ಆಮೀರ್​ ಖಾನ್​ ಬಾಳಲ್ಲಿ ಮತ್ತೊಮ್ಮೆ ಕಂಕಣ ಭಾಗ್ಯ : 60ರ ಹರೆಯದಲ್ಲಿ 3ನೇ ಮದುವೆಗೆ ಸಜ್ಜಾದ ಬಾಲಿವುಡ್​ ನಟ

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಮೀರ್ ಖಾನ್ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲು ಸಜ್ಜಾಗಿದ್ದಾರೆ. ಹಲವು ದಿನಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ಈಗ ತೆರೆ ಬಿದ್ದಿದ್ದು, ಅವರು ತಮ್ಮ ಗೆಳತಿ ಗೌರಿ ಸ್ಪ್ರ್ಯಾಟ್ ಅವರೊಂದಿಗೆ ವಿವಾಹವಾಗುತ್ತಿರುವುದು ಖಚಿತವಾಗಿದೆ

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಮೀರ್ ಖಾನ್ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲು ಸಜ್ಜಾಗಿದ್ದಾರೆ. ಹಲವು ದಿನಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ಈಗ ತೆರೆ ಬಿದ್ದಿದ್ದು, ಅವರು ತಮ್ಮ ಗೆಳತಿ ಗೌರಿ ಸ್ಪ್ರ್ಯಾಟ್ ಅವರೊಂದಿಗೆ ವಿವಾಹವಾಗುತ್ತಿರುವುದು ಖಚಿತವಾಗಿದೆ. ಬರುವ ಜುಲೈ 5 ರಂದು ಅತ್ಯಂತ ಸರಳವಾಗಿ, ಕೇವಲ ಹತ್ತಿರದ ಬಂಧುಗಳು ಹಾಗೂ ಆಪ್ತರ ಸಮ್ಮುಖದಲ್ಲಿ ಈ ವಿವಾಹ ಮಹೋತ್ಸವ ಜರುಗಲಿದೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ.

ಕಳೆದ ವರ್ಷ ಆಮೀರ್ ಖಾನ್ ಅವರು ತಮ್ಮ 60ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಗೌರಿ ಅವರನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಪರಿಚಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅದಕ್ಕೂ ಮುನ್ನ ಸುಮಾರು ಒಂದೂವರೆ ವರ್ಷಗಳ ಕಾಲ ಇವರಿಬ್ಬರ ಸಂಬಂಧ ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಅತ್ಯಂತ ರಹಸ್ಯವಾಗಿತ್ತು. ಬೆಂಗಳೂರು ಮತ್ತು ಮುಂಬೈ ನಡುವೆ ಯಾರಿಗೂ ತಿಳಿಯದಂತೆ ನಡೆಯುತ್ತಿದ್ದ ಇವರ ಭೇಟಿಗಳು, ಕೊನೆಗೂ ಮದುವೆಯ ನಿರ್ಧಾರಕ್ಕೆ ಬಂದು ತಲುಪಿವೆ.

ಮೂಲತಃ ಸಿಲಿಕಾನ್​ ಸಿಟಿ ಬೆಂಗಳೂರಿನವರಾದ ಗೌರಿ, ಸಿನಿಮಾ ಹಿನ್ನೆಲೆ ಹೊಂದಿದವರಲ್ಲ. ಬೆಂಗಳೂರಿನ ಸಲೂನ್ ಉದ್ಯಮಿ ರೀಟಾ ಸ್ಪ್ರ್ಯಾಟ್ ಅವರ ಪುತ್ರಿಯಾದ ಗೌರಿ, ಲಂಡನ್‌ನಲ್ಲಿ ಫ್ಯಾಷನ್ ತಂತ್ರಜ್ಞಾನದ ಉನ್ನತ ಶಿಕ್ಷಣ ಪಡೆದಿದ್ದಾರೆ. ಸದ್ಯ ಮುಂಬೈನಲ್ಲಿ ಪ್ರಸಿದ್ಧ ಸಲೂನ್​ ಒಂದನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಏಳು ವರ್ಷದ ಮಗುವನ್ನು ಗೌರಿ ಹೊಂದಿದ್ದಾರೆ .

Also Read: ದೃಶ್ಯಂ 3 ರಿಲೀಸ್: ರವಿಚಂದ್ರನ್ ಗೆ ರಿಮೇಕ್ ಚಾನ್ಸ್ ಮಿಸ್..!?

1986ರಲ್ಲಿ ರೀನಾ ದತ್ತಾ ಅವರನ್ನು ವರಿಸಿದ್ದ ಆಮೀರ್, 2002 ರಲ್ಲಿ ವಿಚ್ಛೇದನ ಪಡೆದರು. ಇವರಿಗೆ ಜುನೈದ್ ಹಾಗೂ ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇದಾದ ಬಳಿಕ 2005ರಲ್ಲಿ ನಿರ್ದೇಶಕಿ ಕಿರಣ್​ ರಾವ್​ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಆಮೀರ್​ 2021ರಲ್ಲಿ ಈ ದಾಂಪತ್ಯಕ್ಕೆ ಮುಕ್ತಾಯ ಹಾಡಿದ್ದರು. ಈ ವಿವಾಹದಿಂದ ಅವರಿಗೆ ಆಝಾದ್​ ಎಂಬ ಹೆಸರಿನ ಮಗನಿದ್ದಾನೆ. ಇದೀಗ ಗೌರಿ ನನ್ನ ಬದುಕಿಗೆ ಬಂದ ಬಳಿಕ ನನ್ನ ಬಾಳು ಪರಿಪೂರ್ಣವಾಯ್ತು ಎನ್ನುತ್ತಿರುವ ಆಮೀರ್​, 61ರ ಪ್ರಾಯದಲ್ಲಿ ಮೂರನೇ ಬಾರಿಗೆ ನೂತನ ದಾಂಪತ್ಯ ಜೀವನ ಆರಂಭಿಸಲು ಸಜ್ಜಾಗಿದ್ದಾರೆ.

Aamir Khans life is once again blessed with a bangle Bollywood actor ready for his third marriage at the age of 60

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories