ನು ತಪ್ಪಿಸಲು, ಗೃಹಬಳಕೆಯ ಗ್ಯಾಸ್ ದುರುಪಯೋಗವನ್ನು ತಡೆಯಲು ಮತ್ತು ಕಾಳಸಂತೆಗೆ ಬ್ರೇಕ್ ಹಾಕಲು ಸರ್ಕಾರ ಜೂನ್ 1 ರಿಂದ ಮಹತ್ವದ ನಿಯಮಾವಳಿಗಳನ್ನು ಜಾರಿಗೆ ತರುತ್ತಿದೆ.
ಹೊಸ ನಿಯಮಗಳ ಪ್ರಕಾರ, ಈಗಾಗಲೇ ಪಿಎನ್‌ಜಿ (PNG -Piped Natural Gas) ಸಂಪರ್ಕ ಹೊಂದಿರುವ ಮನೆಗಳಲ್ಲಿನ ಎಲ್‌ಪಿಜಿ (LPG- Liquefied Petroleum Gas) ) ಸಿಲಿಂಡರ್ ಕನೆಕ್ಷನ್‌ಗಳು ರದ್ದಾಗುವ ಸಾಧ್ಯತೆಯಿದೆ.
ದೇಶದಲ್ಲಿ ಪಿಎನ್‌ಜಿ ಕನೆಕ್ಷನ್‌ಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದು, ಮಾರ್ಚ್ ತಿಂಗಳವರೆಗೆ ಸುಮಾರು 6.5 lakh ಹೊಸ ಸಂಪರ್ಕಗಳನ್ನು ನೀಡಲಾಗಿದೆ. ಆದರೆ, ಸರ್ಕಾರದ ಕಟ್ಟುನಿಟ್ಟಿನ ಸೂಚನೆಯ ಹೊರತಾಗಿಯೂ ಜನರು ಎಲ್‌ಪಿಜಿ ಸಿಲಿಂಡರ್ ಬಳಕೆಯನ್ನು ಕಡಿಮೆ ಮಾಡುತ್ತಿಲ್ಲ.
ಪಿಎನ್‌ಜಿ ಸಂಪರ್ಕ ಪಡೆದ ನಂತರವೂ ಒಟ್ಟಾರೆ ಪೈಪ್‌ಲೈನ್ ಗ್ಯಾಸ್ ಪೂರೈಕೆ ಶೇ. 18 ರಷ್ಟು ಕಡಿಮೆಯಾಗಿದೆ. ಅಂದರೆ, ಹಲವು ಕುಟುಂಬಗಳು ಪಿಎನ್‌ಜಿ ಸಂಪರ್ಕ ಪಡೆದಿದ್ದರೂ, ಎಲ್‌ಪಿಜಿ ಸಿಲಿಂಡರ್ ಅನ್ನು ಸರೆಂಡರ್ ಮಾಡದೆ ಎರಡನ್ನೂ ಒಟ್ಟಿಗೆ ಇಟ್ಟುಕೊಂಡಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಿದೆ.
‘ಒಂದು ಕುಟುಂಬ, ಒಂದು ಕನೆಕ್ಷನ್’ ನಿಯಮ:
ಪರಿಷ್ಕೃತ ನಿಯಮಗಳ ಪ್ರಕಾರ, ಈಗಾಗಲೇ ಮನೆಯಲ್ಲಿ ಸಕ್ರಿಯ ಪಿಎನ್‌ಜಿ (PNG) ಸಂಪರ್ಕ ಹೊಂದಿರುವ ಕುಟುಂಬಗಳು ತಮ್ಮ ಎಲ್‌ಪಿಜಿ ಕನೆಕ್ಷನ್ ಅನ್ನು ಕಡ್ಡಾಯವಾಗಿ ಸರೆಂಡರ್ ಮಾಡಬೇಕಾಗುತ್ತದೆ.
ಗೃಹಬಳಕೆಯ ಸಿಲಿಂಡರ್‌ಗಳ ದುರುಪಯೋಗ, ಅಕ್ರಮ ದಾಸ್ತಾನು ಮತ್ತು ಕಾಳಸಂತೆಯನ್ನು ತಡೆಯಲು ತೈಲ ವಿತರಣಾ ಕಂಪನಿಗಳು (OMCs) ಪಿಎನ್‌ಜಿ ಮತ್ತು ಎಲ್‌ಪಿಜಿ ಎರಡನ್ನೂ ಒಟ್ಟಿಗೆ ಬಳಸುತ್ತಿರುವ ಮನೆಗಳನ್ನು ಪತ್ತೆಹಚ್ಚಲು ಆರಂಭಿಸಿವೆ.
ಒಂದೇ ವಿಳಾಸದಲ್ಲಿ ಎರಡೂ ಸಂಪರ್ಕಗಳನ್ನು ಹೊಂದುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಮ್ಮ ಪ್ರದೇಶದಲ್ಲಿ ಪಿಎನ್‌ಜಿ ಸೌಲಭ್ಯವಿದ್ದು, ನಿಗದಿತ ಅವಧಿಯೊಳಗೆ ನೀವು ಅದಕ್ಕೆ ಬದಲಾಗದಿದ್ದರೆ, ನಿಮ್ಮ ಎಲ್‌ಪಿಜಿ ಪೂರೈಕೆಯನ್ನು ಸ್ಥಗಿತಗೊಳಿಸಲಾಗುತ್ತದೆ ಅಥವಾ ಕನೆಕ್ಷನ್ ಸ್ವಯಂಚಾಲಿತವಾಗಿ ರದ್ದಾಗಲಿದೆ.
ಎಲ್‌ಪಿಜಿ ಕನೆಕ್ಷನ್ ವರ್ಗಾವಣೆ (Transfer) ಅಥವಾ ಮರುಸಕ್ರಿಯಗೊಳಿಸುವುದು ಹೇಗೆ?
ಗ್ರಾಹಕರು ಪಿಎನ್‌ಜಿ ಸಂಪರ್ಕ ಪಡೆದ 30 ದಿನಗಳ ಒಳಗಾಗಿ ತಮ್ಮ ಎಲ್‌ಪಿಜಿ ಸಂಪರ್ಕವನ್ನು ರದ್ದುಗೊಳಿಸಬೇಕಾಗುತ್ತದೆ. ಆದರೆ, ಭವಿಷ್ಯದಲ್ಲಿ ಗ್ರಾಹಕರು ಪಿಎನ್‌ಜಿ ಸೌಲಭ್ಯವಿಲ್ಲದ ಬೇರೆ ಪ್ರದೇಶ ಅಥವಾ ನಗರಗಳಿಗೆ ವಲಸೆ ಹೋದರೆ, ತಮ್ಮ ಹಳೆಯ ಎಲ್‌ಪಿಜಿ ಸಂಪರ್ಕವನ್ನು ಮತ್ತೆ ಸಕ್ರಿಯಗೊಳಿಸಲು (Restore) ಸರ್ಕಾರ ಅವಕಾಶ ನೀಡಿದೆ.
ಜೂನ್ 1 ರಿಂದ ಸಿಲಿಂಡರ್ ರೀಫಿಲ್ ಸಿಗಲ್ಲ!
ಈ ಜೂನ್ ತಿಂಗಳಿನಿಂದ, ಪಿಎನ್‌ಜಿ ಪೈಪ್‌ಲೈನ್ ಇರುವ ಪ್ರದೇಶಗಳ ನಿವಾಸಿಗಳು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡಲು ಅಥವಾ ರೀಫಿಲ್ ಮಾಡಲು ಸಾಧ್ಯವಾಗುವುದಿಲ್ಲ. ಸಿಟಿ ಗ್ಯಾಸ್ ವಿತರಣಾ ಕಂಪನಿಗಳು ಮತ್ತು ಒಎಂಸಿಗಳು (OMC) ತಮ್ಮ ಡಿಜಿಟಲ್ ಡೇಟಾಬೇಸ್ ಅನ್ನು ಸಂಪೂರ್ಣವಾಗಿ ಒಂದಕ್ಕೊಂದು ಲಿಂಕ್ ಮಾಡಿದ್ದು, ಈ ಮೂಲಕ ಉಭಯ ಬಳಕೆಯನ್ನು ತಡೆಯಲಿವೆ. ಇನ್ನು, ನಿಗದಿತ ವಲಯಗಳಲ್ಲಿ ಪಿಎನ್‌ಜಿ ಸಂಪರ್ಕ ವಿಸ್ತರಣೆಗೆ ಜೂನ್ 30 ರವರೆಗೆ ಸಮಯವನ್ನು ವಿಸ್ತರಿಸಲಾಗಿದೆ.
ಸಿಲಿಂಡರ್ ಬುಕಿಂಗ್‌ಗೆ ಹೊಸ ಡೆಡ್‌ಲೈನ್:
ಗ್ಯಾಸ್ ಕೊರತೆ ಮತ್ತು ದುರುಪಯೋಗವನ್ನು ನಿಯಂತ್ರಿಸಲು ಎರಡು ಸಿಲಿಂಡರ್ ಬುಕಿಂಗ್‌ಗಳ ನಡುವಿನ ಅವಧಿಯನ್ನು (Lock-in Period) ಬದಲಾಯಿಸಲಾಗಿದೆ:
ನಗರ ಪ್ರದೇಶದ ಗ್ರಾಹಕರಿಗೆ ಎಲ್‌ಪಿಜಿ ರೀಫಿಲ್‌ನ ಲಾಕ್-ಇನ್ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ. ಹಾಗೂ ಗ್ರಾಮೀಣ ಭಾಗದ ಗ್ರಾಹಕರಿಗೆ ಎರಡು ಸಿಲಿಂಡರ್ ಬುಕಿಂಗ್ ನಡುವಿನ ಕನಿಷ್ಠ ಅವಧಿ ಇನ್ಮುಂದೆ 45 ದಿನಗಳಾಗಿರಲಿದೆ.
ಸಬ್ಸಿಡಿ ಮತ್ತು ಹೊಸ ಕನೆಕ್ಷನ್ ನಿಯಮಗಳು:
ಗ್ರಾಹಕರಿಗೆ ಪ್ರತಿ ವರ್ಷ ಕೇವಲ 12 ಸಬ್ಸಿಡಿ ಸಹಿತ ಗೃಹಬಳಕೆಯ ಸಿಲಿಂಡರ್‌ಗಳು ಮಾತ್ರ ಸಿಗಲಿವೆ. ಕೋಟಾ ಮೀರಿದ ಹೆಚ್ಚುವರಿ ಸಿಲಿಂಡರ್ ಬೇಕಾದಲ್ಲಿ ಅಂದಿನ ಮಾರುಕಟ್ಟೆ ದರಕ್ಕೆ (Market Value) ಅನುಗುಣವಾಗಿ ಪಾವತಿಸಿ ಖರೀದಿಸಬೇಕಾಗುತ್ತದೆ.
ಹೊಸ ಎಲ್‌ಪಿಜಿ ಕನೆಕ್ಷನ್ ಪಡೆಯಲು ಇನ್ಮುಂದೆ ಪರಿಷ್ಕೃತ ಡೆಪಾಸಿಟ್ ಹಣ ಮತ್ತು ಸೆಟಪ್ ಶುಲ್ಕಗಳು ಅಂದರೆ ರೆಗ್ಯುಲೇಟರ್, ಪೈಪ್ ಮತ್ತು ಇನ್‌ಸ್ಟಾಲೇಶನ್ ಚಾರ್ಜ್ ಒಳಗೊಂಡಂತೆ ಅನ್ವಯವಾಗಲಿವೆ.



