ಉಡುಪಿ: ಲಂಡನ್ ಸುಂದರಿಯ ಹೆಸರಲ್ಲಿ ಭಾರಿ ವಂಚನೆ; ಕಾಸ್ಮೆಟಿಕ್ ಬಿಸಿನೆಸ್ ಆಸೆಗೆ ಬಿದ್ದ ಶೆಫ್ ಕಳೆದುಕೊಂಡಿದ್ದು ಲಕ್ಷ ಲಕ್ಷ ಹಣ

ಲಂಡನ್ ನಿವಾಸಿ ಎಂದು ಪರಿಚಯಿಸಿಕೊಂಡ ಮಹಿಳೆಯೊಬ್ಬಳು ಉಡುಪಿಯ ಹಿರಿಯ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 1.13 ಲಕ್ಷ ರೂಪಾಯಿ ಪಂಗನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಉಡುಪಿ: ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವ ಅಪರಿಚಿತರ ಮಾತನ್ನು ನಂಬಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುವ ಪ್ರಕರಣಗಳು ಜಿಲ್ಲೆಯಲ್ಲಿ ಮುಂದುವರಿಯುತ್ತಿವೆ. ಲಂಡನ್ ನಿವಾಸಿ ಎಂದು ಪರಿಚಯಿಸಿಕೊಂಡ ಮಹಿಳೆಯೊಬ್ಬಳು ಉಡುಪಿಯ ಹಿರಿಯ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 1.13 ಲಕ್ಷ ರೂಪಾಯಿ ಪಂಗನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಪರಿಚಯವಾಗಿದ್ದು ಹೇಗೆ ?

ಕುತ್ಪಾಡಿಯ ನಿವಾಸಿ, ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶೆಫ್ ಆಗಿ ಕೆಲಸ ಮಾಡುತ್ತಿರುವ ಪಾಂಡು ಕರಿಯಪ್ಪಾ ಪೂಜಾರಿ (62 ವರ್ಷ) ಎಂಬುವವರಿಗೆ ವಾಟ್ಸಾಪ್ ಮೂಲಕ ‘ಏಮಿಲ್ಡಾ ವಿಲಿಯಂ’ ಎಂಬಾಕೆ ಪರಿಚಯವಾಗಿದ್ದಳು. ತಾನು ಲಂಡನ್ ನಿವಾಸಿ ಎಂದು ಹೇಳಿಕೊಂಡಿದ್ದ ಈಕೆ, ಭಾರತದಲ್ಲಿ ಕಾಸ್ಮೆಟಿಕ್ ಮತ್ತು ಹೋಟೆಲ್ ವ್ಯವಹಾರ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಳು. ನಿಮ್ಮನ್ನು ಭೇಟಿಯಾಗಲು ಮಂಗಳೂರಿಗೆ ಬರುವುದಾಗಿ ನಂಬಿಸಿದ್ದಳು.

ವಂಚನೆಯ ಸ್ಕೆಚ್ ಶುರುವಾಗಿದ್ದು ಹೇಗೆ ?

ಏಪ್ರಿಲ್ 7 ಎಂದು ಏಮಿಲ್ಡಾ ವಿಲಿಯಂ ತಾನು ಲಂಡನ್‌ನಿಂದ ದೆಹಲಿಗೆ ಬರುತ್ತಿರುವುದಾಗಿ ವಿಮಾನದ ಟಿಕೆಟ್ ಅನ್ನು ಪಾಂಡು ಅವರಿಗೆ ವಾಟ್ಸಾಪ್ ಮಾಡಿದ್ದಳು. ಏಪ್ರಿಲ್ 8ರಂದು ಮರುದಿನ ಬೆಳಿಗ್ಗೆ ಪಾಂಡು ಅವರ ಮೊಬೈಲ್‌ಗೆ ಅಪರಿಚಿತ ಮಹಿಳೆಯೊಬ್ಬಳು ಕರೆ ಮಾಡಿ, “ನಿಮ್ಮ ಸ್ನೇಹಿತೆ ಏಮಿಲ್ಡಾ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅವರ ಬಳಿ 5 ಕೋಟಿ ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್ (DD) ಮತ್ತು ಅಧಿಕ ಬೆಲೆಬಾಳುವ ವಸ್ತುಗಳಿವೆ. ಇದನ್ನು ಬಿಡಿಸಿಕೊಳ್ಳಲು ಕೂಡಲೇ 70,000 ರೂ. ಹಣ ಕಟ್ಟಬೇಕು” ಎಂದು ಹೇಳಿದ್ದಾಳೆ.

Also Read : ಸುಡುವ ಬಿಸಲಿಗೆ ತತ್ತರಿಸಿದ ರಾಜ್ಯದ ಜನತೆ : ಉತ್ತರ ಕರ್ನಾಟಕದಲ್ಲಿ 40 ಡಿಗ್ರಿ ಮೀರಿದ ತಾಪಮಾನ

ಇದಾದ ಬೆನ್ನಲ್ಲೇ ಏಮಿಲ್ಡಾ ವಿಲಿಯಂ ಎಂಬಾಕೆ ಪಾಂಡು ಅವರಿಗೆ ಕರೆ ಮಾಡಿ ಅಳುತ್ತಾ ನಾಟಕವಾಡಿದ್ದಾಳೆ. ಇದನ್ನು ನಿಜವೆಂದು ನಂಬಿದ ಪಾಂಡು ಅವರು ವಿವಿಧ ಹಂತಗಳಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ. ಆರೋಪಿಗಳು ನೀಡಿದ ಕ್ಯೂಆರ್ ಕೋಡ್ (Scanner) ಮೂಲಕ ಪಾಂಡು ಅವರು ಮೊದಲು 69,400 ರೂ. ಹಣ ವರ್ಗಾಯಿಸಿದ್ದಾರೆ.

ನಂತರ ಮತ್ತೆ 40,000 ರೂ.ಗೆ ಬೇಡಿಕೆ ಇಟ್ಟಾಗ, ತಮ್ಮ ಖಾತೆಯಿಂದ 20,000 ರೂ. ಹಾಗೂ ತನ್ನ ಸಂಬಂಧಿ ನಮೀತ್ ಎಂಬುವವರ ಖಾತೆಯಿಂದ 18,400 ರೂ. ಸೇರಿ ಒಟ್ಟು 1,13,300 ರೂಪಾಯಿಗಳನ್ನು ವಂಚಕರ ಖಾತೆಗೆ ಜಮೆ ಮಾಡಿದ್ದಾರೆ.

Also Read : ತಂದೆಯ ಮರಣದ ಬಳಿಕ ಪೆನ್ಶನ್​ ನಿಯಮ ಬದಲು: ವಿಚ್ಛೇದಿತ ಪುತ್ರಿ ಕುಟುಂಬ ಪಿಂಚಣಿಗೆ ಅರ್ಹಳಲ್ಲ ಎಂದ ಹೈಕೋರ್ಟ್..!

ನಂತರ ಇದು ವಂಚನೆ ಎಂಬುದು ತಿಳಿದುಬಂದಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರ ಠಾಣೆಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವ ವಿದೇಶಿ ವ್ಯಕ್ತಿಗಳು ಉಡುಗೊರೆ ನೀಡುವ ಅಥವಾ ಹಣ ತರುತ್ತಿರುವ ನೆಪದಲ್ಲಿ ಹಣಕ್ಕೆ ಬೇಡಿಕೆ ಇಟ್ಟರೆ ಕೂಡಲೇ ಎಚ್ಚೆತ್ತುಕೊಳ್ಳಿ. ಯಾವುದೇ ಕಾರಣಕ್ಕೂ ಅಪರಿಚಿತರ ಖಾತೆಗೆ ಹಣ ವರ್ಗಾಯಿಸಬೇಡಿ.

udupi chef cheated by london-woman fraud case registered Kannada News 

 

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories