ಕೇಂದ್ರ ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್​ : 2 ಪರ್ಸೆಂಟ್​ ತುಟ್ಟಿ ಭತ್ಯೆ ಹೆಚ್ಚಳಕ್ಕೆ

ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್​ ನೀಡಿದೆ. ಜನವರಿ 1, 2026 ರಿಂದಲೇ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆಯನ್ನು 2 ಪ್ರತಿಶತ ಏರಿಕೆ ಮಾಡಲಾಗಿದೆ.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್​ ನೀಡಿದೆ. ಜನವರಿ 1, 2026 ರಿಂದಲೇ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆಯನ್ನು 2 ಪ್ರತಿಶತ ಏರಿಕೆ ಮಾಡಲಾಗಿದೆ. ಈ ಏರಿಕೆಯೊಂದಿಗೆ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನದ ಶೇ. 58ರಷ್ಟು ತುಟ್ಟಿ ಭತ್ಯೆ ಈಗ ಶೇ. 60ರಷ್ಟು ಆಗಲಿದೆ.

8ನೇ ವೇತನ ಆಯೋಗ ಜಾರಿಗೆ ಬರುವ ಮುನ್ನವೇ ತುಟ್ಟಿಭತ್ಯೆಯಲ್ಲಿ ಏರಿಕೆ ಕಂಡಿರುವುದು ಕೇಂದ್ರ ಸರ್ಕಾರಿ ನೌಕರರ ಕಣ್ಣರಳುವಂತೆ ಮಾಡಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಡಿಎ ಏರಿಕೆಯಾಗಬಹುದು ಎಂದುಕೊಂಡಿದ್ದ ಸರ್ಕಾರಿ ನೌಕರರಿಗೆ ಬಹುಬೇಗನೇ ಶುಭ ಸುದ್ದಿ ದೊರಕಿದಂತಾಗಿದೆ.
ಈ ತುಟ್ಟಿಭತ್ಯೆ ಹೆಚ್ಚಳವು ಕೇವಲ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಮಾತ್ರವಲ್ಲದೆ, ಲಕ್ಷಾಂತರ ಪಿಂಚಣಿದಾರರಿಗೂ ಅನ್ವಯವಾಗಲಿದ್ದು, ಅವರ ಆರ್ಥಿಕ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಿದೆ.

ಇದನ್ನೂ ಓದಿ: ರಾಜ್ಯದಲ್ಲೂ ಶೀಘ್ರದಲ್ಲೇ ಬರಲಿದ್ಯಾ ಮಹಾರಾಷ್ಟ್ರ ಮಾದರಿ ರೂಲ್ಸ್: ‘ಕನ್ನಡ್​ ಗೊತ್ತಿಲ್ಲ’ ಎನ್ನುವವರ ಡಿಎಲ್​ ರದ್ದು..!?

ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ, ಸರ್ಕಾರದ ಈ ಕ್ರಮವು ಮಧ್ಯಮ ವರ್ಗದ ನೌಕರರ ಜೀವನಮಟ್ಟವನ್ನು ಸುಧಾರಿಸಲು ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ 8ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬಂದರೆ, ನೌಕರರ ವೇತನ ಶ್ರೇಣಿಯಲ್ಲಿ ಇನ್ನೂ ದೊಡ್ಡ ಮಟ್ಟದ ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories