ರಾಮ – ಲಕ್ಷ್ಮಣರನ್ನು ಕಳ್ಳರಿಗೆ ಹೋಲಿಸಿದ ಪ್ರಕಾಶ್ ರಾಜ್
ಸದಾ ಹಿಂದೂ ವಿರೋಧಿ ಹೇಳಿಕೆಯ ಮೂಲಕವೇ ಸುದ್ದಿಯಾಗುವ ನಟ ಪ್ರಕಾಶ್ ರಾಜ್ ಇದೀಗ ಮತ್ತೊಂದು ವಿವಾದದ ಮೂಲಕ ಮುನ್ನೆಲೆಗೆ ಬಂದಿದ್ದಾರೆ. ಪ್ರಸ್ತುತ ರಾಜಕೀಯ ವಿದ್ಯಮಾನವನ್ನು ಬಣ್ಣಿಸುವ ಭರದಲ್ಲಿ ರಾಮ ಲಕ್ಷ್ಮಣರನ್ನು ಕಳ್ಳರಿಗೆ ಹೋಲಿಸಿದ್ದಾರೆ. ಕೇರಳ ಸಾಹಿತ್ಯ ಉತ್ಸವದಲ್ಲಿ ನಟ ಪ್ರಕಾಶ್ ರಾಜ್ ಇಂತಹದ್ದೊಂದು ಹೇಳಿಕೆ ನೀಡಿದ್ದು; ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ಎದುರಿಸುತ್ತಿದ್ದಾರೆ.
ಭಾಷಣದ ಸಂದರ್ಭದಲ್ಲಿ ನಟ ಪ್ರಕಾಶ್ ರಾಜ್, ರಾಮ – ಲಕ್ಷ್ಮಣರು ಉತ್ತರ ಭಾರತದಿಂದ ವಲಸೆ ಬಂದ ಕಾರ್ಮಿಕರು. ದಕ್ಷಿಣ ಭಾರತಕ್ಕೆ ಬಂದ ಅವರು ಒಂದು ತೋಟಕ್ಕೆ ನುಗ್ಗಿ ಹಣ್ಣನ್ನು ಕದ್ದು ತಿಂದಿದ್ದರು. ಇದೇ ತೋಟದ ಮಾಲೀಕ ರಾವಣನೊಂದಿಗೆ ಅವರು ಜಗಳ ಮಾಡಿದರು ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಠಿಸಿಕೊಂಡಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ – ವಿಜಯ್ದೇವರಕೊಂಡ ಕೊಡವ ಸಂಪ್ರದಾಯದಲ್ಲಿ ಅದ್ಧೂರಿ ಆರತಕ್ಷತೆ
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು; ಹಿಂದೂಗಳ ಹಾಗೂ ಉತ್ತರ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಅನೇಕರು ಪ್ರಕಾಶ್ ರಾಜ್ಗೆ ಇನ್ಮುಂದೆ ಸಿನಿಮಾಗಳಲ್ಲಿ ಅವಕಾಶವನ್ನೇ ನೀಡಬಾರದು ಎಂದು ಹೇಳಿದ್ದಾರೆ. ಇನ್ನೂ ಕೆಲವರು ಈತ ನಟಿಸಿರುವ ಸಿನಿಮಾಗಳಿಗೆ ಹೋಗಲೇಬೇಡಿ. ಈತನನ್ನು ಬಾಯ್ಕಾಟ್ ಮಾಡೋಣ ಎಂದು ಕರೆ ನೀಡುತ್ತಿದ್ದಾರೆ.
ಇನ್ನೂ ಕೆಲವರು ಪ್ರಕಾಶ್ ರಾಜ್ರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಹಿಂದೂಗಳ ವಿರುದ್ಧ ಹೇಳಿಕೆ ನೀಡುವುದು ಅವರ ಛಾಳಿ. ಆದರೆ ಆ ವೇದಿಕೆಯಲ್ಲಿ ನೆರೆದಿದ್ದ ಒಬ್ಬನೇ ಒಬ್ಬ ಹಿಂದೂ ಪ್ರಕಾಶ್ ರಾಜ್ರ ಹೇಳಿಕೆಯನ್ನು ವಿರೋಧಿಸಿಲ್ಲ ಎನ್ನುವುದೇ ಬೇಸರದ ಸಂಗತಿ ಎಂದಿದ್ದಾರೆ.



