ವಿವೋ X300 FE ಅಬ್ಬಬ್ಬಾ ಎಂತಹಾ ಫೀಚರ್ಸ್‌ ! 6500mAh ಬ್ಯಾಟರಿ, 50MP ಸೋನಿ IMX921 ZEISS ಕ್ಯಾಮೆರಾ

Vivo X300 FE : ಟೆಕ್ ಜಗತ್ತಿನಲ್ಲಿ ಈಗ ಎಲ್ಲೇ ನೋಡಿದರೂ ವಿವೋ X300 FE ಸ್ಮಾರ್ಟ್‌ಪೋನ್‌ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಕಾಂಪ್ಯಾಕ್ಟ್ ಡಿಸೈನ್ ಇಷ್ಟಪಡುವವರಿಗಾಗಿ ವಿವೋ ಕಂಪನಿಯು ವಿವೋ ಎಕ್ಸ್‌ 300 ಎಫ್‌ ಇ ಮಾದರಿಯ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Vivo X300 FE : ಟೆಕ್ ಜಗತ್ತಿನಲ್ಲಿ ಈಗ ಎಲ್ಲೇ ನೋಡಿದರೂ ವಿವೋ X300 FE ಸ್ಮಾರ್ಟ್‌ಪೋನ್‌ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಕಾಂಪ್ಯಾಕ್ಟ್ ಡಿಸೈನ್ ಇಷ್ಟಪಡುವವರಿಗಾಗಿ ವಿವೋ ಕಂಪನಿಯು ವಿವೋ ಎಕ್ಸ್‌ 300 ಎಫ್‌ ಇ ಮಾದರಿಯ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕೇವಲ 6.31 ಇಂಚಿನ ಡಿಸ್‌ಪ್ಲೇಯಲ್ಲೇ ಇಡೀ ಜಗತ್ತನ್ನೇ ಅಡಗಿಸಿಟ್ಟಿರುವ ಈ ಫೋನ್‌ನ ಫೀಚರ್ಸ್‌ ಸದ್ಯ ಲೀಕ್ ಆಗಿದ್ದು, ಗ್ರಾಹಕರು ಫಿದಾ ಆಗಿದ್ದಾರೆ.

Vivo X300 FE : ಕಾಂಪ್ಯಾಕ್ಟ್ ಬಾಡಿಯಲ್ಲಿ ಬೃಹತ್ ಬ್ಯಾಟರಿ

ಸಾಮಾನ್ಯವಾಗಿ ಚಿಕ್ಕ ಫೋನ್‌ಗಳಲ್ಲಿ ಬ್ಯಾಟರಿ ಸಾಮರ್ಥ್ಯ ಕಡಿಮೆ ಇರುತ್ತದೆ. ಆದರೆ ವಿವೋ ಇಲ್ಲಿ ಮ್ಯಾಜಿಕ್ ಮಾಡಿದೆ. ಕೇವಲ 8.1mm ತೆಳುವಾದ ಈ ಫೋನ್‌ನಲ್ಲಿ 6,500mAh ಸಾಮರ್ಥ್ಯದ ಬೃಹತ್ ಬ್ಯಾಟರಿ ನೀಡಲಾಗಿದೆ. ಇದರೊಂದಿಗೆ 90W ಫಾಸ್ಟ್ ಚಾರ್ಜಿಂಗ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವಿದ್ದು, ಕೇವಲ ಕೆಲವೇ ನಿಮಿಷಗಳಲ್ಲಿ ಫೋನ್ ಫುಲ್ ಚಾರ್ಜ್ ಆಗಲಿದೆ.

Vivo X300 FE : ಪ್ರೊಫೆಷನಲ್ ಝೈಸ್ (ZEISS) ಕ್ಯಾಮೆರಾ ಸೆಟಪ್

ಫೋಟೋಗ್ರಫಿ ಪ್ರಿಯರಿಗಾಗಿ ಇದರಲ್ಲಿ 50MP ಸೋನಿ IMX921 ZEISS ಮುಖ್ಯ ಕ್ಯಾಮೆರಾ ಇದೆ. ಜೊತೆಗೆ 50MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ನೀಡಲಾಗಿದ್ದು, ಇದು 3x ಆಪ್ಟಿಕಲ್ ಜೂಮ್ ಬೆಂಬಲಿಸುತ್ತದೆ. ವಿಶೇಷವೆಂದರೆ, ವಿವೋ ಈ ಬಾರಿ ‘ZEISS ಟೆಲಿಫೋಟೋ ಎಕ್ಸ್‌ಟೆಂಡರ್ ಕಿಟ್’ ಸಪೋರ್ಟ್ ನೀಡುತ್ತಿದ್ದು, ವೃತ್ತಿಪರ ಕ್ಯಾಮೆರಾದಂತೆ ದೂರದ ದೃಶ್ಯಗಳನ್ನು ಅತ್ಯಂತ ಸ್ಪಷ್ಟವಾಗಿ ಸೆರೆಹಿಡಿಯಬಹುದು.

Also Read : Vivo T5 Pro 5G : ವಿವೋ ಟಿ5 ಪ್ರೋ 5ಜಿ ಒಂದಲ್ಲ ಎರಡಲ್ಲ.. ಬರೋಬ್ಬರಿ 9020mAh ಬ್ಯಾಟರಿ ! ಬೆಲೆ ಎಷ್ಟು ಗೊತ್ತಾ ?

Vivo X300 FE : ಸೂಪರ್ ಫಾಸ್ಟ್ ಪರ್ಫಾರ್ಮೆನ್ಸ್

ಈ ಫೋನ್‌ನಲ್ಲಿ ಕ್ವಾಲ್ಕಾಮ್‌ನ ಅತ್ಯಂತ ಶಕ್ತಿಶಾಲಿ Snapdragon 8 Gen 5 ಪ್ರೊಸೆಸರ್ ಬಳಸಲಾಗಿದೆ ಎನ್ನಲಾಗುತ್ತಿದೆ.

  • ಡಿಸ್‌ಪ್ಲೇ: 6.31 ಇಂಚಿನ 1.5K LTPO AMOLED ಸ್ಕ್ರೀನ್.
  • ಬ್ರೈಟ್‌ನೆಸ್: ದಾಖಲೆಯ 5,000 ನಿಟ್ಸ್ ಪೀಕ್ ಬ್ರೈಟ್‌ನೆಸ್.
  • ಸುರಕ್ಷತೆ: ನೀರು ಮತ್ತು ಧೂಳಿನಿಂದ ರಕ್ಷಣೆ ಪಡೆಯಲು IP69 ರೇಟಿಂಗ್ ಮತ್ತು ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಇದೆ.

Also Read : Google Pixel 10 : ಐಪೋನ್‌ ಬಿಟ್ಟು ಗೂಗಲ್‌ ಫಿಕ್ಸೆಲ್‌ 10 ಖರೀದಿಗೆ ಮುಂದಾದ ಜನ : ಅಷ್ಟಕ್ಕೂ ಇದರಲ್ಲಿ ಏನಿದೆ ಫೀಚರ್ಸ್‌

ಭಾರತಕ್ಕೆ ಬರಲಿದೆ ‘ಎಕ್ಸ್‌ಕ್ಲೂಸಿವ್ ಗ್ರೀನ್’ ಬಣ್ಣ

ರಷ್ಯಾದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಈ ಫೋನ್, ಭಾರತಕ್ಕೆ ಮೇ ಮೊದಲ ವಾರದಲ್ಲಿ (May 2026) ಲಾಂಚ್ ಆಗುವ ಸಾಧ್ಯತೆಯಿದೆ. ಭಾರತೀಯ ಗ್ರಾಹಕರಿಗಾಗಿ ವಿಶೇಷವಾಗಿ ‘ಗ್ರೀನ್’ (Nature Inspired Green) ಬಣ್ಣದ ವೇರಿಯಂಟ್ ಪರಿಚಯಿಸಲಾಗುತ್ತಿದೆ. ಇದರ ಬೆಲೆ ಸುಮಾರು ₹59,999 ರಿಂದ ₹65,000 ಇರಬಹುದು ಎಂದು ಅಂದಾಜಿಸಲಾಗಿದೆ.

vivo x300 fe 6500mah battery zeiss camera price india

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories