ಡೇಂಜರ್..ಡೇಂಜರ್..! ಬಾಲಕಿಯ ಹೊಟ್ಟೆಯಲ್ಲಿ ನೂರಾರು ಹುಳುಗಳು ಪತ್ತೆ..!

ಹೊಟ್ಟೆ ನೋವು ಹಾಗೂ ವಾಂತಿಯಿಂದ ಬಳಲುತ್ತಿದ್ದ 4 ವರ್ಷದ ಪುಟ್ಟ ಬಾಲಕಿಯ ಶಸ್ತ್ರಚಿಕಿತ್ಸೆ ಕೈಗೊಂಡ ವೈದ್ಯರೇ ದಂಗಾಗಿ ಹೋದ ಘಟನೆಯು ಗ್ರೇಟರ್ ನೋಯ್ಡಾದ ಜಿಮ್ಸ್ ಆಸ್ಪತ್ರೆಯಲ್ಲಿ ಸಂಭವಿಸಿದೆ. ಪುಟ್ಟ ಬಾಲಕಿಯ ಹೊಟ್ಟೆಯ ತುಂಬೆಲ್ಲ ಸಹಸ್ರಾರು ದುಂಡುಹುಳುಗಳು ತುಂಬಿ ಹೋಗಿದ್ದು, ವೈದ್ಯರ ಸಮಯಪ್ರಜ್ಞೆಯಿಂದ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಬಾಲಕಿಯ ಕರುಳನ್ನೇ ಸುತ್ತುವರಿದಿದ್ದ ಈ ಹುಳುಗಳು ಕರುಳನ್ನೇ ಬ್ಲಾಕ್ ಮಾಡಿದ್ದವು ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯಕೀಯ ಭಾಷೆಯಲ್ಲಿ ಈ ದುಂಡುಹುಳುಗಳನ್ನು ಆಸ್ಕರಿಸ್ ಲುಂಬ್ರಿಕಾಯ್ಡ್ಸ್ ಎಂದು ಕರೆಯಲಾಗುತ್ತದೆ. ಇದು ಕಲುಷಿತ ಆಹಾರಗಳ ಸೇವನೆಯಿಂದ ಬರುತ್ತದೆ ಎನ್ನಲಾಗಿದೆ.
ಈ ವಿಚಾರವಾಗಿ ಮಾತನಾಡಿದ ಜಿಮ್ಸ್ ಪ್ರಾಧ್ಯಾಪಕ ಡಾ. ಮೋಹಿತ್ ಮಾಥುರ್, ಮಕ್ಕಳಲ್ಲಿ ಹೊಟ್ಟೆ ಹುಳುವಿನ ಸಮಸ್ಯೆ ಸಾಮಾನ್ಯ . ಆದರೆ ಈ ಬಾಲಕಿಯಲ್ಲಿ ಹುಳುಗಳ ಸಂಖ್ಯೆ ಮಿತಿಮೀರಿತ್ತು. ಹುಳುಗಳು ಗುಂಪಾಗಿ ಸೇರಿಕೊಂಡು ಕರುಳನ್ನು ಬ್ಲಾಕ್ ಮಾಡಿದ್ದರಿಂದ ಇದು ‘ಸರ್ಜಿಕಲ್ ಎಮರ್ಜೆನ್ಸಿ’ ಅಂದರೆ ತುರ್ತು ಶಸ್ತ್ರಚಿಕಿತ್ಸೆಯ ಹಂತಕ್ಕೆ ತಲುಪಿತ್ತು. ಸರಿಯಾದ ಸಮಯಕ್ಕೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Beauty Tips : ಬಿಸಿಲ ಝಳದಲ್ಲೂ ನಿಮ್ಮ ಚರ್ಮ ಪಳಪಳ ಹೊಳಿಬೇಕಾ ? ಇಲ್ಲಿದೆ ಸಿಂಪಲ್ ಟಿಫ್ಸ್
ಮಕ್ಕಳು ಮಣ್ಣಿನಲ್ಲಿ ಆಟವಾಡಿ ಕೈತೊಳೆಯದೇ ಆಹಾರ ಸೇವನೆ ಮಾಡುವುದು, ಸರಿಯಾಗಿ ತೊಳೆಯದ ಹಣ್ಣು, ತರಕಾರಿಗಳ ಸೇವನೆ ಹಾಗೂ ಕಲುಷಿತ ನೀರಿನ ಸೇವನೆಯಿಂದ ಈ ಸಮಸ್ಯೆ ಎದುರಾಗುತ್ತದೆ. ಹೊಟ್ಟೆಹುಳು ಸಮಸ್ಯೆ ಮಕ್ಕಳಲ್ಲಿ ಸಾಮಾನ್ಯ ಎಂದು ನಿರ್ಲಕ್ಷಿಸಬೇಡಿ ಎಂದು ವೈದ್ಯರು ಪೋಷಕರಿಗೆ ಸಲಹೆ ನೀಡಿದ್ದಾರೆ. ಮಕ್ಕಳಿಗೆ ವೈದ್ಯರ ಸಲಹೆಯಂತೆ ಕಾಲ ಕಾಲಕ್ಕೆ ಡಿವಾರ್ಮಿಂಗ್ ಔಷಧಿ ನೀಡಿ. ಊಟಕ್ಕೆ ಮೊದಲು, ಶೌಚಾಲಯಕ್ಕೆ ತೆರಳಿದ ಬಳಿಕ ಕೈ ಕಾಲುಗಳನ್ನು ತೊಳೆದುಕೊಳ್ಳಬೇಕು. ಮಕ್ಕಳಲ್ಲಿ ಉಗುರು ಬೆಳೆಯಲು ಬಿಡಬೇಡಿ.ಅಲ್ಲಿ ಕೊಳೆ ಸೇರದಂತೆ ನೋಡಿಕೊಳ್ಳಬೇಕು. ಶುಚಿ – ರುಚಿಯಾದ ಆಹಾರವನ್ನೇ ಮಕ್ಕಳು ಸೇವನೆ ಮಾಡುವಂತೆ ಪೋಷಕರು ನೋಡಿಕೊಳ್ಳಲಿ ಎಂದು ವೈದ್ಯರು ಸಂಪೂರ್ಣ ಪೋಷಕ ವರ್ಗಕ್ಕೆ ಸಲಹೆ ನೀಡಿದ್ದಾರೆ.



